More

    ನೈತಿಕತೆ ಇಲ್ಲದ ಸಮಾಜದಲ್ಲಿ ಬದುಕುವುದಕ್ಕೆ ಆಗುವುದಿಲ್ಲ; ನೈತಿಕ ಪೊಲೀಸ್​ಗಿರಿ ಕುರಿತು ಸಿಎಂ ಮತ್ತೇನೆಂದರು?

    ಮಂಗಳೂರು: ಕರಾವಳಿ ಮಾತ್ರವಲ್ಲದೆ ರಾಜ್ಯದ ಇತರ ಕಡೆಗಳಲ್ಲೂ ನೈತಿಕ ಪೊಲೀಸ್​​ಗಿರಿ ಪ್ರಕರಣಗಳು ಕಂಡುಬಂದಿದ್ದು, ಇದೀಗ ಕರಾವಳಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

    ಮಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತ, ಕರಾವಳಿಯಲ್ಲಿ ನೈತಿಕ ಪೊಲೀಸ್​ಗಿರಿ ಬಗ್ಗೆ ಕೇಳಿದ ಪ್ರಶ್ನೆಗೂ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

    ಇದನ್ನೂ ಓದಿ: ಸತ್ಯ ಶಿವ ಘೋಸ್ಟ್!; ಕೋಟಿಗೊಬ್ಬ ‘ಮೂರರ’ ಗುಟ್ಟು ಬಿಚ್ಚಿಟ್ಟ ಕಿಚ್ಚ…

    ನೈತಿಕ ಪೊಲೀಸ್​ಗಿರಿ ಬಹಳ ಸೂಕ್ಷ್ಮವಾಗಿರುವ ವಿಚಾರ. ಸಮಾಜದಲ್ಲಿ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳು ಇವೆ, ಅವುಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು. ಧಕ್ಕೆಯಾದಾಗ ಕ್ರಿಯೆ-ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂದ ಸಿಎಂ, ಕಾನೂನು ಸುವ್ಯವಸ್ಥೆ ಜತೆಗೆ ಸಾಮಾಜಿಕ ಸಾಮರಸ್ಯ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದರು.

    ಇದನ್ನೂ ಓದಿ: ನದಿತೀರದಲ್ಲಿ ಪೂಜೆಗೆಂದು ಬಂದವರಲ್ಲೊಬ್ಬ ನೀರುಪಾಲಾದ; ಇನ್ನೊಬ್ಬ ನದಿ ಮಧ್ಯೆ ಅಪಾಯದಲ್ಲಿ ಸಿಲುಕಿದ…

    ಯುವಕರು ಸಹ ಸಾಮಾಜಿಕ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ನೈತಿಕತೆ ಇಲ್ಲದ ಸಮಾಜದಲ್ಲಿ ಬದುಕುವುದಕ್ಕೆ ಆಗುವುದಿಲ್ಲ. ನಮ್ಮೆಲ್ಲ ಸಂಬಂಧ, ಶಾಂತಿ-ಸುವ್ಯವಸ್ಥೆ ನಮ್ಮ ನೈತಿಕತೆಯನ್ನು ಅವಲಂಬಿಸಿರುತ್ತದೆ. ಅದೇ ಇಲ್ಲವಾದಾಗ ಆ್ಯಕ್ಷನ್​-ರಿಯಾಕ್ಷನ್​ ಸಹಜ ಎಂದ ಮುಖ್ಯಮಂತ್ರಿ, ಇಲ್ಲಿ ಪ್ರತಿಯೊಬ್ಬರದ್ದೂ ಹೊಣೆಗಾರಿಕೆ ಇದೆ ಎಂದರು.

    ಹನಿಟ್ರ್ಯಾಪ್​ ಗ್ಯಾಂಗ್ ಅರೆಸ್ಟ್​: ಮೈಮುಟ್ಟದೆ ಬಟ್ಟೆ ಬಿಚ್ಚಿಸುತ್ತಿದ್ದರು, ಫೀಮೇಲ್ ಹೆಸರಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು..

    ಮನೆ ಬೀಗ-ಬಾಗಿಲು ಮುರಿಯದೆ, ಕನ್ನ ಹಾಕದೆ ಕಳವು ಮಾಡುತ್ತಿದ್ದ ಕಳ್ಳನ ಬಂಧನ; ಸಂಬಂಧಿಕರ ಮನೆಯನ್ನೂ ಬಿಡಲಿಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts