More

    ಪ್ರಜಾಪ್ರಭುತ್ವಕ್ಕೆ 5ನೇ ಅಂಗ ಸೇರ್ಪಡೆ! ಯಾವುದು ಅದು? ರಾಯರಡ್ಡಿ ಹೇಳ್ತಾರೆ ಕೇಳಿ…

    ದೆಹಲಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಎಂಬ ನಾಲ್ಕು ಆಧಾರ ಸ್ತಂಭಗಳಿವೆ. ಇದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇವುಗಳ ಹೊರತಾಗಿಯೂ 5ನೇ ಅಂಗವೊಂದು ಇದೆಯಂತೆ. ಸುಪ್ರೀಂಕೋರ್ಟ್ ವಕೀಲರೊಬ್ಬರು ಕಳಿಸಿದ ಸಂದೇಶದ ಮೇರೆಗೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

    ಕರ್ನಾಟಕದಲ್ಲಿ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂಬ ವಿಚಾರ ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಬಿಎಸ್‌ವೈ ಪರ ಮಠಾಧೀಶರು ಪರೇಡ್​ಗೆ ದೆಹಲಿಯಲ್ಲಿ ಆಕ್ರೋಶ ಹೊರಹಾಕಿದ ರಾಯರೆಡ್ಡಿ, ಕರ್ನಾಟಕದಲ್ಲಿ ಇದೊಂದು ಕೆಟ್ಟ ಸಂಪ್ರದಾಯ. ಜಾತಿ-ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜಾತಿ- ಭೇದ ಮಾಡಲ್ಲ ಎಂದು ಪ್ರಮಾಣವಚನ ಪಡೆದು ಧರ್ಮದ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸ್ವಾಮಿಜೀಗಳು ಹೀಗೆ ಬಹಿರಂಗವಾಗಿ ಬೆದರಿಕೆ ಹಾಕುವುದು ಎಷ್ಟು ಸರಿ? ಇದು ಅವರಿಗೆ ಶೋಭೆ ತರುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

    ಮಠಗಳಿಗೆ ತಮ್ಮದೇ ಆದ ಪರಂಪರೆ ಇದೆ. ಧಾರ್ಮಿಕ ಗುರುಗಳು ಧರ್ಮ ಭೋದಿಸಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಮಠಾಧೀಶರು ತುಳಿತಕ್ಕೊಳಾದ, ಶೋಷಿತರ ಪರ ಬೆಂಬಲಕ್ಕೆ ಇರಬೇಕು. ಸ್ವಾಮೀಜಿಗಳು ಸಮಾಜಕ್ಕೆ ಆದರ್ಶಪ್ರಾಯವಾಗಿರಬೇಕು. ಸ್ವಾಮೀಜಿಗಳು ಘನತೆ ಉಳಿಸಿಕೊಳ್ಳಬೇಕು. ಈ ತರಹ ರಾಜಕಾರಣಿಗಳ ಬೆನ್ನಿಗೆ ನಿಲ್ಲುವುದಲ್ಲ. ಬಿಎಸ್‌ವೈ ಬೆಂಬಲಕ್ಕೆ ನಿಂತಿರುವುದು ಸರಿಯಲ್ಲ. ಆವೇಶಕ್ಕೆ ಒಳಗಾಗಿ ಸ್ವಾಮಿಜಿಗಳು ಹೇಳಿಕೆ ನೀಡಬಾರದು. ಬಿಎಸ್‌ವೈ ಪರ‌ ಮಾತನಾಡಿರುವ ಹೇಳಿಕೆಯನ್ನು ಶ್ರೀಗಳು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ ರಾಯರೆಡ್ಡಿ, ಸಂವಿಧಾನದಲ್ಲಿ ಮೂರು ಅಂಗಗಳಿವೆ. ಮಾಧ್ಯಮವನ್ನು ನಾಲ್ಕನೇ ಅಂಗವಾಗಿ ಪರಿಗಣಿಸಲಾಗಿದೆ. ಈ ಸಾಷ್ಟಾಂಗ ಐದನೇ ಅಂಗವಾಗಿ ಸೇರ್ಪಡೆಗೊಂಡಿದೆ. ಕರ್ನಾಟಕದಲ್ಲಿನ ರಾಜಕಾರಣ ಬೆಳವಣಿಗೆ ನೋಡಿ ಜನರು ನಗುವಂತಾಗಿದೆ. ದೇಶದ ಎದುರು ನಾವು ತಲೆ ತಗ್ಗಿಸಬೇಕಿದೆ ಎಂದು ಆಕ್ರೋಶ ಹೊರಹಾಕಿದರು.

    ಕೈಕೊಟ್ಟ ಪ್ರಿಯಕರ: ಆಧ್ಯಾತ್ಮಿಕ ದೀಕ್ಷೆ ಸ್ವೀಕರಿಸಿದ ಕನ್ನಡ ಬಿಗ್​ಬಾಸ್​ನ ಮಾಜಿ ಸ್ಪರ್ಧಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts