More

    ಅಧ್ಯಾತ್ಮದಿಂದ ಜೀವನ ಸಾರ್ಥಕ

    ಅರಟಾಳ: ಮೋಹದ ಬಲೆಯಲ್ಲಿ ಸಿಲುಕಿರುವ ನಾವೆಲ್ಲರೂ ಪರಮಾತ್ಮನ ನಾಮ ಸ್ಮರಣೆ, ಧ್ಯಾನ ಮಾಡುವುದರಿಂದ ನಿತ್ಯದ ಜೀವನ ಜಂಜಾಟಗಳಿಂದ ಮುಕ್ತರಾಗಬಹುದು. ಅಧ್ಯಾತ್ಮ ಮಾರ್ಗದಿಂದ ಸಾರ್ಥಕ ಜೀವನ ನಡೆಸಲು ಸಾಧ್ಯ ಎಂದು ಇಂಚಗೇರಿ ಮಠದ ರೇವಣಸಿದ್ಧೇಶ್ವರ ಮಹಾರಾಜ ಹೇಳಿದರು.

    ಇಲ್ಲಿನ ಇಂಚಗೇರಿ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾವೂಸಾಹೇಬ್, ಗಿರಿಮಲ್ಲೇಶ್ವರ, ಗುರುಪುತ್ರೇಶ್ವರ, ಜಗನ್ನಾಥ ಮಹಾರಾಜ ಅವರ ಪುಣ್ಯಸ್ಮರಣೆ ಸಪ್ತಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ಸತತ ಪ್ರಯತ್ನದಿಂದ ಸಾಮಾನ್ಯನೂ ಸಮರ್ಥನಾಗಬಲ್ಲ. ಜೀವನದಲ್ಲಿ ಮೊಟ್ಟ ಮೊದಲು ಗುರುವಿನ ದರ್ಶನ, ಗುರು ಉಪದೇಶ ಪಡೆದುಕೊಂಡಾಗ ಎಂತಹ ಕಷ್ಟವೂ ಸಹ ಕರಗಿ ಹೋಗುತ್ತದೆ. ಮಾನವ ಜನ್ಮ ಅತ್ಯಂತ ಶ್ರೇಷ್ಠ . ಹೀಗಾಗಿ ನಾನು, ನನ್ನದು, ಮೇಲು, ಕೀಳು ಎಂಬ ಭಾವನೆ ಬಿಟ್ಟು ಎಲ್ಲರೂ ನನ್ನವರು ಎನ್ನುವ ಭಾವನೆ ಇದ್ದರೆ ಮಾತ್ರ ಗುರು ದರ್ಶನವಾಗುತ್ತದೆ ಎಂದರು.

    ಧಾರವಾಡದ ಶಶಿಕಾಂತ ಪಡಸಲಗಿ ಮಾಹಾರಾಜ ಮಾತನಾಡಿ, ಅನಾಥರಿಗೆ ಆಶ್ರಯ ನೀಡಿ ಜಗತ್ತಿಗೆ ದೇವರು ಎನಿಸಿದ ಇಂಚಗೇರಿ ಮಾಧವಾನಂದ ಅವರು ಕಲಿಯುಗದ ನಿಜ ದೇವರು. 12ನೇ ಶತಮಾನದ ಬಸವಾದಿ ಶರಣರು ಹಾಕಿಕೊಟ್ಟ ಜಾತ್ಯತೀತ ತತ್ತ್ವ ಮಾರ್ಗಗಳನ್ನು ಮತ್ತು ಸಿದ್ಧಾಂತಗಳನ್ನು ಮುಂದುವರಿಸಿಕೊಂಡು ಬರುತ್ತಿರುವ ಏಕೈಕ ಮಠ ಎಂದರೆ ಇಂಚಗೇರಿ ಮಠ. ಇಂಚಗೇರಿ ಮಠದ ಕಾರ್ಯ ಅವಿಸ್ಮರಣೀಯ ಎಂದರು. ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರು ರೇವಣ್ಣಸಿದ್ಧೇಶ್ವರ ಮಹಾರಾಜರನ್ನು ಸನ್ಮಾನಿಸಿದರು. ತುಕಾರಾಮ ಮಹಾರಾಜ, ವಿಲಾಸರಾವ್ ಮಹಾರಾಜ, ದೇವಿದಾಸ ಮಹಾರಾಜ, ಲಮಾನಟ್ಟಿ ತುಕಾರಾಮ ಮಹಾರಾಜ, ನಂದೇಶ್ವರ ತುಕಾರಾಮ ಮಹಾರಾಜ, ಗಿರಮಲ್ಲ ಮಹಾರಾಜ, ಶಶಿಕಾಂತ ಖೋಜಾನಟ್ಟಿ, ಸಂಗಪ್ಪ ಸಾಲಿ, ನಾಗಪ್ಪ ಜತ್ತಿ, ಭೀಮಣ್ಣ ಮಹಾರಾಜ, ದತ್ತಾ ಹಾಸೀಲ್ಕರ್, ವಿವೇಕಾನಂದ ಹಳ್ಳಿಂಗಲಿ ಇತರರಿದ್ದರು. ಶಂಕರೆಪ್ಪ ಮಹಾರಾಜ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts