More

    ದೇಶದ ಏಕೈಕ ಬಾಲಕಿಯರ ಸೈನಿಕ ವಸತಿ ಶಾಲೆಯ ವಿದ್ಯಾರ್ಥಿನಿಲಯಗಳಿಗೆ ಸಿಎಂ ಬಿಎಸ್​ವೈ ಶಂಕುಸ್ಥಾಪನೆ

    ಬೆಂಗಳೂರು: ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯ ‘ಸರ್ದಾರ್ ವಲ್ಲಭಭಾಯಿ ಪಟೇಲ್ ನಿಲಯ’ ಹಾಗೂ ‘ನೇತಾಜಿ ಸುಭಾಷ್ ಚಂದ್ರ ಬೋಸ್ ನಿಲಯ’ ಗಳಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ, ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ದೇಶದ ಏಕೈಕ ಬಾಲಕಿಯರ ಸೈನಿಕ ವಸತಿ ಶಾಲೆಯಾಗಿರುವುದು ಹೆಮ್ಮೆಯ ಸಂಗತಿ‌. ಮಾಜಿ ಸಿಎಂ ಎಸ್.ಆರ್.ಕಂಠಿ ಅವರ ದೂರದೃಷ್ಟಿ, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸಂಕಲ್ಪದ ಫಲ ಎಂದು ಶ್ಲಾಘಿಸಿದರು.

    ದೇಶದ ಏಕೈಕ ಬಾಲಕಿಯರ ಸೈನಿಕ ವಸತಿ ಶಾಲೆಯ ವಿದ್ಯಾರ್ಥಿನಿಲಯಗಳಿಗೆ ಸಿಎಂ ಬಿಎಸ್​ವೈ ಶಂಕುಸ್ಥಾಪನೆ

    ನೂರಾರು ವಿದ್ಯಾರ್ಥಿನಿಯರಿಂದ ಆರಂಭಗೊಂಡ ಈ ಶಾಲೆಯಲ್ಲಿ ಇಂದು ೮೪೨ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯ ಮಾತ್ರವಲ್ಲದೆ, ಹೊರ ರಾಜ್ಯದ ಹೆಣ್ಣುಮಕ್ಕಳು ಇಲ್ಲಿ ಕಲಿಯುತ್ತಿರುವುದು ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕನ್ನಡಿ ಎಂದು ಪ್ರಶಂಸಿಸಿದರು.

    ಈ ಶಾಲೆ ಆವರಣದಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಚಾರಿತ್ರಿಕ ವ್ಯಕ್ತಿಗಳ ಹೆಸರಿನಲ್ಲಿ ವಸತಿ ನಿಲಯ ಸ್ಥಾಪಿಸುತ್ತಿರುವುದು ಚಾರಿತ್ರಿಕ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಐದು ದಶಕಗಳಿಂದ ಹೆಣ್ಣುಮಕ್ಕಳ ಶಿಕ್ಷಣದ ಸರ್ವಾಂಗೀಣ ಪ್ರಗತಿ ಗಮನದಲ್ಲಿಟ್ಟುಕೊಂಡು ನಡೆದುಕೊಂಡು ಬರುತ್ತಿರುವ ವಿಶಿಷ್ಟ ಮತ್ತು ವಿಭಿನ್ನ ಶಾಲೆ ಇದಾಗಿದೆ ಎಂದರು. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿನಿಯರು ಸಮಾಜದಲ್ಲಿ ಉತ್ತಮ ಸ್ಥಾನ ಪಡೆದಿದ್ದು, ರಾಜ್ಯ, ದೇಶಕ್ಕೆ ಕೀರ್ತಿ ತರುತ್ತಿದ್ದಾರೆ ಎಂದು ಹೇಳಿದರು.

    ದೇಶದ ಏಕೈಕ ಬಾಲಕಿಯರ ಸೈನಿಕ ವಸತಿ ಶಾಲೆಯ ವಿದ್ಯಾರ್ಥಿನಿಲಯಗಳಿಗೆ ಸಿಎಂ ಬಿಎಸ್​ವೈ ಶಂಕುಸ್ಥಾಪನೆ

    ‘ಪದ್ಮಶ್ರೀ’ ಡಾ. ವಿಜಯ ಸಂಕೇಶ್ವರ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಶಾಸಕರಾದ ಮಹಾಂತೇಶ ಕೌಜಲಗಿ, ಶಾಲೆಯ ಚೇರ್ಮನ್ ಡಾ. ಮಹೇಂದ್ರ ಎಸ್. ಕಂಠಿ ಮತ್ತಿತರರು ಉಪಸ್ಥಿತರಿದ್ದರು.

    ಪತ್ನಿ ಅಧ್ಯಕ್ಷೆಯಾಗಿರುವ ಗ್ರಾಮ ಪಂಚಾಯಿತಿಯಲ್ಲಿ ಪತಿ ಜವಾನ…!

    ಬಾಗಲಕೋಟೆ: ಎಸಿಬಿ ದಾಳಿಯಿಂದ ಕಳಚಿಬಿತ್ತು ಎಫ್​ಡಿಎ ಸಿಬ್ಬಂದಿ, ಅಧಿಕಾರಿಗಳ ಮುಖವಾಡ!

    ಮುಂದೇನಾಗುತ್ತೆ ಎಂಬ ಅರಿವಿಲ್ಲದೆ ಸ್ನೇಹಿತರ ಮಾತು ಕೇಳಿ ಕೆಟ್ಟೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts