More

    ಜನಸ್ಪಂದನಾ: ಪ್ರತಿಭಟನೆಗೆ ಮುಂದಾದ ಪರೀಕ್ಷಾರ್ಥಿಗಳು!

    ಬೆಂಗಳೂರು: ಸಿಎಂ ಜನ ಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪಿಎಸ್ಐ‌ ಪರೀಕ್ಷಾರ್ಥಿಗಳು ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆಗೆ ಮುಂದಾದ ಪ್ರಸಂಗ ಸಿಎಂ ಗೃಹ ಕಚೇರಿ ಮುಂದೆ ನಡೆಯಿತು.

    ಪರೀಕ್ಷೆ  ದಿನಾಂಕ ಮುಂದೂಡಿ ಎಂದು ಮನವಿ ಸಲ್ಲಿಸಲು ಆಗಮಿಸಿದ್ದ ಅಭ್ಯರ್ಥಿಗಳು ತಮ್ಮ ಅಸಮಾಧಾನ ತೋಡಿಕೊಂಡರು. ಪ್ರತಿಭಟನೆ ಹಿನ್ನೆಲೆ ಕೆಲ ಪರೀಕ್ಷಾರ್ಥಿಗಳನ್ನ ವಶಕ್ಕೆ ಪಡೆದ ಪೊಲೀಸರು ಪರಿಸ್ಥಿಸಿ ನಿಯಂತ್ರಿಸಿದರು. ಬಳಿಕ ಅವರನ್ನು ಬಿಡುಗಡೆ ಮಾಡಿದರು.

    ಇದೇ ವೇಳೆ ಜನ ಸ್ಪಂದನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಜನರು ಸಮಸ್ಯೆಗಳ ದೊಡ್ಡ ಪಟ್ಟಿ ಹೊತ್ತು ತಂದಿದ್ದಾರೆ.

    ಜಮೀನು ವಿವಾದ- ಭೂಗಳ್ಳರ ಬೆದರಿಕೆ, ಒತ್ತುವರಿ, ಪೋಡಿ ಆಗದಿರುವುದು, ಬಗರ್ ಹುಕುಂ, ನೋಂದಣಿ ವಿಳಂಬ, ಆರೋಗ್ಯ ಸಮಸ್ಯೆ – ಕಿಡ್ನಿ, ಹೃದಯ, ಮೆದುಳು ಸಂಬಂಧಿತ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ಹಲ ಸಮಸ್ಯೆಗಳು ಪ್ರಮುಖವಾಗಿಕಾಣಿಸಿವೆ.

    ಹಣಕಾಸಿನ ಸಮಸ್ಯೆ – ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆಯ ತೊಂದರೆ, ಅನಾರೋಗ್ಯಪೀಡಿತರಿಗೆ ಚಿಕಿತ್ಸೆ, ಮದುವೆ, ಉದ್ಯೋಗ ಸಮಸ್ಯೆ ಬಗ್ಗೆಯೂ ದುಮ್ಮಾನ ತೋಡಿಕೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts