More

    ಆರ್​ಸಿಬಿ ತಂಡದ ಮೊದಲ ಮಹಿಳಾ ನಾಯಕಿಯಾಗಿ ಸ್ಮೃತಿ ಮಂದನಾ ಆಯ್ಕೆ: ಶುಭಕೋರಿದ ವಿರಾಟ್​, ಡುಪ್ಲೆಸಿಸ್​

    ನವದೆಹಲಿ: ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​)ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡವನ್ನು ಸ್ಮೃತಿ ಮಂದನಾ ಅವರು ಮುನ್ನಡೆಸಲಿದ್ದಾರೆ. ಆರ್​ಸಿಬಿಯ ಮಾಜಿ ನಾಯಕ ವಿರಾಟ್​ ಕೊಹ್ಲಿ ಮತ್ತು ಹಾಲಿ ನಾಯಕ ಫಾಫ್​ ಡುಪ್ಲಿಸಿಸ್ ಅವರು ಆರ್​ಸಿಬಿ ಮಹಿಳಾ ತಂಡದ ಮೊದಲ ನಾಯಕಿಯನ್ನಾಗಿ ಸ್ಮೃತಿ ಮಂದನಾರನ್ನು ಹೆಸರಿಸಿದ್ದಾರೆ.

    ಫೆ.13ರಂದು ನಡೆದ ಚೊಚ್ಚಲ ಮಹಿಳಾ ಪ್ರೀಮಿಯರ್​ ಲೀಗ್​ (ಡಬ್ಲ್ಯುಪಿಎಲ್​)ನ ಚೊಚ್ಚಲ ಹರಾಜು ಪ್ರಕ್ರಿಯೆಯಲ್ಲಿ 3.4 ಕೋಟಿ ರೂ.ಗಳ ದಾಖಲೆಯ ಮೊತ್ತಕ್ಕೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಪಾಲಾಗುವ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್​ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದನಾ ಅವರು ದುಬಾರಿ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಇದೀಗ ಆರ್​ಸಿಬಿ ನಾಯಕತ್ವ ವಹಿಸಿಕೊಳ್ಳುವ ಮೂಲಕ ಮೊದಲ ಆವೃತ್ತಿಯಲ್ಲಿ ತಂಡವನ್ನು ಗೆಲುವಿನತ್ತ ಮುನ್ನೆಡೆಸುವ ಭರವಸೆಯನ್ನು ಹೊಂದಿದ್ದಾರೆ. ಇಂದು ಆರ್​ಸಿಬಿ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ವಿಡಿಯೋ ಸಂದೇಶದಲ್ಲಿ ವಿರಾಟ್ ಮತ್ತು ಡುಪ್ಲೆಸಿಸ್​ ಸ್ಮೃತಿ ಹೆಸರನ್ನು ಘೋಷಣೆ ಮಾಡುವ ಮೂಲಕ ಶುಭಕೋರಿದ್ದಾರೆ.

    ಹೊಸ ಜವಬ್ದಾರಿಯನ್ನು ನೀಡಿದ್ದಕ್ಕೆ ಆರ್​ಸಿಬಿಗೆ ಸ್ಮೃತಿ ಮಂದನಾ ಅವರು ಧನ್ಯವಾದಗಳನ್ನು ತಿಳಿಸಿದ್ದು, ಸಾಧ್ಯವಾದಷ್ಟು ತಂಡದ ಗೆಲುವಿದಾಗಿ ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಹಾಗೆಯೇ ಆರ್​ಸಿಬಿ ಅಭಿಮಾನಿಗಳಿಗೆ ಕರೆ ನೀಡಿರುವ ಸ್ಮೃತಿ, ನಿಮ್ಮ ಬೆಂಬಲ ಸದಾ ಇರಲಿ ಎಂದಿದ್ದಾರೆ. ಮೊದಲ ಆವೃತ್ತಿಯನ್ನು ಕಾತರದಿಂದ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳು: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್​

    ದೂರು ನೀಡಲು ಹೋದರೆ ಠಾಣೆ ಖಾಲಿ ಖಾಲಿ! ಮಹಾಲಕ್ಷ್ಮಿ ಲೇಔಟ್​ ಪೊಲೀಸರ ವಿರುದ್ಧ ಗಂಭೀರ ಆರೋಪ…

    ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts