More

    ಐಟಿ ಕ್ಷೇತ್ರ ಕೋಮುವಾದಕ್ಕೆ ಸಿಲುಕಿದ್ರೆ… ಸಿಎಂ ಬೊಮ್ಮಾಯಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಬಯೋಕಾನ್​ ಮುಖ್ಯಸ್ಥೆ

    ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಬಯೋಕಾನ್​ ಮುಖ್ಯಸ್ಥೆ ಕಿರಣ್ ಮಜುಂದಾರ್​ ಷಾ ಅಸಮಾಧಾನ ಹೊರಹಾಕಿದ್ದು, ರಾಜ್ಯದಲ್ಲಿ ಬೆಳೆಯುತ್ತಿರುವ ಧಾರ್ಮಿಕ ವಿಭಜನೆಯನ್ನು ತಕ್ಷಣ ಸರಿಪಡಿಸಿ, ಒಂದು ವೇಳೆ ತಾಂತ್ರಿಕ ವಲಯವೇನಾದರೂ ಕೋಮುವಾದಕ್ಕೆ ಸಿಲುಕಿದರೆ ಭಾರತದ ಜಾಗತಿಕ ನಾಯಕತ್ವವೇ ನಾಶವಾಗಲಿದೆ ಎಂದು ಎಚ್ಚರಿಸಿದ್ದಾರೆ.

    ದೇವಸ್ಥಾನದ ಆವರಣದಲ್ಲಿ ಹಿಂದೂಯೇತರರು ವ್ಯಾಪಾರ ಮಾಡುವುದನ್ನು ನಿರ್ಬಂಧಿಸುವ ಹಳೆಯ ನಿಯಮವನ್ನು ಕರ್ನಾಟಕ ಸರ್ಕಾರವು ಉಲ್ಲೇಖಿಸಿದ್ದ ಕೆಲವು ದಿನಗಳ ನಂತರ ಕಿರಣ್ ಷಾ ಅವರು ಸಾರ್ವಜನಿಕವಾಗಿ ಕಳವಳ ವ್ಯಕ್ತಪಡಿಸಿದ್ದು, ಈ ವಿಚಾರದ ಬಗ್ಗೆ ಧ್ವನಿ ಎತ್ತಿದ ಮೊದಲ ದೊಡ್ಡ ಕಾರ್ಪೊರೇಟ್ ನಾಯಕರಾಗಿದ್ದಾರೆ.

    ಕರ್ನಾಟಕವು ಯಾವಾಗಲೂ ಅಂತರ್ಗತ ಆರ್ಥಿಕ ಅಭಿವೃದ್ಧಿಯನ್ನು ಹೊಂದಿದೆ ಮತ್ತು ನಾವು ಕೋಮುವಾದವನ್ನು ನಮ್ಮೊಳಗೆ ಬಿಟ್ಟುಕೊಳ್ಳಬಾರದು. ಒಂದು ವೇಳೆ ಐಟಿಬಿಟಿ (ಐಟಿ ಮತ್ತು ಬಯೋಟೆಕ್) ಕ್ಷೇತ್ರ ಕೋಮುವಾದವಾದರೆ ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ. ಬಸವರಾಜ ಬೊಮ್ಮಾಯಿ ಅವರೇ ಬೆಳೆಯುತ್ತಿರುವ ಧಾರ್ಮಿಕ ವಿಭಜನೆಯನ್ನು ದಯವಿಟ್ಟು ಪರಿಹರಿಸಿ ಎಂದು ಕಿರಣ್​ ಷಾ ಟ್ವೀಟ್ ಮಾಡಿದ್ದಾರೆ.

    ಟ್ವಿಟರ್​ ಬಳಕೆದಾರರೊಬ್ಬರ ಟ್ವೀಟ್​ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರ ಟ್ವಿಟರ್ ಖಾತೆಯನ್ನು ಕಿರಣ್​ ಷಾ ಅವರು ಟ್ಯಾಗ್​ ಮಾಡಿ ಟ್ವೀಟ್​ ಮಾಡಿದ್ದಾರೆ. ಸರ್ಕಾರವೇ ಈ ಕೋಮು ವಿಭಜನೆಯನ್ನು ಹೆಚ್ಚಿಸುತ್ತಿದ್ದಾರೆ ಮತ್ತು ಕರ್ನಾಟಕವು ನಮ್ಮ ಕಣ್ಣುಗಳ ಮುಂದೆಯೇ ವಿಫಲಗೊಳ್ಳುತ್ತಿದೆ ಎಂದು ಟ್ವಿಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಕಿರಣ್​ ಷಾ ಅವರು ನಮ್ಮ ಸಿಎಂ ಅತ್ಯಂತ ಪ್ರಗತಿಪರ ನಾಯಕ. ಅವರು ಶೀಘ್ರದಲ್ಲೇ ಈ ಸಮಸ್ಯೆಯನ್ನು ಪರಿಹರಿಸುತ್ತಾರೆ ಎಂಬ ಖಾತ್ರಿ ನನಗಿದೆ ಎಂದಿದ್ದಾರೆ.

    ಇನ್ನು ಕರ್ನಾಟಕವು ತಿಂಗಳಿನಿಂದ ಕೋಮು ವಿಭಜನೆಯ ಸಾಲು ಸಾಲು ಸಂಘರ್ಷಗಳೊಂದಿಗೆ ಹೋರಾಡುತ್ತಿದೆ. ಇತ್ತೀಚೆಗಷ್ಟೇ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದಂತಹ ಗುಂಪುಗಳು ದೇವಸ್ಥಾನದ ಸಂಕೀರ್ಣಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿವೆ. ಯಾವುದೇ ನಿಷೇಧವಿಲ್ಲದಿದ್ದರೂ ಕೆಲವು ದೇವಸ್ಥಾನಗಳು ಮುಸ್ಲಿಂ ವ್ಯಾಪಾರಿಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಈಗ ನಡೆಯುತ್ತಿರುವ ಅಭಿಯಾನವು ಕಾರಣವಾಗಿದೆ ಎಂದು ತಿಳಿದುಬಂದಿದೆ.

    ಹಿಜಾಬ್​ ವಿವಾದದ ಕುರಿತು ತೀರ್ಪು ಬಂದ ಬಳಿಕ ಹೈಕೋರ್ಟ್​ ಆದೇಶವನ್ನು ಗೌರವಿಸಿದೇ ಅದರ ವಿರುದ್ಧ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದ ಬಳಿಕ ಈ ಬೆಳವಣಿಗೆ ನಡೆಯುತ್ತಿದೆ. ಹಿಜಾಬ್​ ಅಗತ್ಯ ಧಾರ್ಮಿಕ ಆಚರಣೆಯಲ್ಲ. ಶಾಲೆ-ಕಾಲೇಜುಗಳಲ್ಲಿ ಯಾವುದೇ ಕಾರಣಕ್ಕೂ ಧರ್ಮವನ್ನು ಪ್ರತಿಬಿಂಬಿಸುವ ಉಡುಪು ಧರಿಸಬಾರದು ಎಂದು ಕೋರ್ಟ್​ ತೀರ್ಪು ನೀಡಿತ್ತು. ಇದನ್ನು ಒಪ್ಪದ ಮುಸ್ಲಿಂ ಸಮುದಾಯ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ಇದರ ನಡುವೆ ರಾಜ್ಯದಲ್ಲಿ ಬೇಸರ ತರಿಸುವ ಘಟನೆಗಳು ನಡೆಯುತ್ತಿವೆ. (ಏಜೆನ್ಸೀಸ್​)

    ನನ್ನ ರಾಜಕೀಯದ ನಿರ್ಧಾರಕ್ಕೆ ಈಗ ಪಶ್ಚತಾಪ ಪಡುತ್ತಿದ್ದೇನೆ ಅದಕ್ಕೆ ಕಾರಣ ತಾಪ್ಸಿ ಪನ್ನು ಎಂದ ಮೆಗಾಸ್ಟಾರ್​!

    ಬಸ್​ನಲ್ಲಿ ಅನುಚಿತವಾಗಿ ವರ್ತಿಸಿದ ಕಾಮುಕನಿಗೆ ಸ್ಥಳದಲ್ಲೇ ಬಿಗ್​ ಶಾಕ್​ ಕೊಟ್ಟ ದಿಟ್ಟ ಯುವತಿ

    ಪ್ರತಿ ಕಿ.ಮೀಗೆ ಕೇವಲ 2 ರೂ. ವೆಚ್ಚ: ಸಂಸತ್ತಿಗೆ ಸಾರಿಗೆ ಸಚಿವರು ಬಂದಿಳಿದ ಹೈಡ್ರೋಜನ್​ ಕಾರಿನ ವಿಶೇಷತೆ ಹೀಗಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts