More

    ಇತಿಹಾಸ ತಿಳಿಸುವ ಹಳೆಯ ನಾಣ್ಯಗಳು

    ಕಲಘಟಗಿ: ಪುರಾತನ ಕಾಲದ ನಾಣ್ಯಗಳು, ಇತಿಹಾಸದ ಪರಂಪರೆಯ ಜತೆಗೆ ಇಂದಿನ ವಿದ್ಯಾರ್ಥಿಗಳಿಗೆ ಅಂದಿನ ಕಾಲದ ಸಂಸ್ಕೃತಿಯನ್ನು ತಿಳಿಸುತ್ತವೆ ಎಂದು ಪ್ರಾಚಾರ್ಯ ಎಸ್.ಎಂ. ಮರಲಿಂಗಣ್ಣವರ ಹೇಳಿದರು.
    ತಾಲೂಕಿನ ಬಗಡಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಿಶ್ರಿಕೋಟಿಯ ಶಿವಪ್ಪಣ್ಣ ಜಿಗಳೂರು ಸಂಯುಕ್ತ ಪದವಿಪೂರ್ವ ಕಾಲೇಜ ವತಿಯಿಂದ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ಶಿಬಿರದಲ್ಲಿ ಏರ್ಪಡಿಸಿದ್ದ ಹಳೆಯ ನಾಣ್ಯಗಳು ಮತ್ತು ನೋಟುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
    ಅಂದಿನ ಕಾಲದ ನಾಣ್ಯಗಳು ಇಂದಿನ ಯುವಕರಿಗೆ ಮಾಹಿತಿ ಒದಗಿಸಿಕೊಡುವ ಸಾಧನವಾಗಿವೆ. ಹಳೆಯ ಭಾರತೀಯ ನಾಣ್ಯಗಳ ಮೇಲಿನ ಶಾಸನಗಳು ಮರೆತುಹೋದ ರಾಜವಂಶವನ್ನು ತಿಳಿಸುತ್ತವೆ. ವಿವಿಧ ದೇಶದ ನಾಣ್ಯಗಳ ಮೇಲೆ ಆಯಾ ದೇಶದ ರಾಜ-ರಾಣಿ ಹಾಗೂ ಪ್ರಾಣಿ, ಪಕ್ಷಿ, ಐತಿಹಾಸಿಕ ಸ್ಥಳಗಳ ಮುದ್ರಿಸಿವೆ. ಇದರಿಂದ ಆಯಾ ಕಾಲಘಟ್ಟದ ಮಹತ್ವವನ್ನು ತಿಳಿಯಲು ಸಹಕಾರಿಯಾಗುತ್ತದೆ ಎಂದರು.
    ನಾಣ್ಯ ಸಂಗ್ರಹಕಾರ ಸುನೀಲ ಕಮ್ಮಾರ ಮಾತನಾಡಿ, ದೇಶ, ವಿದೇಶಗಳ ಸ್ವಾತಂತ್ರೃಪೂರ್ವ ಮತ್ತು ನಂತರದ ನಾಣ್ಯಗಳು ಹಾಗೂ ನೋಟುಗಳನ್ನು ಸಂಗ್ರಹಿಸಲಾಗಿದೆ. ಇವುಗಳ ವೀಕ್ಷಣೆಯಿಂದ ವಿದ್ಯಾರ್ಥಿಗಳಿಗೆ ತುಂಬ ಅನುಕೂಲವಿದೆ ಎಂದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಈಶ್ವರ ಜವಳಿ, ಶಿಬಿರಾಧಿಕಾರಿ ಪಿ.ಟಿ. ಲಮಾಣಿ, ಉಪನ್ಯಾಸಕಿ ಸಿ.ಜಿ. ಕೋಟಿಮಠ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts