More

    ಸಿಎಂ ಉದ್ಘಾಟಿಸಿದ ಮರುದಿನವೇ ಕಿತ್ತು ಬಂದ ಕಲ್ಲು! ಕಮರ್ಷಿಯಲ್ ಸ್ಟ್ರೀಟ್ ಕಳಪೆ ಕಾಮಗಾರಿ ಬೆಳಕಿಗೆ

    ಬೆಂಗಳೂರು: ಶಿವಾಜಿನಗರದಲ್ಲಿ 5.4 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ ಕಮರ್ಷಿಯಲ್ ಸ್ಟ್ರೀಟ್ ಕಾಮಗಾರಿ ಸಿಎಂ ಯಡಿಯೂರಪ್ಪ ಅವರು ಚಾಲನೆ ನೀಡಿದ ಒಂದೇ ದಿನದಲ್ಲಿ ಕಿತ್ತುಹೋಗಿದೆ.

    ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ಅನ್ನು ಸುಮಾರು 150 ವರ್ಷಗಳ ನಂತರ ದೊಡ್ಡ ಮೊತ್ತದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ 2020ರಲ್ಲಿ 5.4 ಕೋಟಿ ರೂ ವೆಚ್ಚದಲ್ಲಿ, 450 ಮೀ ಉದ್ದದ ಕಮರ್ಷಿಯಲ್ ಸ್ಟ್ರೀಟ್ ಅಭಿವೃದ್ಧಿ ಮಾಡುವ ಕಾಮಗಾರಿ ಕೈಗೆತ್ತಿಕೊಂಡಿತ್ತು. ಆದರೆ, ಕೋವಿಡ್ ಕಾರಣದಿಂದ ಕಾಮಗಾರಿ ಕುಂಟುತ್ತಾ ಸಾಗಿತ್ತು. ಸಿಎಂ ಸೂಚನೆ ಮೇರೆಗೆ ತರಾತುರಿಯಲ್ಲಿ ಕಾಮಗಾರಿ ಮುಗಿಸಿ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಉದ್ಘಾಟನೆ ಮಾಡಲು ಸಜ್ಜುಗೊಳಿಸಿದರು. ಅಲ್ಲಿನ ವ್ಯಾಪಾರಿಗಳು ಉದ್ಘಾಟನೆ ದಿನವೇ ಕಳಪೆ ಕಾಮಗಾರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ಶುಕ್ರವಾರ ಮಧ್ಯಾಹ್ನ ಸಿಎಂ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆ ಮಾಡಿದ್ದು, ಮರುದಿನ (ಶನಿವಾರ) ಸುರಿದ ಮಳೆಯಿಂದ ಕಾಮಗಾರಿ ಕಿತ್ತುಕೊಂಡು ಬಂದಿದೆ. ಕಳಪೆ ಕಾಮಗಾರಿ ಮಾಡಿರುವುದು ಬೆಳಕಿಗೆ ಬಂದಿದೆ.

    ಉತ್ತರ ಕನ್ನಡ ಪ್ರವಾಹ: ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಚಿವ ಶಿವರಾಮ ಹೆಬ್ಬಾರ್

    ಹನುಮಾನ್ ಚಾಲಿಸ ಪಠಿಸುತ್ತ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts