More

    ಬಿಜೆಪಿ ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪಲು ಕಾರಣವೇನು? ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು…

    ರಾಯಚೂರು: ಬಿಜೆಪಿ ಎರಡನೇ ಹಂತದ ನಾಯಕರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಹಿರಿಯ ನಾಯಕರಿಗೆ ಟಿಕೆಟ್ ನೀಡಿಲ್ಲ. ಅವರು ಪಕ್ಷ ತೊರೆಯುವುದರಿಂದ ಪಕ್ಷದ ಫಲಿತಾಂಶದ ಮೇಲೆ ಹೆಚ್ಚಿನ ಪರಿಣಾಮ ಆಗುವುದಿಲ್ಲ. ನಮ್ಮ ಪಕ್ಷಕ್ಕೆ ತನ್ನದೇ ಅಪಾರ ಕಾರ್ಯಕರ್ತರ ಹಾಗೂ ನಾಯಕರ ಪಡೆಯಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

    ಕಾಂಗ್ರೆಸ್​ನಲ್ಲಿ ಜಡತ್ವ ಇದೆ!

    ರಾಯಚೂರಿನಲ್ಲಿ ಪರಿಶಿಷ್ಟ ಸಮುದಾಯದ ಅಭಿನಂದನಾ ಸಮಾರಂಭಕ್ಕೆ ಆಗಮಿಸಿದ ವೇಳೆ ಹೆಲಿಪ್ಯಾಡ್​ನಲ್ಲಿ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, ಬಿಜೆಪಿ ಪಕ್ಷ ಕಾಂಗ್ರೆಸ್ ನಂತಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಜಡತ್ವ ಇದೆ. ವಯಸ್ಸಾದವರು ಆ ಪಕ್ಷದಲ್ಲಿ ತಾವಾಗೇ ನಾಯಕತ್ವ ಬಿಟ್ಟುಕೊಟ್ಟ ಉದಾಹರಣೆಗಳಿಲ್ಲ ಎಂದು ಟೀಕಿಸಿದರು.

    ಇದನ್ನೂ ಓದಿ: ಜಗದೀಶ್ ಶೆಟ್ಟರ್ ರಾಜೀನಾಮೆ ನಿರ್ಧಾರದಿಂದ ಕಸಿವಿಸಿಯಾಗಿದೆ; ಡ್ಯಾಮೇಜ್ ಕಂಟ್ರೋಲ್​ಗೆ ಬೇಕಾದ ತಂತ್ರ ರೂಪಿಸಲಾಗುತ್ತಿದೆ! ಸಿಎಂ ಬೊಮ್ಮಾಯಿ

    ಶೆಟ್ಟರ್ ಅವರಿಗೂ ಒಳ್ಳೆಯ ಹುದ್ದೆ ನೀಡುವ ಆಲೋಚನೆ ಪಕ್ಷ ಮಾಡಿತ್ತು!

    ಬಿಜೆಪಿಯಲ್ಲಿ ಯಡಿಯೂರಪ್ಪ ಅವರು ಸೇರಿದಂತೆ ಅನೇಕ ಹಿರಿಯ ನಾಯಕರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನ ತ್ಯಜಿಸಿದ್ದಾರೆ. ಅದೇ ಮಾದರಿಯಲ್ಲಿ ಶೆಟ್ಟರ್ ಅವರಿಗೂ ಒಳ್ಳೆಯ ಹುದ್ದೆ ನೀಡುವ ಆಲೋಚನೆ ಪಕ್ಷ ಮಾಡಿತ್ತು. ಆದರೆ ಶೆಟ್ಟರ್ ಅವರು ಪಕ್ಷ ತ್ಯಜಿಸುವ ನಿರ್ಧಾರ ಮಾಡಿದ್ದು ಸರಿಯಲ್ಲ.

    ಹೊಸ ರೀತಿ ಆಲೋಚನೆ ಮಾಡಿದಾಗ ಪರ ವಿರೋಧ ಸಹಜ!

    ಜಗದೀಶ್ ಶೆಟ್ಟರ್ ಅವರು ಪಕ್ಷ ಬಿಟ್ಟಿದ್ದರಿಂದ ಸಮಸ್ಯೆ ಆಗದು. ಲಿಂಗಾಯತ ಸಮಾಜದ ಎರಡನೇ ಹಂತದ ನಾಯಕರನ್ನು ಬೆಳೆಸುವ ಆಲೋಚನೆಯೊಂದಿಗೆ ಬಿಜೆಪಿ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿತು. ಲಿಂಗಾಯತ ಸಮಾಜದ ವಿರೋಧಿ ಎಂಬುದು ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುವ ತಂತ್ರ. ಯಾವುದೇ ಪಕ್ಷವು ಹೊಸ ರೀತಿ ಆಲೋಚನೆ ಮಾಡಿದಾಗ ರಾಜಕೀಯದಲ್ಲಿ ಸಾಕಷ್ಟು ಪರ ವಿರೋಧ ಸಹಜ. ಪಕ್ಷವು ಮತ್ತೆ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಪೊಲೀಸರಿಗೆ ಗುಡ್​ ನ್ಯೂಸ್; ಚುನಾವಣೆ ಕರ್ತವ್ಯ ಭತ್ಯೆ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts