More

    ವಿಮೆ ಮಂಜೂರಾತಿಗೆ ಆದೇಶಿಸಿದ ಆಯೋಗ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಅಪಘಾತವಾದ ಕಾರು ದುರಸ್ತಿಗೆ ವಿಮೆ ಪರಿಹಾರ 3 ಲಕ್ಷ ರೂ. ಮಂಜೂರು ಮಾಡುವಂತೆ ಜಿಲ್ಲಾ ಗ್ರಾಹಕರ ಆಯೋಗ ವಿಮಾ ಕಂಪನಿಗೆ ನಿರ್ದೇಶನ ನೀಡಿ ಶುಕ್ರವಾರ ಆದೇಶ ಹೊರಡಿಸಿದೆ.
    ಮಂಜುನಾಥ ಮಡಿವಾಳ ಎಂಬುವವರು 2021ರ ಏ. 18ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಜೋಯಿಡಾ ತಾಲೂಕಿನ ಅನ್​ಮೋದ ಆರ್​ಟಿಒ ಚೆಕ್​ ಪೋಸ್ಟ್​ ಬಳಿ ಅಪಘಾತ ಸಂಭವಿಸಿ ಕಾರು ಜಖಂಗೊಂಡಿತ್ತು. ಈ ಕುರಿತು ರಾಮನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ವಾಹನ ದುರಸ್ತಿ ಖಚಿರ್ನ ಎಲ್ಲ ದಾಖಲೆಗಳನ್ನು ಎಚ್​ಡಿಎ್​ಸಿ ವಿಮಾ ಕಂಪನಿಗೆ ನೀಡಿ ವಿಮೆ ಮಂಜೂರಿಗೆ ಕೇಳಿಕೊಂಡಿದ್ದರು. ಆದರೆ ವಿಮಾ ಕಂಪನಿ ಕ್ಲೇಮ್​ ಕೊಟ್ಟಿರಲಿಲ್ಲ. ಹೀಗಾಗಿ ಗ್ರಾಹಕರ ರಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು 2023ರ ಏ. 18ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
    ಆಯೋಗದ ಅಧ್ಯ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ದೂರಿನ ವಿಚಾರಣೆ ನಡೆಸಿ, ಮಂಜುನಾಥ ಅವರು 9,079 ರೂ. ಪ್ರೀಮಿಯಂ ಕಟ್ಟಿ ಪಾಲಸಿ ಪಡೆದಿದ್ದಾರೆ. ವಾಹನ ಅಪಘಾತ ದಿನದಂದು ಪಾಲಸಿ ಚಾಲ್ತಿಯಿಲ್ಲಿದೆ. ಅಪಘಾತವಾದಾಗ ವಾಹನಕ್ಕೆ ಆಗಬಹುದಾದ ನಷ್ಟ ಪರಿಹಾರಕ್ಕೆ ವಿಮಾ ಮಾಡಿಸಲಾಗುತ್ತದೆ. ಆದರೆ ಸೂಕ್ತ ದಾಖಲೆ ನೀಡಿದರೂ ವಿಮಾ ಹಣ ಕೊಡದಿರುವುದು ಗ್ರಾಹಕ ರಣಾ ಕಾಯಿದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟ ಆಯೋಗ, ಪಾಲಸಿ ನಿಯಮದಂತೆ 3 ಲ ರೂ. ಪರಿಹಾರ, ದೂರುದಾರರಿಗೆ ಆಗಿರುವ ಅನನುಕೂಲ ಹಾಗೂ ಮಾನಸಿಕ ತೊಂದರೆಗೆ 10,000 ರೂ. ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ವಿಮಾ ಕಂಪನಿಗೆ ನಿರ್ದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts