More

    ನೋಬಲ್ ಬುಕ್ ಆಫ್ ರೆಕಾರ್ಡ್ಸ್​ಗೆ ಬೆಂಗಳೂರಿನ ಅಮನ

    ಬೆಂಗಳೂರು: ನಗರದ ಬಿಷಪ್ ಕಾಟನ್ ಬಾಲಕಿಯರ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅಮನ ಜೆ. ಕುಮಾರ್ ಪ್ರತಿಷ್ಠಿತ ನೋಬಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್​ನಲ್ಲಿ ‘ಮೋಸ್ಟ್ ಪ್ರೋಲಿಫಿಕ್ ಪೊಯೆಟ್’ ಎಂಬ ವಿಶ್ವದಾಖಲೆಗೆ ಭಾಜನರಾಗಿದ್ದಾಳೆ.

    ಅಮನ 2020ರ ಏ.4ರಿಂದ 2021ರ ನ.29ರ ಅವಧಿಯಲ್ಲಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಒಟ್ಟು 337 ಕವನಗಳನ್ನು ರಚಿಸಿದ್ದಾಳೆ. ಈ ಎಲ್ಲ ಕವನಗಳು ಒಟ್ಟಾರೆ 10,070 ಸಾಲುಗಳನ್ನು ಒಳಗೊಂಡಿದ್ದು, ಇದು ನೂತನ ವಿಶ್ವ ದಾಖಲೆಯಾಗಿದೆ.

    ಪ್ರಕೃತಿ, ಕೋವಿಡ್ ಸಾಂಕ್ರಾಮಿಕ, ಕುಟುಂಬ, ಹಾಸ್ಯ, ದೇವರು, ಸಾಹಿತ್ಯ, ಭಾವನೆ, ಶಾಂತಿ, ಕೃತಜ್ಞತೆ, ಮಾನವೀಯತೆ, ರಾಷ್ಟ್ರ, ಸಮಾಜ, ಜೀವನ, ಪ್ರೀತಿ, ಮಹತ್ವಾಕಾಂಕ್ಷೆ, ಕನಸು, ಅನುಭವ ಇತರ ವಿಷಯಗಳ ಮೇಲೆ ಎಲ್ಲ ಕವನಗಳೂ ರಚಿಸಲ್ಪಟ್ಟಿವೆ.

    ಇತ್ತೀಚೆಗಷ್ಟೇ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ‘ಭಾರತದ ಅತ್ಯಂತ ಕಿರಿಯ ಕವಯಿತ್ರಿ’ ಹಾಗೂ ಚಿಕ್ಕ ವಯಸಿನಲ್ಲಿ ಕವನಗಳನ್ನು ಬರೆದಿರುವುದಕ್ಕಾಗಿ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ನ ‘ಗ್ರಾ್ಯಂಡ್ ಮಾಸ್ಟರ್’ ದಾಖಲೆಗಳಿಗೆ ಭಾಜನಳಾಗಿದ್ದ ಅಮನ ಅವರ ಎರಡನೇ ಕವನ ಸಂಕಲನ ಶೀಘ್ರದಲ್ಲೇ ಪ್ರಕಟವಾಗಲಿದೆ.

    ಸರ್ಕಾರಿ ನೌಕರರಿಗೆ ಭರ್ಜರಿ ಕೊಡುಗೆ; ಹಬ್ಬದ ಮುಂಗಡ ಹಣ 25 ಸಾವಿರ ರೂಪಾಯಿಗೆ ಹೆಚ್ಚಳ

    ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts