More

  ತಂತ್ರಜ್ಞಾನದಿಂದ ಕಳೆದು ಹೋಗುತ್ತಿರುವ ಸಂವಹನ

  ಕೋಲಾರ: ತಂತ್ರಜ್ಞಾನದ ಭರಾಟೆಯಲ್ಲಿ ಸಂವಹನ ಕಳೆದು ಹೋಗುತ್ತಿದೆ ಎಂಬ ಆತಂಕಕಾಡುತ್ತಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಿ.ಕೆ.ರವಿ ಕಳವಳವ್ಯಕ್ತಪಡಿಸಿದರು.

  ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​, ಮೈಸೂರು ಸೆಂಟರ್​ ಫಾರ್​ ಕಲ್ಚರ್​ ಕಮ್ಯುನಿಕೇಷನ್​ ಆ್ಯಂಡ್​ ಕ್ರಿಯಿಟಿವಿಟಿ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರೊ.ನಿರಂಜನ ವಾನಳ್ಳಿ ಅವರ “ಸಂವಹನ ಕೌಶಲ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಸಂವಹನ ಕ್ರಿಯೆ ಎಂಬುದು ಜೀವನದ ಭಾಗ. ಅದು ನೂರಕ್ಕೆ ನೂರಷ್ಟು ಸಾಧನೆಯಾಗುವುದಿಲ್ಲ, ಫಲಪ್ರದ ಆಗುವುದಿಲ್ಲ, ಮಾಧ್ಯಮ ಕ್ಷೇತ್ರದಲ್ಲಿ ಸಂವಹನ ತಂತ್ರಜ್ಞಾನ ವೈಭವೀಕರಣ ಆಗುತ್ತಿದೆ. ತಂತ್ರಜ್ಞಾನ ಎಲ್ಲಿ ಹೇಗೆ ಬಳಸಬೇಕು ಎಂಬುದು ಗೊತ್ತಿರಬೇಕು. ಇಲ್ಲದಿದ್ದರೆ ಅನಾಹುತಕ್ಕೆ ಕಾರಣವಾಗುತ್ತದೆ. ಓದುಗರನ್ನು ಗೊಂದಲದಲ್ಲಿ ಮುಳುಗಿಸುವುದು ನಮ್ಮ ಕೆಲಸವಾಗಬಾರದು ಎಂದು ಕಿವಿಮಾತು ಹೇಳಿದರು.
  ನಿರಂಜನ ವಾನಳ್ಳಿ ಅವರು ಕೆಲಸ ಮಾಡಿದ ಕಡೆಯಲ್ಲ ಸಂವಹನ ಕುರಿತು ವಿಭಾಗಗಳನ್ನು ಸ್ಥಾಪನೆ ಮಾಡಿದ್ದಾರೆ. ವಿದೇಶದ ಶಿಕ್ಷಣ ರಾಯಭಾರಿಯಾಗಿ ಕೆಲಸ ನಿರ್ವಹಿಸಿ ಬೆಂಗಳೂರಿಗೆ ವಾಪಸ್​ ಆಗಿದ್ದಾರೆ. ಆದರೂ ಅವರು ಸುದ್ದಿ ಮಾಧ್ಯಮವನ್ನು ಬಿಡಲಿಲ್ಲ. ಹಿಂದೆ ಪಾಠಗಳು ನಡೆಯುತ್ತಿರಲಿಲ್ಲ. ಕನ್ನಡ ಮಾಧ್ಯಮದಲ್ಲಿ ಪುಸ್ತಕಗಳ ರಚನೆ ಮಾಡುತ್ತಿರುವವರ ಸಂಖ್ಯೆ ತೀರಾ ಕಡಿಮೆಯಿತ್ತು. ಮಾಧ್ಯಮ ಶಿಕ್ಷಣ ಕ್ಷೇತ್ರಕ್ಕೆ ಪೂರಕವಾಗಿ ಅಪಾರ ಪುಸ್ತಕಗಳನ್ನು ಬರೆದು ಕೊಡುಗೆಯಾಗಿ ನೀಡಿದ್ದಾರೆ ಎಂದರು.

  ಜೀವನದಲ್ಲಿ ಅತಿ ಮುಖ್ಯ
  ಸಂವಹನ ಕ್ರಿಯೆಯು ಜೀವನದಲ್ಲಿ ಅತಿ ಮುಖ್ಯ. ವೈಜ್ಞಾನಿಕವಾಗಿ ಪುಸ್ತಕದಲ್ಲಿ ಕಾಣಬಹುದು. ಬಳಸುವ ಭಾಷೆ, ವಸ್ತು, ತಲುಪಲು ಇಚ್ಛಿಸುವ ಮನುಷ್ಯನ ಮನಸ್ಥಿತಿ ಹೀಗೆ ಹಲವು ಚಿಂತನೆಗಳು ಅಡಗಿರುತ್ತವೆ. ಒಬ್ಬರಿಂದ ಮತ್ತೊಬ್ಬರಿಗೆ ಸಂವಹನ ತಲುಪಿಸಲು 100ಕ್ಕೆ 100ರಷ್ಟು ಲಪ್ರದವಾಗುವುದಿಲ್ಲ ಎಂದರು. ನೈತಿಕ, ಹೊಣೆಗಾರಿಕೆ ಜವಾಬ್ದಾರಿ ಬಹಳಷ್ಟಿದೆ. ಓದುಗ, ಕೇಳುಗ, ವೀಕ್ಷಿಸುವವರನ್ನು ಹಿಡಿದಿಡುವುದು ಸಂವಹನಕಾರನಿಗೆ ಸವಾಲಿನ ಕೆಲಸ. ಸಂದರ್ಶನ ಮುನ್ನ ವಿಷಯ ಕುರಿತು ಅಧ್ಯಯನ ನಡೆಸಬೇಕು. ಏಕಾಏಕಿಯಾಗಿ ಸಂವಾದಕ್ಕೆ ಹೋದರೆ ಮುಖ ಪ್ರೇಕ್ಷಕರಂತೆ ವರ್ತಿಸಬೇಕಾಗುತ್ತದೆ. ಇದಕ್ಕೂ ಮುಂಚೆ ಪೂರ್ವ ತಯಾರಿಸಿ ನಡೆಸಿಕೊಳ್ಳಬೇಕಾದ ಅಗತ್ಯವಿದೆ. ಸಂವಹನ ಕುರಿತು ಅರಿತುಕೊಳ್ಳಲು ಪುಸ್ತಕವನ್ನು ಪ್ರತಿಯೊಬ್ಬರು ಓದಬೇಕು ಎಂದು ಪ್ರೊ.ಬಿ.ಕೆ.ರವಿ ಕಿವಿಮಾತು ಹೇಳಿದರು.

  ಸಂವಹನ ಕೊರತೆ ಕುಟುಂಬದ ಮೇಲೂ ಪರಿಣಾಮ
  ದೈನಂದಿನ ಜೀವನದಲ್ಲಿ ಸಂವಹನ ಮೈಗೂಡಿಸಿಕೊಳ್ಳಬೇಕು. ಉದಾಸೀನ ಮಾಡಿದರೆ ಬೇರೆ ದಾರಿ ಹುಡುಕಿಕೊಳ್ಳುತ್ತಾರೆ. ಅಮೆರಿಕದ ಟಿವಿ ಮಾಧ್ಯಮಗಳಿಗಿಂತ ಹೆಚ್ಚು ಮಾಧ್ಯಮಗಳು ಭಾರತದಲ್ಲಿವೆ. ಅದರಲ್ಲೂ ಮನೋರಂಜನೆ ನೀಡುವ ಟಿವಿಗಳು ಹೆಚ್ಚು ಅಕರ್ಷಿಸುತ್ತಿವೆ ಎಂದರು. ಕೌಟುಂಬಿಕ ಸಂವಹನ ಎತ್ತ ಸಾಗುತ್ತಿದೆ. ಕುಟುಂಬದ ಸದಸ್ಯರ ನಡುವೆ ಸಂಪರ್ಕ ಸಮರ್ಪಕವಾಗಿಲ್ಲ. ಇದರಿಂದಾಗಿ ಪತನವಾಗುತ್ತಿರುವುದರ ಜತೆಗೆ ಪರಸ್ಪರ ಸಂಬಂಧಗಳು ಕಳಚಿಕೊಂಡು ಹೋಗುತ್ತಿವೆ. ಇಂತಹ ಬೇಸರ ಸಂಗತಿಗಳನ್ನು ನಿಯಂತ್ರಿಸುವ ಸಂವಹನ ವ್ಯಕ್ತವಾಗಬೇಕಾಗಿದೆ ಎಂದು ಬಿ.ಕೆ.ರವಿ ಅಭಿಪ್ರಾಯಪಟ್ಟರು.

  ವೃತ್ತಿಗೆ ಮಾಡುವ ಅಪಚಾರ
  ಬೆಂಗಳೂರು ಉತ್ತರ ವಿವಿ ಕುಲಪತಿ ಹಾಗೂ ಲೇಖಕ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ಸ್ಥಳಿಯ ಭಾಷೆಗಳಲ್ಲಿ ಎಲ್ಲ ವಿಷಯಗಳಲ್ಲಿ ಪಠ್ಯಪುಸ್ತಕ ರಚನೆ ಮಾಡಲು ಕೇಂದ್ರ ಸರ್ಕಾರದ ಸೂಚನೆಯಿದೆ. ಇದರಿಂದಾಗಿ ಯುಜಿಸಿಯು ಕುಲಪತಿಗಳ ಸಮಿತಿ ರಚನೆ ಮಾಡಿದ್ದು, ಸಂಯೋಜಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದೇನೆ ಎಂದರು. ಹಿಂದೆ ಪತ್ರಿಕೆ ಮಾತ್ರವೇ ಮಾಧ್ಯಮ ಆಗಿತ್ತು. ಜನತೆಗೆ ಬೇಕಾಗಿರುವ ವಿಚಾರಗಳ ಬಗ್ಗೆ ಮುಟ್ಟಿಸುತ್ತಿತ್ತು. ಮಾಧ್ಯಮ ಸಂತೆಯಲ್ಲಿ ನಮ್ಮನ್ನು ನಾವು ಕಳೆದುಕೊಂಡಿದ್ದೇವೆ. ವಾಟ್ಸಾಪ್​ ಮಾಡುವ ಸಂವಹನಕ್ಕೆ ಒದಗಿಬಂದ ದುರಂತ, ತಂತ್ರಜ್ಞಾನ ಬಳಸಿಕೊಂಡು ಸತ್ಯ ತಿಳಿಯದೆ ವೃತ್ತಿಗೆ ಮಾಡುವ ಅಪಚಾರಗಳು ಸಂಭವಿಸುತ್ತಿವೆ ಎಂದು ವಿಷಾದಿಸಿದರು.

  ಸಂವಹನ ಮಾದರಿಗಳ ಅರಿವು ಅಗತ್ಯ
  ಪತ್ರಕರ್ತರ ಸಹಕಾರ ಸಂದ ಅಧ್ಯಕ್ಷ ಕೆ.ಎಸ್​.ಗಣೇಶ್​ ಮಾತನಾಡಿ, ಸಂವಹನ ಎಂಬುದು ಪ್ರತಿಯೊಬ್ಬರ ಜೀವನದ ಸಹಜ ಕ್ರಿಯೆ ಆಗಿದೆ. ಎಷ್ಟು ಸರಳವೊ, ಅಷ್ಟೆ ಕ್ಲಿಷ್ಟಕರವು ಹೌದು. ಸಾಧಕ ನಾಯಕನಾಗಿ ಹೊರಹೊಮ್ಮಲು ಸಂವನಹ ಅತಿ ಮುಖ್ಯ ಎಂದು ಹೇಳಿದರು. ಸಂವಹನದಲ್ಲಿ ಹಲವು ಮಾದರಿಗಳಿದ್ದು ಅರಿವು ಪಡೆದುಕೊಳ್ಳಬೇಕು. ಅರಿಸ್ಟಾಟಲ್​ ಹಿಂದೆಯೇ ಸಂವಹನ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಸಂವಹನ ಕೌಶಲ ಪುಸ್ತಕ ಓದಿದರೆ ಜೀವನ ಸದೃಢವಾಗುತ್ತದೆ ಎಂದರು ತಿಳಿಸಿದರು.
  ಇದೇ ಸಂದರ್ಭದಲ್ಲಿ ಪುಸ್ತಕದ ಪ್ರಥಮ ಪ್ರತಿಯನ್ನು ಮುಖಂಡ ಸಿಎಂಆರ್​ ಶ್ರೀನಾಥ್​ ಅವರಿಗೆ ಪ್ರೊ.ಬಿ.ಕೆ.ರವಿ ವಿತರಿಸಿದರು. ಕಸಾಪ ಜಿಲ್ಲಾಧ್ಯಕ್ಷ ಗೋಪಾಲಗೌಡ ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts