More

    ಅರಟಾಳ ಒಂದು ಪುಣ್ಯ ಕ್ಷೇತ್ರ; ಮುಖ್ಯಮಂತ್ರಿ ಬೊಮ್ಮಾಯಿ

    ಹಾವೇರಿ: ಅಹಿಂಸೆ ಪರೋಧರ್ಮ ಎಂಬುವ ಜೈನ ಧರ್ಮವನ್ನು ಪಾಲಿಸಿದ್ದರೆ ಜಗತ್ತಿನಲ್ಲಿ ಹಿಂಸೆ ಎಂಬುವುದು ಇರುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

    ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕು ಅರಟಾಳ ಗ್ರಾಮದ ಶ್ರೀಕ್ಷೇತ್ರದಲ್ಲಿ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳವಾರ ನೂತನ ಯಾತ್ರಿ ನಿವಾಸ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

    ಬರುವ ಫೆಬ್ರವರಿ ತಿಂಗಳ ಒಳಗಾಗಿ ಕಟ್ವವನ್ನು ಪೂರ್ಣಗೊಳಿಸಿ ಶ್ರೀಗಳಿಗೆ ಒಪ್ಪಿಸಲಾಗುತ್ತದೆ. ಅರಟಾಳ ಒಂದು ಪುಣ್ಯ ಕ್ಷೇತ್ರ. ಶ್ರವಣಬೆಳಗೊಳಕ್ಕೆ ಕಾಲ ನಡಿಗೆಯಲ್ಲಿ ತೆರಳುತ್ತಿದ್ದ ಜೈನ ಪಾಶ್ವಗಳು ಹಾಗೂ ಭಕ್ತರು ಇಲ್ಲಿ ಬಂದು ದೇವರ ದರ್ಶನ ಪಡೆಯುತ್ತಿದ್ದರು.

    ಜೈನ ಧರ್ಮವನ್ನು ಎಲ್ಲರೂ ಪಾಲಿಸಿದಲ್ಲಿ ಸ್ವರ್ಗ ಲಭಿಸುತ್ತದೆ. ಧರ್ಮಾಧಾರಿತ ಹಾಗೂ ಮೌಲ್ಯಾಧಾರಿತ ಭೋಧನೆ ಅರಟಾಳ ಗ್ರಾಮದಲ್ಲಿ ನೆಲೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts