More

    ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ಮುಂಬೈ: ಸುಮಾರು 5 ವರ್ಷಗಳ ಕಾಲ ಸಿನಿಮಾಗೆ ಬ್ರೇಕ್​ ನೀಡಿ “ಪಠಾಣ್​” ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಬಾಲಿವುಡ್​ ಬಾದ್​ಷಾ ಶಾರುಖ್​ ಖಾನ್​ ಬಾಕ್ಸ್​ ಆಫೀಸ್​ನಲ್ಲೀ ಧೂಳೆಬ್ಬಿಸಿದ್ದಾರೆ. ಸದ್ಯ ಪಠಾಣ್​ ಸಿನಿಮಾ 1000 ಕೋಟಿಗೂ ಅಧಿಕ ಸಂಪಾದನೆ ಮಾಡಿ ಎಲ್ಲ ದಾಖಲೆಗಳನ್ನು ಮುರಿಯುತ್ತಾ ಸಾಗಿದೆ. ಶಾರುಖ್​, ಬಾಲಿವುಡ್​ನಲ್ಲೇ ಶ್ರೀಮಂತ ನಟ ಎನಿಸಿಕೊಂಡಿದ್ದಾರೆ. ಸಾವಿರಾರು ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಇದೀಗ ಅವರ ಬಹುಕಾಲದ ಮ್ಯಾನೇಜರ್​ ಪೂಜಾ ದದ್ಲಾನಿ ಅವರು ತಮ್ಮ ಒಟ್ಟು ಆಸ್ತಿಯ ಕಾರಣದಿಂದಲೇ ಸುದ್ದಿಯಾಗಿದ್ದಾರೆ.

    ಇತ್ತೀಚೆಗಷ್ಟೇ ಪೂಜಾ ಅವರು ತಮ್ಮ ನವೀಕರಿಸಿದ ಮನೆಗೆ ಪ್ರವೇಶ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೂಜಾ, ನನ್ನ ಹೊಸ ನಿವಾಸಕ್ಕೆ ಕಾಲಿಡುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಈ ಹೊಸ ಪ್ರಯಾಣವನ್ನು ಪ್ರಾರಂಭಿಸಲು ಗೌರಿಖಾನ್ ಕುಟುಂಬದಿಂದ ವಿನ್ಯಾಸಗೊಳಿಸಿದ ಮನೆಗಿಂತ ಉತ್ತಮವಾದ ಮಾರ್ಗ ಯಾವುದಿದೆ, ಅವರು ನನ್ನ ಮನೆಯನ್ನು ಪರಿವರ್ತಿಸಿದ್ದಾರೆ ಎಂದು ಪೂಜಾ ಬರೆದುಕೊಂಡಿದ್ದಾರೆ.

    ತುಂಬಾ ವರ್ಷಗಳಿಂದ ಶಾರುಖ್​ ಬಳಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿರುವ ಪೂಜಾ ಅವರ ಒಟ್ಟು ಆಸ್ತಿಯ ಮೌಲ್ಯ 50 ಕೋಟಿ ರೂಪಾಯಿ. ಪೂಜಾರನ್ನು ತಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರೆಂದು ಶಾರುಖ್​ ಪರಿಗಣಿಸಿದ್ದಾರೆ. ಪೂಜಾ ಅವರು ಪ್ರತಿ ವರ್ಷ 8 ರಿಂದ 9 ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ. ಅವರ ಪತಿ ಹಿತೇಶ್​ ಗುರ್ನಾನಿ ಅವರು ಜ್ಯುವೆಲ್ಲರಿ ಉದ್ಯಮ ನಡೆಸುತ್ತಿದ್ದಾರೆ. ದಂಪತಿಗೆ ಶಾಲೆಗೆ ಹೋಗುವ ರೇನಾ ಹೆಸರಿನ ಮಗಳಿದ್ದಾಳೆ. 2012ರಿಂದ ಎಸ್​ಆರ್​ಕೆ ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್‌ನ ಉಸ್ತುವಾರಿ ವಹಿಸಿದ್ದಾರೆ.

    ಶಾರುಖ್ ಖಾನ್ ಪ್ರಸ್ತುತ ಅಟ್ಲಿ ನಿರ್ದೇಶನದ ‘ಜವಾನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ನಿರ್ಮಾಣ ಸಹ ಮಾಡುತ್ತಿದ್ದಾರೆ. ಇದಕ್ಕೆ ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ, ನಯನತಾರಾ, ಪ್ರಿಯಾಮಣಿ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದಾರೆ. (ಏಜೆನ್ಸೀಸ್​)

    ಪತ್ನಿಯಿಂದ ರಹಸ್ಯ ಮುಚ್ಚಿಟ್ಟ ಪತಿಗೆ ಕಾದಿತ್ತು ಬಿಗ್​ ಶಾಕ್​! ಭಾರೀ ಸಂಚಲನ ಮೂಡಿಸಿದ ಕೋರ್ಟ್​ ತೀರ್ಪು

    ಆರ್ಥಿಕ ಸಂಕಷ್ಟದಿಂದ ಕಂಗೆಟ್ಟ ಪಾಕಿಸ್ತಾನ; ಪೆಟ್ರೋಲ್​ಗೆ 272 ರೂ.!

    ಸೆಲ್ಫಿ ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಮೇಲೆ ಹಲ್ಲೆ: ಸೋಶಿಯಲ್​ ಮೀಡಿಯಾ ಸುಂದರಿ ಅರೆಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts