More

    ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿದ್ದ ಮಂತ್ರಿ ಮಾಲ್​ಗೆ ಬಿಬಿಎಂಪಿ ಶಾಕ್​: ಚರಾಸ್ತಿ ಮುಟ್ಟುಗೋಲು

    ಬೆಂಗಳೂರು: ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿರುವ ಮಂತ್ರಿ ಮಾಲ್​ಗೆ ಬಿಬಿಎಂಪಿ ಶಾಕ್​ ನೀಡಿದೆ. ಮಂತ್ರಿ ಮಾಲ್​​ನ ಚರಾಸ್ತಿಗಳನ್ನು ಬಿಬಿಎಂಪಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ಸುಮಾರು 43 ಕೋಟಿ ರೂ. ತೆರಿಗೆಯನ್ನು ಹಲವು ವರ್ಷಗಳವರೆಗೆ ಬಿಬಿಎಂಪಿ ಬಾಕಿ ಉಳಿಸಿಕೊಂಡಿತ್ತು. ಈ‌ ಹಿಂದೆ ಎರಡು ಬಾರಿ ಮಂತ್ರಿಮಾಲ್‌ಗೆ ಬಿಬಿಎಂಪಿ ಬೀಗ ಜಡಿದಿತ್ತು. ತೆರಿಗೆ ಕಟ್ಟುವುದಕ್ಕೆ ಸ್ಪಲ್ಪ ಸಮಯ ಬೇಕು ಅಂತ ಮಂತ್ರಿ ಮಾಲ್​ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ಕಾಲಾವಕಾಶ ನೀಡಲಾಗಿತ್ತು. ಇಷ್ಟಾದರೂ ಬುದ್ಧಿ ಕಲಿಯದ ಮಂತ್ರಿಮಾಲ್​ ಮೇಲೆ ಇಂದು ಪಾಲಿಕೆ ಅಧಿಕಾರಿಗಳು ಮತ್ತೆ ದಾಳಿ ಮಾಡಿ, ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ಕಚೇರಿಯಲ್ಲಿರುವ ಚೇರ್, ಜೆರಾಕ್ಸ್ ಮೆಶಿನ್, ಕಂಪ್ಯೂಟರ್, ಲ್ಯಾಪ್‌ಟಾಪ್ ಹಾಗೂ ಮೀಟಿಂಗ್ ಟೇಬಲ್ಸ್​ಗಳನ್ನು ವಶಕ್ಕೆ ಪಡೆದಿರುವ ಬಿಬಿಎಂಪಿ ಸಿಬ್ಬಂದಿ ಲೆಕ್ಕ ಮಾಡುತ್ತಿದ್ದಾರೆ. ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಯೋಗೇಶ್ ನೇತೃತ್ವದಲ್ಲಿ ಸುಮಾರು 50 ಮಾರ್ಷಲ್​​ಗಳು, ಆರ್​ಒ, ಎಆರ್​ಒ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದೆ.

    ದಾಲಿ ಬಗ್ಗೆ ಮಾತನಾಡಿರುವ ಮಂತ್ರಿಮಾಲ್ ಮ್ಯಾನೇಜ್‌ಮೆಂಟ್‌ ಹೆಡ್ ಶಬಿರ್, ಬಾಕಿ ಉಳಿಸಿಕೊಂಡಿರೋದು ಅಭಿಷೇಕ್ ಡೆವಲಪರ್ಸ್ ಕಂಪನಿಯರು. ಮಂತ್ರಿಮಾಲ್ ಬಾಕಿ ಉಳಿಸಿಕೊಂಡಿಲ್ಲ. ಬಿಬಿಎಂಪಿ ದಾಳಿ ಮಾಡುತ್ತಿರುವುದು ಕಾನೂನು ಬಾಹಿರ. ನಾವು ಕೋರ್ಟ್‌ನಿಂದ ಸ್ಟೇ ಕೂಡಾ ತಂದಿದ್ದೇವೆ. ಏಕಾಏಕಿ ಈ ರೀತಿ ಮಾಡಿರುವುದು ಸರಿಯಲ್ಲ. ನಾವು ಕೋರ್ಟ್‌ಗೆ ಹೋಗ್ತೇವೆ ಎಂದಿದ್ದಾರೆ.

    ಬಿಬಿಎಂಪಿ ಜಂಟಿ ಆಯುಕ್ತ ಯೋಗೇಶ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತ ನಿರ್ದೇಶನದ ಮೇಲೆ ಆಸ್ತಿ ತೆರಿಗೆ ತೆಗದುಕೊಳ್ಳುತ್ತಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಮಂತ್ರಿ ಮಾಲ್ 42. 63 ಕೋಟಿ ರೂ. ಬಾಕಿ ಉಳಿಸಿಕೊಂಡಿಸಿದೆ. ನೋಟಿಸ್ ಕೊಟ್ಟರು ಉತ್ತರ ನೀಡುತ್ತಿಲ್ಲ. ಹೀಗಾಗಿ ದಾಳಿ ಮಾಡಿದ್ದೇವೆ. ಚರಾಸ್ತಿಗಳ ಮೊತ್ತ ಎಷ್ಟು ಇದೆ ಅಂತಾ ನೋಡುತ್ತೇವೆ. ಬಳಿಕ ಮತ್ತಷ್ಟು ವಶಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್​)

    ಆರ್​ಸಿಬಿ ತಂಡದ ಮೊದಲ ಮಹಿಳಾ ನಾಯಕಿಯಾಗಿ ಸ್ಮೃತಿ ಮಂದನಾ ಆಯ್ಕೆ: ಶುಭಕೋರಿದ ವಿರಾಟ್​, ಡುಪ್ಲೆಸಿಸ್​

    ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳು: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್​

    ದೂರು ನೀಡಲು ಹೋದರೆ ಠಾಣೆ ಖಾಲಿ ಖಾಲಿ! ಮಹಾಲಕ್ಷ್ಮಿ ಲೇಔಟ್​ ಪೊಲೀಸರ ವಿರುದ್ಧ ಗಂಭೀರ ಆರೋಪ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts