More

    ಶಂಕರಮಠದಲ್ಲಿ ಧನ್ವಂತರಿ ಮಹಾಯಜ್ಞ, ಸಿಎಂ ಬಿಎಸ್​ವೈ ಸಂಕಲ್ಪ ಏನು?

    ಬೆಂಗಳೂರು: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಾರಕ ರೋಗ ಕರೊನಾ ನಿರ್ಮೂಲನೆ ಹಾಗೂ ಲೋಕಕಲ್ಯಾಣಾರ್ಥವಾಗಿ ಚಾಮರಾಜಪೇಟೆಯ ಶಂಕರಮಠದಲ್ಲಿ ಧನ್ವಂತರಿ ಮಹಾಯಜ್ಞ ಮಂಗಳವಾರ ಬೆಳಗ್ಗೆ ನೆರವೇರಿತು.

    ಸ್ವಾಮಿ ವಿವೇಕಾನಂದ ಸೇವಾ ಸಮಿತಿಯು ಆಯೋಜಿಸಿರುವ ಧನ್ವಂತರಿ ಮಹಾಯಜ್ಞದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಪಾಲ್ಗೊಂಡಿದ್ದರು. ಶಂಕರಮಠದ ಶ್ರೀ ಶಾರದಾಂಬೆ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಸಿಎಂ ಬಿ.ಎಸ್. ಯಡಿಯೂರಪ್ಪ ಮಹಾಯಜ್ಞದಲ್ಲಿ ಭಾಗಿಯಾಗಿದ್ದರು. ಸಿಎಂ ಜತೆ ಸಿಟಿ ರವಿ, ಡಾ.ಕೆ. ಸುಧಾಕರ್, ರವಿಸುಬ್ರಹ್ಮಣ್ಯ, ತೇಜಸ್ವಿ ಸೂರ್ಯ ಕೂಡ ಉಪಸ್ಥಿತರಿದ್ದರು.

    ಇದನ್ನೂ ಓದಿರಿ ಇವರಿಗೆ ಕಾಗೆಯಿಂದಲೇ ಅದೃಷ್ಟ! ಮನೆಯಲ್ಲೇ ಬಿಳಿಕಾಗೆ ಸಾಕ್ತಿದ್ದಾರೆ

    ಶಂಕರಮಠದಲ್ಲಿ ಧನ್ವಂತರಿ ಮಹಾಯಜ್ಞ, ಸಿಎಂ ಬಿಎಸ್​ವೈ ಸಂಕಲ್ಪ ಏನು?
    ಶಂಕರಮಠದಲ್ಲಿ ಮಂಗಳವಾರ ಬೆಳಗ್ಗೆ ಶಾರದಾಂಬೆಗೆ ಸಿಎಂ ಯಡಿಯೂರಪ್ಪ ಪೂಜೆ ಸಲ್ಲಿಸಿದರು.

    ಮಹಾಯಜ್ಞಕ್ಕೆ ಆಗಮಿಸಿದ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಲೋಕಕಲ್ಯಾಣಕ್ಕಾಗಿ ಮಹಾಯಜ್ಞ ಮಾಡುತ್ತಿದ್ದೇವೆ. ಕರೊನಾದಂತಹ ಸಂಕಷ್ಟ ಕಾಲದಲ್ಲೂ ರೈತ ನೆಮ್ಮದಿಯಾಗಿ ಇರಬೇಕು. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಸೋಂಕು ನಿಯಂತ್ರಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

    ರಾಜ್ಯದಲ್ಲಿ ಲಾಕ್​ಡೌನ್​ ಅವಶ್ಯಕತೆ ಇಲ್ಲ. ಜನರು ಸಹಜ ಜೀವನ ನಡೆಸಲು ಮತ್ತಷ್ಟು ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ನಾಳೆ ಪ್ರಧಾನಿ ಅವರಲ್ಲಿ ಮನವಿ ಮಾಡುತ್ತೇನೆ. ಆರ್ಥಿಕ ಚೇತರಿಕೆಗೆ ಮತ್ತಷ್ಟು ಸಡಿಲ ಮಾಡುವುದು ಅಗತ್ಯ ಎಂದು ಹೇಳಿದರು.

    ಇದನ್ನೂ ಓದಿರಿ ಕರ್ನಾಟಕದಲ್ಲಿ ಕರೊನಾಗೆ ಮೊದಲ ಪೊಲೀಸ್ ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts