More

    ಕಾಮನ್​ವೆಲ್ತ್​ ಗೇಮ್ಸ್​: ಪಾಕ್​​ಗೆ ಮೊದಲ ಚಿನ್ನ ತಂದುಕೊಟ್ಟ ಕ್ರೀಡಾಪಟುವಿಗೆ ಭಾರತದ ವೇಟ್ ಲಿಫ್ಟರ್ ಪ್ರೇರಣೆಯಂತೆ!

    ಲಂಡನ್: ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್​ನಲ್ಲಿಂದು ಪಾಕಿಸ್ತಾನದ ಮುಹಮ್ಮದ್ ನೂಹ್ ಚೊಚ್ಚಲ ಚಿನ್ನ ಗೆದ್ದರು. ಪುರುಷರ 109 ಕೆಜಿ ವೇಟ್ ಲಿಫ್ಟಿಂಗ್​ ವಿಭಾಗದಲ್ಲಿ 405 ಕೆಜಿ ಭಾರ ಎತ್ತುವ ಮೂಲಕ ಪಾಕ್​ ಕ್ರೀಡಾಪಟು ಈ ಸಾಧನೆ ಮಾಡಿದರು.

    ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ 24 ವರ್ಷದ ಈ ಕ್ರೀಡಾಳುವಿಗೆ ಭಾರತದ ವೇಟ್ ಲಿಫ್ಟರ್ ಮೀರಾಬಾನು ಚಾನು ಪ್ರೇರಣೆಯಂತೆ. “ಕಳೆದ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಮೀರಾ ಬಾಯಿ ಬೆಳ್ಳಿ ಗೆದ್ದಿದ್ದು ನನ್ನಲ್ಲಿ ಹೆಮ್ಮೆ ಉಂಟು ಮಾಡಿತ್ತು. ದಕ್ಷಿಣ ಏಷ್ಯಾ ರಾಷ್ಟ್ರಗಳಿಂದ ಬರುವ ನಾವೂ ಸಹ ಪದಕ ಗೆಲ್ಲಬಲ್ಲೆವು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ” ಎಂದರು.

    2015ರಲ್ಲಿ ಪುಣೆಯಲ್ಲಿ ನಡೆದ ಯೂತ್ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾಗಿಯಾಗಿರುವುದನ್ನು ಮೆಲುಕು ಹಾಕಿದ ಮುಹಮ್ಮದ್, 2016ರಲ್ಲಿ ಗುವಾಹಟಿಯಲ್ಲಿ ಆಯೋಜನೆಗೊಂಡಿದ್ದ ಸೌತ್ ಏಷ್ಯನ್​ ಗೇಮ್ಸ್​​ ಬಗ್ಗೆಯೂ ಮಾತನಾಡಿದರು. ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನನಗೆ ಅಪಾರ ಪ್ರೀತಿ ಹಾಗೂ ಬೆಂಬಲ ಸಿಕ್ಕಿದೆ ಎಂದು ಹೇಳಿದರು. ಭಾರತಕ್ಕೆ ಮತ್ತೊಮ್ಮೆ ಹೋಗಬೇಕೆಂದಿರುವ ಅವರು, ಪಾಕಿಸ್ತಾನದಲ್ಲಿರುವ ಅಭಿಮಾನಿಗಳಿಗಿಂತಲೂ ಹೆಚ್ಚಿನ ಅಭಿಮಾನಿಗಳು ನನಗೆ ಭಾರತದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

    ಲಂಚಕ್ಕೆ ಬೇಡಿಕೆ ಇಟ್ಟು ಎಸಿಬಿ ಬಲೆಗೆ ಬಿದ್ದ ತೋಟಗಾರಿಕೆ ಇಲಾಖೆಯ ತೋಟಯ್ಯ

    ಭಾರೀ ಮಳೆ ಹಿನ್ನೆಲೆ, ಈ ಜಿಲ್ಲೆಯ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts