More

    ಕಲ್ಲಿದ್ದಲು ಕಳ್ಳಸಾಗಣೆ: ಟಿಎಂಸಿ ನಾಯಕನ ಸೋದರ ಸಿಬಿಐ ವಶಕ್ಕೆ

    ಕೊಲ್ಕತ: ತೃಣಮೂಲ ಕಾಂಗ್ರೆಸ್​​ನ ಮುಂಚಿನ ಅವಧಿಯ ಸರ್ಕಾರವಿದ್ದಾಗ ಪಶ್ಚಿಮ ಬಂಗಾಳದಲ್ಲಿ ನಡೆಯಿತೆನ್ನಲಾದ ದೊಡ್ಡ ಪ್ರಮಾಣದ ಕಲ್ಲಿದ್ದಲು ಕಳ್ಳಸಾಗಣೆ, ಸಾಗಾಣಿಕೆ ಮತ್ತು ಭ್ರಷ್ಟಾಚಾರದ ಪ್ರಕರಣದ ಪ್ರಮುಖ ಆರೋಪಿ ಬಿಕಾಶ್​ ಮಿಶ್ರನನ್ನು ಸಿಬಿಐ ವಶಪಡಿಸಿಕೊಂಡಿದೆ.

    ಟಿಎಂಸಿ ಯೂತ್​ ವಿಂಗ್​ ನಾಯಕ ಬಿನಯ್​ ಮಿಶ್ರ ಅವರ ಸೋದರನಾದ ಬಿಕಾಶ್​ ಮಿಶ್ರ ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದ ಕೊಲ್ಕತಾದ ಖಾಸಗಿ ಆಸ್ಪತ್ರೆಯೊಂದರಿಂದ ಸಿಬಿಐ ಅಧಿಕಾರಿಗಳು ಇಂದು ಅವನನ್ನು ಬಂಧಿಸಿದ್ದಾರೆ ಎಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪ್ರಕರಣದಲ್ಲಿ ಅದಾಗಲೇ ಬಿನಯ್​ ಮಿಶ್ರನನ್ನು ಬಂಧಿಸಿದ್ದು, ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯನಾದ ಅಭಿಷೇಕ್​ ಬ್ಯಾನರ್ಜಿ ಅವರನ್ನೂ ಸಿಬಿಐ ವಿಚಾರಣೆ ಮಾಡಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಬಿದ್ದಿದ್ದು ಯಾಕೆ? ಕಾರಣ ತಿಳಿಸಿದ ವಾಯುಪಡೆ ಮಾಜಿ ಅಧಿಕಾರಿ!

    ಪ್ರಕರಣದ ವಿವರ: ಬಂಗಾಳದ ಕುನುಸ್ತೊರಿಯಾ ಮತ್ತು ಕಜೋರಿಯದಲ್ಲಿರುವ ಈಸ್ಟರ್ನ್ ಕೋಲ್​ಫೀಲ್ಡ್​ ಲಿಮಿಟೆಡ್​ಗೆ ಸೇರಿದ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಕಲ್ಲಿದ್ದಲಿನ ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಳವಿನ ಬಗೆಗೆ ಕಳೆದ ವರ್ಷ ನವೆಂಬರ್​ನಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ಕಲ್ಲಿದ್ದಲು ಮಾಫಿಯಾದವರು ಬಂಗಾಳದ ಆಡಳಿತಾರೂಢ ಟಿಎಂಸಿ ಪಕ್ಷದ ನಾಯಕರಿಗೆ ನಿಯಮಿತವಾಗಿ ಲಂಚ ನೀಡುತ್ತಿರುವ ಆರೋಪ ಈ ಪ್ರಕರಣದಲ್ಲಿದೆ. ಈ ಹಣವನ್ನು ಪಕ್ಷದ ಯುವ ನಾಯಕ ಬಿನಯ್ ಮಿಶ್ರಾ ಮೂಲಕ ಚಾನಲ್ ಮಾಡಲಾಗುತ್ತಿತ್ತು ಎನ್ನಲಾಗಿದ್ದು, ಬಿನಯ್​ ಮಿಶ್ರರ ಸೋದರ ಬಿಜಯ್​ ಮಿಶ್ರ ವಿರುದ್ಧವೂ ಸಿಬಿಐ ಜಾಮೀನುರಹಿತ ವಾರೆಂಟ್ ಜಾರಿ ಮಾಡಿತ್ತು ಎನ್ನಲಾಗಿದೆ. (ಏಜೆನ್ಸೀಸ್)

    ಶಾಲೆಯಲ್ಲಿ ಮೊಟ್ಟೆ: ಜೀವನಶೈಲಿ ಬದಲಿಸುವ ಕೆಲಸ ಬೇಡ ಎಂದ ಪೇಜಾವರ ಶ್ರೀಗಳು

    ಮನೆ ಕಡೆಗೆ ಮಣ್ಣಿನ ಮಕ್ಕಳು! ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತ ಪ್ರತಿಭಟನೆಗೆ ಬಿತ್ತು ತೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts