More

    ಮಾನವೀಯತೆ ಉತ್ಕೃಷ್ಟ ಮೌಲ್ಯ

    ಶೃಂಗೇರಿ: ಮಾನವೀಯತೆ ಎಲ್ಲರಲ್ಲೂ ಇರಬೇಕಾದ ಉತ್ಕೃಷ್ಟ ಮೌಲ್ಯ. ಇಂಥ ಮೌಲ್ಯಗಳು ಸಮಾಜದ ಉನ್ನತೀಕರಣಕ್ಕೆ ಅತ್ಯಂತ ಸಹಕಾರಿ ಎಂದು ಶ್ರೀ ಶಾರದಾ ಮಠದ ಹಿರಿಯ ಅಧಿಕಾರಿ ದಕ್ಷಿಣಾಮೂರ್ತಿ ಹೇಳಿದರು.

    ಬುಧವಾರ ಶ್ರೀ ಅಭಿನವವಿದ್ಯಾತೀರ್ಥ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶ್ರೀ ಶಾರದಾಪೀಠ ಹಾಗೂ ಜಿಲ್ಲಾ ಸೇವಾಭಾರತೀ ಸೇವಾಧಾಮದಿಂದ ಮೂರು ದಿನಗಳ ಕಾಲ ಆಯೋಜಿಸಿದ ಬೆನ್ನುಹುರಿ ಸಮಸ್ಯೆಯ ರೋಗಿಗಳಿಗೆ ಉಚಿತ ಗಾಲಿಕುರ್ಚಿ, ಕಿಟ್, ನೀರಿನ ಹಾಸಿಗೆ ವಿತರಣಾ 24ನೇ ವರ್ಷದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆನ್ನುಹುರಿ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸವಲತ್ತು ಕಲ್ಪಿಸುವ ನಿಟ್ಟಿನಲ್ಲಿ ಸೇವಭಾರತೀ ಸೇವಾಧಾಮ ನಿರಂತವಾಗಿ ಕೆಲಸ ಮಾಡುತ್ತಿದೆ. ಶ್ರೀ ಶಾರದಾಪೀಠವು ಸುವರ್ಣಭಾರತೀ ಮಹೋತ್ಸವ ಯೋಜನೆಯಡಿ ಇಂಥ ಸೇವಾಸಂಸ್ಥೆ ಜತೆ ಕೈಜೋಡಿಸಿದೆ ಎಂದರು. ಡಾ. ಅತಿಥಿ ವಿಜಯ್, ಸೇವಾಧಾಮದ ಸಂಸ್ಥಾಪಕ ವಿನಾಯಕರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts