More

    ಕಿರು ಏತ ನೀರಾವರಿ ಯೋಜನೆಗಳಿಗೆ ಮಾಮನಿ ಕಾಯಕಲ್ಪ; ಸಿಎಂ ಬೊಮ್ಮಾಯಿ‌ ಭಾವಪೂರ್ಣ ಸ್ಮರಣೆ

    ಬೆಂಗಳೂರು: ಅನಾರೋಗ್ಯದಿಂದ ಚೇತರಿಕೆ ಕಾಣದೆ ಸಣ್ಣ ವಯಸ್ಸಿನಲ್ಲೇ ಶಾಸಕ ಆನಂದ ಮಾಮನಿ ಅಗಲಿರುವುದು ದುರ್ದೈವ. ಸವದತ್ತಿ ವಿಧಾನಸಭೆ ಕ್ಷೇತ್ರವನ್ನು ಮೂರನೇ ಬಾರಿಗೆ ಪ್ರತಿನಿಧಿಸಿರುವ ಅವರು ಸದಾ ಕ್ರಿಯಾಶೀಲರು. ರೈತರ ಪರ ಕಾಳಜಿ ಉಳ್ಳವರು, ಮಲಪ್ರಭಾ ನದಿ ವ್ಯಾಪ್ತಿಗೆ ಎಂಟು ಕಿರು ಏತ ನೀರಾವರಿ ಯೋಜನೆಗಳಿಗೆ ಕಾಯಕಲ್ಪ ನೀಡಿದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಭಾವಪೂರ್ಣವಾಗಿ ಸ್ಮರಿಸಿದರು.

    ವಿಧಾನಸಭೆ ಉಪಾಧ್ಯಕ್ಷರಾಗಿ ಸದನವನ್ನು ಸಮಚಿತ್ತದಿಂದ ನಿರ್ವಹಿಸಿದ್ದರು. ರಾಜಕೀಯವಾಗಿ ಉತ್ತಮ ಭವಿಷ್ಯ, ನಾಡಿನ ಏಳಿಗೆಗೆ ಹೆಚ್ಚೆಚ್ಚು ಕೊಡುಗೆ ನೀಡುವ ಅವಕಾಶ ಹೊಂದಿದ್ದರು. ಅಕಾಲಿಕ ಅಗಲಿಕೆ ರಾಜ್ಯ, ಪಕ್ಷ, ಕುಟುಂಬ, ವೈಯಕ್ತಿಕವಾಗಿ ನನಗೂ ನಷ್ಟವಾಗಿದೆ ಎಂದರು.

    ಮನೆತನಕ್ಕೆ ಆಘಾತ
    ಆನಂದ ಮಾಮನಿ ತಂದೆ ಚಂದ್ರಶೇಖರ ಮಾಮನಿ ವಿಧಾನಸಭೆ ಉಪಾಧ್ಯಕ್ಷರಾಗಿದ್ದಾಗ ಹೃದಯಾಘಾತದಿಂದ ತೀರಿಕೊಂಡರು. ಅವರ ಅಣ್ಣ ವಯಸ್ಸಿನಲ್ಲಿ ನಿಧನರಾದರು. ಅವರ ಸೋದರ ಸಂಬಂಧಿ ಶಾಸಕರಾಗಿದ್ದ ರಾಜಣ್ಣ ಮಾಮನಿ ಅಕಾಲಿಕವಾಗಿ ಅಗಲಿದರು. ಮಾಮನಿ ಮನೆತನಕ್ಕೆ ಸರಣಿ ಆಘಾತ ಅಪ್ಪಳಿಸಿದೆ ಎಂದು ಸಿಎಂ ಬೊಮ್ಮಾಯಿ‌ ನೋವಿನಿಂದ ನುಡಿದರು.

    ಆನಂದ ಮಾಮನಿ ಸ್ವಕ್ಷೇತ್ರ ಸವದತ್ತಿಯಲ್ಲಿ ಭಾನುವಾರ ಮಧ್ಯಾಹ್ನ ನಡೆಯಲಿರುವ ಆನಂದ ಮಾಮನಿ ಪಾರ್ಥಿವ ಶರೀರದ ಅಂತ್ಯಕ್ರಿಯೆ ವೇಳೆ ಸಿಎಂ ಬೊಮ್ಮಾಯಿ‌ ಹಾಜರಿದ್ದು, ಅಂತಿಮ ನಮನ ಸಲ್ಲಿಸುವರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಲಿದ್ದು, ಸಿಎಂ ಜತೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವ ಗೋವಿಂದ ಕಾರಜೋಳ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಭಾಗಿಯಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts