More

    ಜೆಡಿಎಸ್ ಶಾಸಕರ ಧರಣಿ; ರಾತ್ರಿ ವಿಧಾನಸೌಧಕ್ಕೆ ದೌಡಾಯಿಸಿದ ಸಿಎಂ!

    ಬೆಂಗಳೂರು: ವಿಧಾನಸಭೆ ಸಭಾಂಗಣದಲ್ಲಿ ಅಹೋರಾತ್ರಿ ಧರಣಿಗೆ ಮುಂದಾದ ಜೆಡಿಎಸ್ ಶಾಸಕರ‌ ಮನವೊಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕ್ರೀಡಾ ಸಚಿವ ನಾರಾಯಣ ಗೌಡ ರಾತ್ರಿ ಎಂಟು ಗಂಟೆಗೆ ವಿಧಾನಸೌಧಕ್ಕೆ ದೌಡಾಯಿಸಿದ ಪ್ರಸಂಗ ನಡೆಯಿತು.

    ತಮ್ಮ‌ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾದ ಅನುದಾನ ಕಡಿತ ವಿರೋಧಿಸಿ ಜೆಡಿಎಸ್ ಶಾಸಕರು ಗುರುವಾರ ವಿಧಾನಸಭೆಯಲ್ಲಿ ಕಲಾಪ ಮುಗಿದ ಬಳಿಕವೂ ಸ್ಪೀಕರ್ ಪೀಠದ ಮುಂಭಾಗ ಧರಣಿ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ರೇಪ್​ ಕೇಸ್​ನಲ್ಲಿ ಬೇಲ್​ ಬೇಕೆ? ರಾಖಿ ಕಟ್ಟಿಸಿಕೋ ಎಂದಿದ್ದ ಹೈಕೋರ್ಟ್! ಗರಂ ಆದ ‘ಸುಪ್ರೀಂ’​

    ಅನುದಾನ‌ಕಡಿತ ವಿಚಾರದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಉತ್ತರಕ್ಕೆ ತೃಪ್ತರಾಗದ ಜೆಡಿಎಸ್ ಶಾಸಕರು, ಸಿಎಂ ಸೂಕ್ತ ಉತ್ತರ ನೀಡದಿದ್ದರೆ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದರು.

    ದಿನದ ಕಲಾಪ ಮುಗಿದ ಬಳಿಕವೂ ಧರಣಿ ನಡೆಸುತ್ತಿರುವ ಮಾಹಿತಿ ಪಡೆದ ಸಿಎಂ ರಾತ್ರಿ ಎಂಟು ಗಂಟೆಗೆ ಮನೆಯಿಂದ ವಿಧಾನಸೌಧಕ್ಕೆ ಆಗಮಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ನಾರಾಯಣಗೌಡರು ಮುಖ್ಯಮಂತ್ರಿಯವರನ್ನು ಅನುಸರಿಸಿದರು.

    ಹಣಕಾಸು‌ ಕೊರತೆಯಿಂದ ತಡೆಹಿಡಿಯಲಾದ ಯೋಜನೆಗೆ ಆದ್ಯತೆ ಮೇಲೆ ಅನುದಾನ‌ ಬಿಡುಗಡೆ ಮಾಡುವುದಾಗಿ ಸಿಎಂ‌ ಜೆಡಿಎಸ್ ಶಾಸಕರಿಗೆ ಭರವಸೆ ನೀಡಿದರು.

    ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಲು ಮುಂದಾದ ಜೆಡಿಎಸ್​ ಶಾಸಕರು: ಕಾರಣವೇನು?

    ಉಪ ಚುನಾವಣೆ: ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್ ಹೈಕಮಾಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts