More

    ಆಂಧ್ರ ಕಾಂಗ್ರೆಸ್​ ಮುಖ್ಯಸ್ಥೆಯಾಗಲಿದ್ದಾರೆ ಸಿಎಂ ಜಗನ್ ಮೋಹನ್ ರೆಡ್ಡಿ ಸೋದರಿ ಶರ್ಮಿಳಾ

    ಅಮರಾವತಿ: ಆಂಧ್ರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಗಿಡುಗು ರುದ್ರರಾಜು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿರುವ ವೈಎಸ್ ಶರ್ಮಿಳಾ ಅವರನ್ನು ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ಬಗ್ಗೆ ಶೀಘ್ರದಲ್ಲೇ ಕಾಂಗ್ರೆಸ್ ಅಧಿಕೃತ ಘೋಷಣೆ ಮಾಡಬಹುದಾಗಿದೆ.

    ಈ ತಿಂಗಳ ಆರಂಭದಲ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸಹೋದರಿಯಾಗಿರುವ ವೈ.ಎಸ್. ಶರ್ಮಿಳಾ ಅವರು ತಮ್ಮ ವೈಎಸ್ಆರ್ ತೆಲಂಗಾಣ ಕಾಂಗ್ರೆಸ್ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸುವುದಾಗಿ ಘೋಷಿಸಿದ್ದರು.

    ಇದು ದೇಶದ ಅತಿದೊಡ್ಡ ಜಾತ್ಯತೀತ ಪಕ್ಷವಾಗಿದೆ. ಏಕೆಂದರೆ ಇದು ಎಲ್ಲಾ ಸಮುದಾಯಗಳಿಗೆ ನಿರಂತರವಾಗಿ ಸೇವೆ ಸಲ್ಲಿಸುತ್ತದೆ. ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುತ್ತದೆ ಎಂದು ಕಾಂಗ್ರೆಸನ್ನು ಶರ್ಮಿಳಾ ಶ್ಲಾಘಿಸಿದ್ದರು.

    ಕಾಂಗ್ರೆಸ್ ಸೇರುವ ಮೊದಲು ವೈಎಸ್ ಶರ್ಮಿಳಾ ಅವರು ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರಿಗೆ ಲಾಭವಾಗಬಹುದಾದ ಮತಗಳ ವಿಭಜನೆಯನ್ನು ತಡೆಯಲು ತೆಲಂಗಾಣ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ ಎಂಬುದು ಗಮನಾರ್ಹವಾಗಿದೆ.

    ಇಂಡಿಗೋ ವಿಮಾನದ ಪ್ರಯಾಣಿಕರು ರನ್​ ವೇಯಲ್ಲಿಯೇ ಊಟ, ವಿಶ್ರಾಂತಿ ಮಾಡಿದ್ದೇಕೆ?

    73 ಸಾವಿರ ಗಡಿ ದಾಟಿದ ಬಿಎಸ್​ಇ, 22 ಸಾವಿರ ಮೀರಿದ ನಿಫ್ಟಿ: ಷೇರು ಮಾರುಕಟ್ಟೆ ದಾಖಲೆಯ ಜಿಗಿತಕ್ಕೆ ಕಾರಣಗಳೇನು?

    ‘ನಿಜವಾದ ಶಿವಸೇನಾ’ ಕುರಿತ ಸ್ಪೀಕರ್​ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಉದ್ಧವ್ ಠಾಕ್ರೆ ಅರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts