More

  ಬರಗಾಲದಲ್ಲಿ ಹೈನೋದ್ಯಮ ರೈತರ ಆಪ್ತಮಿತ್ರ: ಶಿಮುಲ್ ಅಧ್ಯಕ್ಷ ಕೆ.ಪಿ.ರುದ್ರಗೌಡ

  ಸೊರಬ: ಬರಗಾಲದ ಸಂದರ್ಭದಲ್ಲಿ ಹೈನುಗಾರಿಕೆ ರೈತರನ್ನು ಆರ್ಥಿಕ ಸಂಕಷ್ಟದಿAದ ಪಾರು ಮಾಡಲು ಸಹಕಾರಿಯಾಗಿದೆ ಎಂದು ಶಿವಮೊಗ್ಗ ಶಿಮುಲ್ ನಿರ್ದೇಶಕ ಕೆ.ಪಿ. ರುದ್ರಗೌಡ ಹೇಳಿದರು.
  ತಾಲೂಕಿನ ಜಡೆ ಹೋಬಳಿಯ ಅರೆತಲಗಡ್ಡೆ ಗ್ರಾಮದಲ್ಲಿ ಬುಧವಾರ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಅರೆತಲಗಡ್ಡೆ ಗ್ರಾಪಂ ಹಾಗೂ ಹಾಲು ಉತ್ಪಾದಕರ ಸಂಘ ಏರ್ಪಡಿಸಿದ್ದ ಮಿಶ್ರತಳಿ ಹಸು ಮತ್ತು ಕರುಗಳ ಪ್ರದರ್ಶನ ಹಾಗೂ ಬರಡು ಜಾನುವಾರು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
  ಬರಗಾಲದಲ್ಲಿ ಕೈಹಿಡಿಯುವ ಹಸುಗಳನ್ನು ಪ್ರೀತಿಸಬೇಕು. ಅವುಗಳಿಗೆ ಬೇಕಾಗುವ ಪೋಷಕಾಂಶಗಳನ್ನು ಪ್ರತಿನಿತ್ಯ ನೀಡಿದಾಗ ಹೆಚ್ಚಿನ ಹಾಲು ಪಡೆಯಲು ಸಾಧ್ಯ. ಆಯಾ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳುವ ಹಸುಗಳನ್ನು ಸಾಕಿದಾಗ ಮಾತ್ರ ಹೈನುಗಾರಿಕೆಯಲ್ಲಿ ಲಾಭ ಗಳಿಸಬಹುದು. ಹೊಲದ ಮಣ್ಣನ್ನು ಪರೀಕ್ಷಿಸಿದಂತೆ ಜಾನುವಾರುಗಳನ್ನು ವೈದ್ಯರಿಂದ ಪರೀಕ್ಷಿಸಬೇಕು. ತಾಲೂಕಿನಲ್ಲಿ ಹೈನುಗಾರಿಕೆ ಉತ್ತಮವಾಗಿ ನಡೆಯುತ್ತಿದೆ. ಜಾನುವಾರು ಶಿಬಿರದಿಂದ ರೈತರಿಗೆ ಹಸುಗಳನ್ನು ಸಾಕಲು ಮತ್ತು ಹಾಲು ಉತ್ಪಾದನೆಗೆ ಪ್ರೇರಣೆ ದೊರೆಯುತ್ತದೆ ಎಂದರು.
  ಶಿವಮೊಗ್ಗ ಶಿಮುಲ್ ಉಪವ್ಯವಸ್ಥಾಪಕ ಡಾ. ಶರತ್ ಮಾತನಾಡಿ, ಹಳ್ಳಿಗಳಲ್ಲಿ ಶಿಬಿರಗಳ ಮೂಲಕ ಬರಡು ರಾಸುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಹಸುಗಳಿಗೆ ತಪ್ಪದೆ ವಿಮೆ ಮಾಡಿಸಿಕೊಳ್ಳಬೇಕು. ಇದರಿಂದ ರೈತರು ಆರ್ಥಿಕ ಸಂಕಷ್ಟದಿAದ ಪಾರಾಗಬಹುದು. ಜಿಲ್ಲೆಯಲ್ಲಿ ೭೫ ಸಾವಿರ ಜಾನುವಾರುಗಳಿಗೆ ವಿಮೆ ಮಾಡಿಸಲಾಗಿದೆ. ಜಾನುವಾರುಗಳ ವೈಜ್ಞಾನಿ ಸಾಕಣೆ ಮತ್ತು ನಿರ್ವಹಣೆ, ಸಮತೋಲಿತ ಆಹಾರ ನೀಡುವುದರಿಂದ ಗುಣಮಟ್ಟದ ಹಾಲು ಉತ್ಪಾದನೆ ಸಾಧ್ಯ ಎಂದು ತಿಳಿಸಿದರು.
  ಡಾ. ಎನ್.ಆರ್.ಪ್ರದೀಪ್ ಕುಮಾರ್, ತಲಗಡ್ಡ ಗ್ರಾಪಂ ಅಧ್ಯಕ್ಷೆ ಕರಿಬಸಮ್ಮ, ಶಿಮುಲ್ ನಿರ್ದೇಶಕ ಶಿವಶಂಕರ, ತಲಗಡ್ಡೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಭಾಷ್ ಗೌಡ, ಕಾರ್ಯದರ್ಶಿ ನವೀನ್, ಗ್ರಾಪಂ ಉಪಾಧ್ಯಕ್ಷ ಸೈ-ÀÅಲ್ಲಾ ಖಾನ್, ರಾಮಪ್ಪ, ಆರ್.ಮಂಜುನಾಥ್, ನಾಗರಾಜ್, ಮೋಹನ್ ಗೌಡ್ರು, ರವಿಂದ್ರ ಗೌಡ, ವೈದ್ಯ ಡಾ. ಜಗದೀಶ್, ಪ್ರಭುದೇವ್, ನವೀನ್‌ಕುಮಾರ್, ಇಂದೂಧರ, ಕಾವ್ಯಾ, ಪ್ರವೀಣ್ ಇತರರಿದ್ದರು.

  ಹಳ್ಳಿಗಳ ಉದ್ಧಾರಕ್ಕೆ ವ್ಯವಸಾಯ ಮುಖ್ಯ. ಕೃಷಿಯನ್ನು ಹೆಚ್ಚು ಬಲಪಡಿಸುವ ಅಗತ್ಯವಿದೆ. ಹಾಲು ಉತ್ಪಾದಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಒಕ್ಕೂಟದಿಂದ ಬಡ್ಡಿರಹಿತ ಸಾಲ ಸೌಲಭ್ಯ ನೀಡಲಾಗುತ್ತದೆ. ಉತ್ಪಾದಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
  | ಕೆ.ಪಿ.ರುದ್ರಗೌಡ
  ಶಿವಮೊಗ್ಗ ಶಿಮುಲ್ ನಿರ್ದೇಶಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts