More

    50 ಡಿಗ್ರಿ ಸೆ. ದಾಟಿದ ತಾಪಮಾನ; ಮಳೆಗಾಗಿ ಮೋಡ ಬಿತ್ತನೆ ಮೊರೆ ಹೋದ ದುಬೈ

    ದುಬೈ: ಭಾರತದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಆದರೆ ದೂರದ ಅರಬ್​ ಸಂಯುಕ್ತ ಸಂಸ್ಥಾನದ ದುಬೈನಲ್ಲಿ ಮಳೆ ಇಲ್ಲದೆ, ತಾಪಮಾನ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ತಾಪಮಾನ ಹೆಚ್ಚಳದಿಂದಾಗಿ ಕೆಂಗಟ್ಟಿರುವ ಜನರು ಇದೀಗ ಮೋಡ ಬಿತ್ತನೆ ಮಾಡಿಕೊಂಡು ಮಳೆ ಆಗುವಂತೆ ಮಾಡಿಕೊಳ್ಳಲಾರಂಭಿಸಿದ್ದಾರೆ.

    ಅರಬ್​ ಸಂಯುಕ್ತ ಸಂಸ್ಥಾನದಲ್ಲಿ ಈ ತಿಂಗಳ ಆರಂಭದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯೆಸ್ ದಾಟಿತ್ತು. ಆ ಹಿನ್ನೆಲೆಯಲ್ಲಿ ಡ್ರೋನ್​ಗಳ ಮೂಲಕ ಮೋಡ ಬಿತ್ತನೆ (ಕ್ಲೌಡ್ ಸೀಡಿಂಗ್) ಮಾಡಲಾಗಿದೆ. ಕ್ಲೌಡ್ ಸೀಡಿಂಗ್​ನಿಂದಾಗಿ ದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದಾಗಿ ಹೇಳಲಾಗಿದೆ. ಮಳೆಯ ವಿಡಿಯೋಗಳನ್ನೂ ಅಲ್ಲಿನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಗಳು ಸೇರಿ ಅನೇಕರು ಹಂಚಿಕೊಳ್ಳಲಾರಂಭಿಸಿದ್ದಾರೆ.

    ಈ ರೀತಿ ಕ್ಲೌಡ್ ಸೀಡಿಂಗ್ ಮೂಲಕ ಕೃತಕ ಮಳೆ ತರಿಸುವುದು ಅರಬ್​ ಸಂಯುಕ್ತ ಸಂಸ್ಥಾನದಲ್ಲಿ ಮಳೆ ಹೆಚ್ಚಿಸುವ ಯೋಜನೆಯ ಒಂದು ಭಾಗವಾಗಿದೆ. ಇದರಿಂದಾಗಿ ವಾರ್ಷಿಕ ಮಳೆಯಲ್ಲಿ ಸುಮಾರು ನಾಲ್ಕು ಇಂಚು ಮಳೆ ಹೆಚ್ಚಾಗುವುದಾಗಿ ತಿಳಿಸಲಾಗಿದೆ. ಈ ಕೃತಕ ಮಳೆಗಾಗಿ 2017ರಲ್ಲಿ ದೇಶವು ಒಂಬತ್ತು ಯೋಜನೆಗಳನ್ನು ಆರಂಭಿಸಿದ್ದು, ಅದಕ್ಕಾಗಿ 15 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ. (ಏಜೆನ್ಸೀಸ್)

    ಅಪರೂಪದ ಮೂನ್ ಫಿಶ್ ಪತ್ತೆ; 45 ಕೆಜಿ ತೂಕದ ಮೀನು ಕಂಡು ಬೆರಗಾದ ಜನ

    ಪ್ರಜಾಪ್ರಭುತ್ವಕ್ಕೆ 5ನೇ ಅಂಗ ಸೇರ್ಪಡೆ! ಯಾವುದು ಅದು? ರಾಯರಡ್ಡಿ ಹೇಳ್ತಾರೆ ಕೇಳಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts