More

    ಡ್ರಗ್ಸ್​ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್​ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆ

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವಿನೊಂದಿಗೆ ಆರಂಭವಾದ ಬಾಲಿವುಡ್​ ಡ್ರಗ್ಸ್​ ಪ್ರಕರಣ ಹಲವಾರು ತಿರುವುಗಳನ್ನು ಪಡೆದುಕೊಂಡಿದೆ. ನಟಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್​ರಂತಹ ಪ್ರಸಿದ್ಧರನ್ನೂ ಸಹ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೋರ್ವ ಪ್ರಸಿದ್ಧ ಹಾಸ್ಯ ನಟಿ ಮತ್ತು ಆಕೆಯ ಪತಿಯನ್ನು ಎನ್​ಸಿಬಿ ವಿಚಾರಣೆಗೆ ವಳಪಡಿಸಿದೆ.

    ಇದನ್ನೂ ಓದಿ: ಡಿಸೆಂಬರ್ ಮೊದಲ ವಾರದಲ್ಲಿ ಹೊಸ ಬಿಪಿಎಲ್, ಎಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರು

    ಡ್ರಗ್ಸ್​ ಪ್ರಕರಣದಲ್ಲಿ ಪ್ರಸಿದ್ಧ ಹಾಸ್ಯ ನಟಿ ದಂಪತಿ ಭಾಗಿ? ಎನ್​ಸಿಬಿ ಅಧಿಕಾರಿಗಳಿಂದ ದಂಪತಿಯ ವಿಚಾರಣೆಕಪಿಲ್​ ಶರ್ಮಾ ಕಾಮಿಡಿ ಶೋ ನೋಡಿದವರಿಗೆ ಭಾರ್ತಿ ಸಿಂಗ್​ ಅವರ ಪರಿಚಯವಿರುತ್ತದೆ. ತಮ್ಮ ಮಾತುಗಳಿಂದಲೇ ಎಲ್ಲರನ್ನೂ ನಗಿಸಬಲ್ಲ ಪ್ರತಿಭೆ ಇರುವ ನಟಿ ಅವರು. ಬಾಲಿವುಡ್​ ಸೇರಿ ದೇಶದ ಹಲವಾರು ಭಾಷೆಯ ಸಿನಿಮಾ ರಂಗದಲ್ಲೂ ಆಕೆಯ ಅಭಿಮಾನಿಗಳಿದ್ದಾರೆ. ಇದೀಗ ಅದೇ ನಟಿಯ ಸುತ್ತ ಡ್ರಗ್ಸ್​ ವಾಸನೆ ಸಿಕ್ಕಿರುವುದಾಗಿ ತಿಳಿಸಲಾಗಿದೆ.

    ಶನಿವಾರ ಬೆಳಗ್ಗೆ ಭಾರ್ತಿ ಅವರ ಮನೆಯ ಮೇಲೆ ಎನ್​ಸಿಬಿ ದಾಳಿ ನಡೆಸಿದೆ. ಡ್ರಗ್ಸ್​ ಪೆಡ್ಲರ್​ ಒಬ್ಬರ ಬಾಯಿಯಲ್ಲಿ ಭಾರ್ತಿ ಅವರ ಪತಿ ಹರ್ಷ್​ ಅವರ ಹೆಸರು ಕೇಳಿಬಂದಿದೆ. ಅದೇ ಹಿನ್ನೆಲೆಯಲ್ಲಿ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ. ಮನೆಯಲ್ಲಿ ಶೋಧ ನಡೆಸಿದಾಗ ಸಣ್ಣ ಪ್ರಮಾಣದ ಕನ್ನಾಬಿಸ್​ ಸಿಕ್ಕಿರುವುದಾಗಿ ತಿಳಿಸಲಾಗಿದೆ. ಆ ಕಾರಣ ದಂಪತಿಯನ್ನು ಎನ್​ಸಿಬಿ ತಮ್ಮ ಕಚೇರಿಗೆ ವಿಚಾರಣೆಗೆ ಕರೆದೊಯ್ದಿದೆ.

    ಇದನ್ನೂ ಓದಿ: ಬಿಕಿನಿಯಲ್ಲಿ ಮಗಳು, ಫೋಟೋ ಕ್ಲಿಕ್ಕಿಸಿದ ಅಪ್ಪ; ವಿಟಮಿನ್-ಡಿಗಾಗಿ ಮೈಯೊಡ್ಡಿದ ನಟಿ…

    ಡ್ರಗ್ಸ್​ ಪ್ರಕರಣದಲ್ಲಿ ಈಗಾಗಲೇ ಸಾಕಷ್ಟು ನಟ ನಟಿಯರನ್ನು ಎನ್​ಸಿಬಿ ವಿಚಾರಿಸಿದೆ. ಈ ಹಿಂದೆ ಅರ್ಜುನ್​ ರಾಂಪಲ್​ ಅವರ ಮನೆಯಲ್ಲಿ ಶೋಧ ನಡೆಸಿ ಅವರನ್ನೂ ವಿಚಾರಣೆ ನಡೆಸಲಾಗಿತ್ತು. (ಏಜೆನ್ಸೀಸ್​)

    ರಾಜ್ಯಧಾನಿ ಸಮೀಪ ಅಗ್ನಿ ದುರಂತ! ಹೊತ್ತಿ ಉರಿಯುತ್ತಿದೆ ಕೆಮಿಕಲ್ ಫ್ಯಾಕ್ಟರಿ

    ನ್ಯಾಯ ಬೇಡಿ ಮನೆ ಬಾಗಿಲಿಗೆ ಬಂದ ಶಾಸಕನಿಗೆ ಶಿಸ್ತು ಸಮಿತಿಯತ್ತ ಬೆರಳು ತೋರಿಸಿ ಡಿಕೆಶಿ ಎಸ್ಕೇಪ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts