More

    ಸಾಸ್ತಾನದಲ್ಲೊಂದು ಬಗೆಬಗೆ ನಾಣ್ಯ, ಅಂಚೆಚೀಟಿ ಲೋಕ

    ಕೋಟ: ಇಲ್ಲಿನ ಸಾಸ್ತಾನದ ನಿವಾಸಿ ಬಿ.ಚಕ್ರಪಾಣಿ ಅಡಿಗರ ನಾಣ್ಯ ಹಾಗೂ ಅಂಚೆಚೀಟಿ ಸಂಗ್ರಹದ ಕರಾಮತ್ತು ನೋಡುಗರನ್ನು ಆಕರ್ಷಿಸುತ್ತಿದೆ. ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಬಿ.ಚಕ್ರಪಾಣಿ ಅಡಿಗ ಮನೆಯಲ್ಲಿ ಹಲವು ವರ್ಷಗಳಿಂದ ಹಳೇ ಕಾಲದ ನಾಣ್ಯ, ನೋಟು ಹಾಗೂ ಅಂಚೆಚೀಟಿಯ ಸಂಗ್ರಹಿಸಿ, ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದೆ.

    1940ಕ್ಕಿಂತ ಹಿಂದೆ ಇದ್ದ ಒಟ್ಟೆ ನಾಣ್ಯದಿಂದ ಹಿಡಿದು ಈಗಿನ 20 ರೂ. ನಾಣ್ಯ ವರೆಗೆ ಶೇಖರಿಸಿ ಅದಕ್ಕೊಂದು ಪುಸ್ತಕದ ಲೇಪ ಹಚ್ಚಿದ್ದಾರೆ. ಸಾಮಾನ್ಯವಾಗಿ ಇಂದು ಕಾಣುವ ಬಣ್ಣ ಲೇಪಿತ ನಾಣ್ಯಗಳ ಸಂತೆಯಲ್ಲಿ ಆಗಿನ ಕಾಲದ ತಾಮ್ರ, ಬೆಳ್ಳಿ, ಕಂಚು, ನಿಕ್ಕಲ್, ನಾಣ್ಯಗಳನ್ನು ಶೇಖರಿಸಿ ಈಗಿನ ಯುವ ಸಮುದಾಯಕ್ಕೆ ಹೀಗೊಂದು ನಾಣ್ಯಗಳ ಕಾಲವಿತ್ತು ಎನ್ನುವ ಅರಿವು ಮೂಡಿಸಲು ಅಣಿಯಾಗಿದ್ದಾರೆ. ದೇಶದಲ್ಲಿ ಆಗಿನ ಕಾಲದಲ್ಲಿ ಅತಿ ಹೆಚ್ಚು ವರ್ಷ ಬಿಡುಗಡೆಗೊಂಡ ನಾಣ್ಯಗಳ ಪಾಲು ಐದು ಪೈಸೆಯದು. ನಿರಂತರ ಒಂಬತ್ತು ವರ್ಷಗಳು ಬಿಡುಗಡೆಗೊಂಡ ಐದು ಪೈಸೆಯ ನಾಣ್ಯಗಳನ್ನು ಶೇಖರಿಸಿ ದಾಖಲೆ ಸೃಷ್ಟಿಸಿದ್ದಾರೆ.
    ಒಂದು ರೂಪಾಯಿಯಿಂದ 2 ಸಾವಿರ ರೂ.ಗಳ ನೋಟ್ ಸಂಗ್ರಹಿಸಿದ ಹೆಗ್ಗಳಿಕೆ. ಅದರ ಜತೆ ವಿದೇಶಿ ನೋಟ್‌ಗಳ ಸಂಗ್ರಹ, ಬಾಲಗಂಗಾಧರ ತಿಲಕ್ ಎನ್ನುವ 5 ರೂ. ನಾಣ್ಯ ಬಿಡುಗಡೆಗೊಂಡು ನಂತರ ವಿವಾದಗೊಂಡ ಹಿನ್ನೆಲೆಯಲ್ಲಿ ಆ ನಾಣ್ಯವನ್ನು ಸರ್ಕಾರ ಹಿಂಪಡೆದಿತ್ತು. ಅದರ ಒಂದು ನಾಣ್ಯ ಅಡಿಗರು ಶೇಖರಿಸಿ ಇಟ್ಟಿದ್ದಾರೆ. ಇದರ ಜತೆ ಕೆನಡಾದ ಚಿನ್ನದ ನಾಣ್ಯ ವಿಶೇಷವಾಗಿ ಕಾಣಬಹುದಾಗಿದೆ.

    ವಿದೇಶದ ನೋಟ್ ನಾಣ್ಯಗಳ ಶೇಖರಣೆ
    ಭಾರತೀಯ ಪುರಾತನ ನಾಣ್ಯಗಳ ಸಂಗ್ರಹವಲ್ಲದೆ ಅಮೆರಿಕ, ಸೌದಿ ಅರೇಬಿಯಾ, ಇಟಲಿ, ಫ್ರಾನ್ಸ್, ಬ್ರಿಟನ್, ಕೆನಡಾ, ಹಾಂಕಾಂಗ್, ಮಲೇಷ್ಯಾ, ಬೆಹರೈನ್, ನೇಪಾಳ ಹೀಗೆ 25ಕ್ಕೂ ಅಧಿಕ ದೇಶಗಳ ನಾಣ್ಯ, ನೋಟ್‌ಗಳನ್ನು ಚಕ್ರಪಾಣಿ ಸಂಗ್ರಹಿಸಿದ್ದಾರೆ.

    ವಿಧವಿಧದ ಸ್ಟಾಂಪ್ ಇಲ್ಲಿದೆ
    ಅಡಿಗರು ನಾಣ್ಯಗಳಲ್ಲದೆ ದೇಶದ ಎಲ್ಲ ತರಹದ ಸ್ಟಾಂಪ್‌ಗಳ ಸಂಗ್ರಹವೂ ಅಡಿಗರಲ್ಲಿದೆ. ಅಂಚೆ ಇಲಾಖೆಯ ಫಿಲಾಟ್ ಸದಸ್ಯತ್ವ ಹೊಂದಿದ ಉಡುಪಿ ಜಿಲ್ಲೆಯ ಏಕೈಕ ವ್ಯಕ್ತಿಯಾಗಿ ಚಕ್ರಪಾಣಿ ಅಡಿಗರು. ದೇಶದಲ್ಲಿ ಯಾವುದೇ ತರಹದ ಅಂಚೆಚೀಟಿ ಬಿಡುಗಡೆಯಾದರೆ ಮೊದಲು ಅಡಿಗರ ಕೈ ಸೇರುತ್ತದೆ. ಶಾಲಾ ಕಾಲೇಜು ಇನ್ನಿತರ ಮೇಳಗಳಲ್ಲಿರಿಸಿ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.

    ನಾಣ್ಯ ಹಾಗೂ ಅಂಚೆ ಚೀಟಿ ಸಂಗ್ರಹಿಸುವುದು ಹವ್ಯಾಸವಾಗಿದೆ. ಇದೊಂದು ಕಷ್ಟಕರ ಕೆಲಸವಾದರೂ ಸಂಗ್ರಹಿಸಿ, ಜೋಪಾನವಾಗಿ ಇರಿಸಿ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವ ಉದ್ದೇಶ ನನ್ನದಾಗಿದೆ.
    ಬಿ. ಚಕ್ರಪಾಣಿ ಅಡಿಗ
    ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ

    ಚಕ್ರಪಾಣಿ ಅಡಿಗರ ನಾಣ್ಯ, ಅಂಚೆಚೀಟಿ ಸಂಗ್ರಹದ ತಾಳ್ಮೆಗೆ ಸೆಲ್ಯೂಟ್. ಸಂಗ್ರಹಿಸುವುದೇ ದೊಡ್ಡ ಕೆಲಸವಾದರೂ ಪ್ರತಿ ದಿನ ಅದನ್ನು ಸ್ವಚ್ಛಗೊಳಿಸಿ ಪುನಹ ಪುಸ್ತಕದಲ್ಲಿ ಇರಿಸುವ ಇವರ ಕಾಯಕ ಅಭಿನಂದನೀಯ.
    ವಿನಯ್ ಕಬ್ಯಾಡಿ
    ಸ್ಥಳೀಯರು ಗುಂಡ್ಮಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts