More

    ಬಿಎಸ್‌ವೈ-ಬಿಜೆಪಿ ಎರಡನ್ನೂ ಸಂಭಾಳಿಸಿದ ಸಿಎಂ ಬೊಮ್ಮಾಯಿ; ಬಹುಮತದ ಹೊಸ್ತಿಲಲ್ಲಿ ಎಡವಿದ ಕಮಲ ಪಕ್ಷ..

    | ಶಿವಾನಂದ ತಗಡೂರು ಬೆಂಗಳೂರು

    ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ತನ್ನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಸಾಧನೆ ಮಾಡಿದ್ದರೂ, ಸದನಕ್ಕೆ ಬೇಕಾದ ಬಹುಮತ ಸಾಧಿಸುವಲ್ಲಿ ಕೊನೆಯ ಹೆಜ್ಜೆಯಲ್ಲಿ ಎಡವಿದೆ. ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ ಬಳಿಕ ನಡೆದ 25 ಸ್ಥಾನಗಳ ಈ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಒಂದಿಷ್ಟು ತೃಪ್ತಿಯಿಂದ ಸಹಜವಾಗಿಯೇ ಮೆರಗು ಹೆಚ್ಚಿಸಿಕೊಂಡಿದ್ದಾರೆ.

    ಸ್ಥಳೀಯ ಸಂಸ್ಥೆಗಳಿಂದ ಕಳೆದ ಬಾರಿ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕೇವಲ 6 ಸ್ಥಾಗಳನ್ನು ಗೆಲ್ಲುವಲ್ಲಿ ಮಾತ್ರ ಯಶಸ್ವಿಯಾಗಿತ್ತು. ಆದರೆ, ಈ ಬಾರಿ ತನ್ನೆಲ್ಲ ಶಕ್ತಿಯನ್ನು ಚುನಾವಣಾ ಕಣದಲ್ಲಿ ಬಳಕೆ ಮಾಡಿ 11 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸಾಧನೆಯ ಸಾರ್ಥಕತೆ ಮೆರೆದಿದೆ. 32 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಸಂಖ್ಯೆ 37ಕ್ಕೆ ಹೆಚ್ಚಿದೆ. 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಕನಿಷ್ಠ 15 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳುತ್ತಿತ್ತಾದರೂ, ಒಳಮನಸ್ಸಿನಲ್ಲಿ 12 ಸ್ಥಾನ ಬಂದರೆ ಸಾಕು ಎನ್ನುವ ಭಾವನೆಯನ್ನು ಹೊಂದಿತ್ತು. ಈಗ 11 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

    ಇದನ್ನೂ ಓದಿ: ವ್ಯಾಪಾರದ ಸೋಗಲ್ಲಿ ಮನೆಗೆ ಬಂದು ಬಟ್ಟೆ ಬಿಚ್ಚಿಸಿ ಯುವತಿ ಜತೆ ಕೂರಿಸಿದ್ದಲ್ಲದೆ ವಿಡಿಯೋ ಮಾಡಿ ಬೆದರಿಸಿ ದರೋಡೆ; 6 ಜನರ ಬಂಧನ

    ಕೊನೆಯ ಘಳಿಗೆಯ ತನಕ ಅಳೆದು ಸುರಿದು ಟಿಕೆಟ್ ನೀಡಿದ್ದ ಬಿಜೆಪಿ ಹಾಲಿ 6 ಜನ ಸದಸ್ಯರೆಲ್ಲರಿಗೂ ಟಿಕೆಟ್ ನೀಡಿತ್ತು. 14 ಸ್ಥಾನಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಪಕ್ಷದ ನೆಲೆಯಲ್ಲಿಯೇ ಲೆಕ್ಕಾಚಾರ ಹಾಕಿ ಟಿಕೆಟ್ ನೀಡಿತ್ತು. ಅಷ್ಟೆ ಅಲ್ಲ, ವಲಸಿಗರಿಗೆ ಟಿಕೆಟ್ ನೀಡುವ ಮನಸ್ಸು ಮಾಡಲಿಲ್ಲ. ಪಕ್ಷಾಂತರ ಮಾಡಿ ಬರಲು ಬೇಲಿ ಮೇಲೆ ಕುಳಿತಿದ್ದವರಿಗೂ ಬಾಗಿಲು ಬಂದ್ ಮಾಡಿತ್ತು. ಬಿಜೆಪಿಯ ಲೆಕ್ಕಾಚಾರವೆಲ್ಲವೂ ಅಂದುಕೊಂಡಂತೆಯೇ ನಡೆದಿರುವುದು ಈ ಬಾರಿಯ ಚುನಾವಣೆ ವಿಶೇಷ.

    ಸಮನ್ವಯ ಮೆರೆದ ಸಿಎಂ: ಚುನಾವಣೆ ಪ್ರಾರಂಭದಿಂದಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಳ್ಮೆ ವಹಿಸಿ ವಿವೇಚನೆಯಿಂದಲೇ ಹೆಜ್ಜೆ ಇಡುತ್ತಾ ಬಂದರು. ಹಾನಗಲ್ ಚುನಾವಣೆ ಕಲಿಸಿದ ಪಾಠ ಇದಕ್ಕೆ ಕಾರಣ. ಒಂದು ಕಡೆ ಪಕ್ಷದ ಒತ್ತಡ ಮತ್ತೊಂದು ಕಡೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸಂಭಾಳಿಸುವುದು ದೊಡ್ಡ ಸವಾಲಾಗಿಯೇ ಹೋಗಿತ್ತು. ಆದರೆ, ಎರಡೂ ಕಡೆಯಲ್ಲಿಯೂ ಲಯ ತಪ್ಪದ ಹಾಗೆ ಪರಿಸ್ಥಿತಿಯನ್ನು ನಿಭಾಯಿಸಿದ್ದು ಚುನಾವಣೆಯಲ್ಲಿ ಬಿಜೆಪಿಗೆ ಆರಂಭಿಕ ತಳಪಾಯ ಗಟ್ಟಿಯಾಗಲು ಸಾಧ್ಯವಾಯಿತು.

    ಇದನ್ನೂ ಓದಿ: ಭಾವಿ ಪತಿ ತನ್ನ ಕರೆ ಸ್ವೀಕರಿಸಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡ ಯುವತಿ!

    ಬಿಎಸ್‌ವೈ ಮುಂಚೂಣಿಗೆ: ಚುನಾವಣಾ ಪ್ರಚಾರ ಸಂದರ್ಭದಲ್ಲಿಯೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಂಚೂಣಿ ನಾಯಕತ್ವ ವಹಿಸಲಾಗಿತ್ತು. ಜೆಡಿಎಸ್ ಜೊತೆಗೆ ಹೊಂದಾಣಿಕೆ ಸೇರಿ ಹಲವು ಸಂದರ್ಭದಲ್ಲಿ ಯಡಿಯೂರಪ್ಪ ಮಾತನಾಡಿದ್ದಕ್ಕೆ ಎಲ್ಲಿಯೂ ಅಪಸ್ವರ ಕೇಳಿ ಬರಲಿಲ್ಲ. ಸಿಎಂ, ಸಚಿವರು, ಪಕ್ಷದ ಅಧ್ಯಕ್ಷರು, ಮುಖಂಡರು ಸೇರಿದಂತೆ ಎಲ್ಲರೂ ಬಿಎಸ್‌ವೈ ನಿಲುವಿಗೆ ಸಾಥ್ ನೀಡಿದರೇ ಹೊರತು, ಯಾವುದನ್ನೂ ಅನಗತ್ಯ ವಿವಾದಕ್ಕೆ ಎಳೆಯಲಿಲ್ಲ. ಇದು ಸಹಜವಾಗಿಯೇ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರುಗಳ ನಡುವೆ ಸಮನ್ವತೆಯ ಗಟ್ಟಿತನ ತಂದಿದ್ದು ಮತ್ತೊಂದು ಮಹತ್ವದ ಹೆಜ್ಜೆ.

    ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ; ಹಬ್ಬದ ಮುಂಗಡ ಹಣ 25 ಸಾವಿರ ರೂಪಾಯಿಗೆ ಹೆಚ್ಚಳ

    ಸಾಮೂಹಿಕ ನಾಯಕತ್ವ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಎಲ್ಲರೂ ಸಾಮೂಹಿಕ ನಾಯಕತ್ವ ಪರಿಕಲ್ಪನೆಯಲ್ಲಿ ಸಚಿವರುಗಳನ್ನು ಜೊತೆಗೂಡಿಸಿಕೊಂಡು ಕೆಲಸ ಮಾಡಿದ್ದರಿಂದ ಅಭ್ಯರ್ಥಿಗಳಲ್ಲಿ ಗೆಲುವಿನ ವಿಶ್ವಾಸ ತುಂಬುವ ಮತ್ತು ಅದಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಲು ಸಹಕಾರಿಯಾದರೆ, ಮತ್ತೊಂದೆಡೆ ಚುನಾವಣೆಗೆ ಬೇಕಾಗುವ ಹಣಕಾಸು ಎಲ್ಲಿಯೂ ಕೊರತೆಯಾಗದಂತೆ ನಿಭಾಯಿಸಿಕೊಳ್ಳುವಲ್ಲಿ ತೋರಿದ ಎಚ್ಚರಿಕೆ ಕೂಡ 11 ಅಭ್ಯರ್ಥಿಗಳ ಗೆಲುವಾಗಲು ಪ್ರಮುಖವಾದ ಕಾರಣ.

    ಇದನ್ನೂ ಓದಿ: ನೋಬಲ್ ಬುಕ್ ಆಫ್ ರೆಕಾರ್ಡ್ಸ್​ಗೆ ಬೆಂಗಳೂರಿನ ಅಮನ

    ದ್ವಿಸದಸ್ಯತ್ವ ಕ್ಷೇತ್ರದಲ್ಲಿ ತಂತ್ರಗಾರಿಕೆ: ದ್ವಿ ಸದಸ್ಯತ್ವ ಹೊಂದಿರುವ ಮೈಸೂರಿನಲ್ಲಿ ಮಾತ್ರ ಬಿಜೆಪಿ ಮುಗ್ಗುರಿಸಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ವಿಜಯಪುರ, ಧಾರವಾಡ, ಬೆಳಗಾವಿ ಸೇರಿದಂತೆ 8 ಸದಸ್ಯರನ್ನು ಹೊಂದಿದ 4 ಕ್ಷೇತ್ರಗಳಲ್ಲಿ ಬಿಜೆಪಿ ವಿಜಯದ ನಗೆ ಬೀರಿದೆ. ದ್ವಿಸದಸ್ಯತ್ವ ಕ್ಷೇತ್ರಗಳಲ್ಲಿ ಎಲ್ಲಿಯೂ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ರಿಸ್ಕ್ ತೆಗೆದುಕೊಳ್ಳಲು ಬಿಜೆಪಿ ಮನಸ್ಸು ಮಾಡಲಿಲ್ಲ. ಅಲ್ಲಿ ತಲಾ ಒಬ್ಬರು ಅಭ್ಯರ್ಥಿಯನ್ನು ನಿಲ್ಲಿಸಲು ಮಾಡಿದ ತಂತ್ರವೂ ಬಿಜೆಪಿಗೆ ಲಾಭವಾಯಿತು.

    ಕುಡಿಯಬೇಡ ಎಂದಿದ್ದಕ್ಕೆ ಮನೆ ಬಿಟ್ಟ ಗಂಡ; ಮನನೊಂದು ವಿಷ ಸೇವಿಸಿದ ಪತ್ನಿ-ಪುತ್ರಿ; ಸತಿಯ ಸಾವಿನ ಸುದ್ದಿ ಕೇಳಿ ಪತಿಯೂ ಆತ್ಮಹತ್ಯೆ

    ಇದು ‘ಎಣ್ಣೆ-ಏಟು’: ಪಾನಮತ್ತ ಚಾಲಕ, ಕೋಪೋದ್ರಿಕ್ತ ಮಾಲೀಕ; ಮುಂದಾಗಿದ್ದೆಲ್ಲ ವೈರಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts