More

    ಅವೈಜ್ಞಾನಿಕ ಗಣಿಗಾರಿಕೆಯಿಂದ ನಷ್ಟವೇ ಜಾಸ್ತಿ: ಸಿಎಂ ಬಸವರಾಜ ಬೊಮ್ಮಾಯಿ‌ ಕಿವಿಮಾತು

    ಬೆಂಗಳೂರು: ಅಲಂಕಾರಿಕ, ಕಲ್ಲು ಗಣಿಗಾರಿಕೆಯಲ್ಲಿ ಅವೈಜ್ಞಾನಿಕ ವಿಧಾನಗಳಿಂದ ನಷ್ಟದ ಪ್ರಮಾಣವೇ ಜಾಸ್ತಿ ಇದರಿಂದ ದೇಶದ ನೈಸರ್ಗಿಕ ಸಂಪತ್ತು, ಆರ್ಥಿಕತೆ ಜತೆಗೆ ಗಣಿ ಮಾಲೀಕರು ಹಾನಿ ಅನುಭವಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಕಿವಿಮಾತು ಹೇಳಿದರು.

    ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ಸ್ಟೋನ್ ಮೇಳದ ಸಮಾರೋಪ ಸಮಾರಂಭದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು, ಕಲ್ಲು ಅಮೂಲ್ಯ ಸಂಪತ್ತು. ಮಣ್ಣು ಈ ರೂಪ ಪಡೆಯುವುದಕ್ಕೆ ಸಾವಿರಾರು ವರ್ಷಗಳು ಹಿಡಿದಿದೆ ಎಂಬುದು ಗೊತ್ತಿರುವ ವಿಚಾರ. ಶಿಲೆಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ‌.

    ಬದಲಾದ ತಾಂತ್ರಿಕತೆ, ಜೀವನಶೈಲಿಯು ಕಲ್ಲು ಉದ್ಯಮಕ್ಕೆ ಹೊಸ ಆಯಾಮ ನೀಡಿದೆ. ಕಲ್ಲು ಗಣಿಗಾರಿಕೆ ಕ್ಷೇತ್ರವು ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಶಕ್ತಿಯಲ್ಲಿ ಒಂದಾಗಿದ್ದು, ಹೆಚ್ಚು ಪೋಲು ತಡೆದರೆ ಸುಸ್ಥಿರ ಅಭಿವೃದ್ಧಿ ಸಾಧ್ಯವಿದೆ ಎಂದರು.

    ಆಧುನಿಕ ಯಂತ್ರೋಪಕರಣಗಳು, ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಒತ್ತು ನೀಡಬೇಕು. ಈ ವಿಷಯದಲ್ಲಿ ಇಟಲಿ ದೇಶ ಮುಂದಿದೆ. ಕಲ್ಲು ಕತ್ತರಿಸಲು, ನುಣುಪು ಮಾಡಲು ವೈಜ್ಞಾನಿಕ-ತಾಂತ್ರಿಕ ವಿಧಾನ ಅನುಸರಿಸುವಲ್ಲಿ ಮುಂದಿದೆ ಎಂದರು.

    ನೀತಿಯ ತಿರುಳು
    ಸುಗಮ ವ್ಯವಹಾರಗಳಿಗೆ ಅವಕಾಶ ಕಲ್ಪಿಸುವುದು ಸರ್ಕಾರದ ನೀತಿಯ ತಿರುಳಾಗಿದೆ. ಲೈಸನ್ಸ್ ಸರಳೀಕರಣ, ತೀರುವಳಿಗಳ ಹಂತ ಕಡಿತ ಮುಂತಾದ ಉಪಕ್ರಮಗಳ ಮೂಲಕ ಉದ್ಯಮಸ್ನೇಹಿಯಾಗಿದೆ. ಅದೇ ಕಾಲಕ್ಕೆ ಉದ್ಯಮಿಗಳು ಪಾರದರ್ಶಕ, ತ್ವರಿತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸಬೇಕು ಎಂದು ಸಿಎಂ ಬೊಮ್ಮಾಯಿ‌ ಸಲಹೆ ನೀಡಿದರು.

    ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ಅಪ್ರಾಪ್ತೆ ಮೇಲೆ ಆ್ಯಸಿಡ್ ದಾಳಿ ಮಾಡಿದ ಹುಚ್ಚು ಕ್ರಿಮಿ ವಿರುದ್ಧ ಕಠಿಣ ಶಿಕ್ಷೆಗೆ ಕ್ರಮ: ಸಚಿವ ಹಾಲಪ್ಪ ಆಚಾರ್

    ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿದ್ದ ಮಂತ್ರಿ ಮಾಲ್​ಗೆ ಬಿಬಿಎಂಪಿ ಶಾಕ್​: ಚರಾಸ್ತಿ ಮುಟ್ಟುಗೋಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts