More

    ನದಿತೀರದಲ್ಲಿ ಪೂಜೆಗೆಂದು ಬಂದವರಲ್ಲೊಬ್ಬ ನೀರುಪಾಲಾದ; ಇನ್ನೊಬ್ಬ ನದಿ ಮಧ್ಯೆ ಅಪಾಯದಲ್ಲಿ ಸಿಲುಕಿದ…

    ಯಾದಗಿರಿ: ನದಿತೀರದಲ್ಲಿ ಪೂಜೆಗೆಂದು ಬಂದಿದ್ದ ಯುವಕರಿಬ್ಬರಲ್ಲಿ ಒಬ್ಬ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದು, ಮತ್ತೊಬ್ಬ ನದಿಮಧ್ಯೆ ಅಪಾಯದಲ್ಲಿ ಸಿಲುಕಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆ ಸಂಭವಿಸಿದೆ.

    ಯಾದಗಿರಿ ನಗರದ ಹೊರಭಾಗದ ಭೀಮಾನದಿಯಲ್ಲಿ ಈ ಅವಘಡ ಸಂಭವಿಸಿದೆ. ಮುದ್ಯಾಳ ಗ್ರಾಮದ ಸ್ನೇಹಿತರಾರ ಸಾಬಣ್ಣ ಹಾಗೂ ಭೀಮರಾಯ ಪೂಜೆಗೆಂದು ಈ ನದಿತೀರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಸಾಬಣ್ಣ ಕಾಲುಜಾರಿ ನದಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಭೀಮರಾಯ ಕೂಡ ನೀರಿಗೆ ಧುಮುಕಿದ್ದ.

    ಇದನ್ನೂ ಓದಿ: ತಾಯಿಯ ತೆವಲಿಗೆ ಬಲಿಯಾದ ಮಗ; ಅಕ್ರಮ ಸಂಬಂಧಕ್ಕೆ ಅಡ್ಡಿಯಾದವನನ್ನು ಪ್ರಿಯಕರನಿಂದ ಕೊಲ್ಲಿಸಿದ ಅಮ್ಮ!

    ಆದರೆ ಸಾಬಣ್ಣ ನೀರಿನ ರಭಸದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಆತನ ರಕ್ಷಣೆಗೆ ಧಾವಿಸಿದ್ದ ಭೀಮರಾಯ ಸಹ ನೀರಲ್ಲಿ ಕೊಚ್ಚಿಹೋದರೂ ನದಿಮಧ್ಯೆ ಸಿಕ್ಕ ಬೃಹತ್ ಬಂಡೆಯ ಆಸರೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳೀಯರು ಬಳಿಕ ಹಗ್ಗದ ಮೂಲಕ ಭೀಮರಾಯನನ್ನು ಅಲ್ಲಿಂದ ಪಾರು ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ನೀರುಪಾಲಾದ ವ್ಯಕ್ತಿಗಾಗಿ ಬೋಟ್​ ಮೂಲಕ ಶೋಧ ನಡೆಸಲಾಗುತ್ತಿದೆ.

    ಭೂಕಂಪನಕ್ಕೆ ಹೆದರಿ ಊರು ಬಿಡುತ್ತಿರುವ ಜನ; ಜಿಲ್ಲಾಧಿಕಾರಿಯ ಅಭಯಕ್ಕೂ ಕಿವಿಗೊಡದೆ ತೆರಳುತ್ತಿರುವ ಜನತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts