More

    ಸ್ನೇಹಿತರ ಜತೆ ಆಟವಾಡುತ್ತಿದ್ದಂತೆ ಪ್ರಾಣ ಬಿಟ್ಟ 8ನೇ ತರಗತಿ ವಿದ್ಯಾರ್ಥಿ!

    ನವದೆಹಲಿ: 15 ವರ್ಷದ ಬಾಲಕನೊಬ್ಬ ಸ್ನೇಹಿತರ ಜತೆ ಆಟವಾಡುತ್ತಿದ್ದಾಗ ಹೃದಯ ಸ್ತಂಭನದಿಂದ ಪ್ರಾಣ ಬಿಟ್ಟಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

    ರೋಹಿತ್ ಸಿಂಗ್ (15) ಮೃತ ದುರ್ವೈವಿ. 8 ನೇ ತರಗತಿಯಾಗಿದ್ದಾನೆ. ತನ್ನ ಶಾಲೆಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಹಠಾತ್ ಹೃದಯ ಸ್ತಂಭನದಿಂದಾಗಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

    ವಿರಾಮದ ಸಮಯದಲ್ಲಿ ಆಟವಾಡುತ್ತಿದ್ದ ಬಾಲಕ ಪ್ರಜ್ಞೆ ತಪ್ಪಿದ್ದನ್ನು ಗಮನಿಸಿದ ಶಿಕ್ಷಕರು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ರೋಹಿತ್ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.

    ರೋಹಿತ್‌ ಪ್ರಜ್ಞೆ ತಪ್ಪಿದ ನಂತರ ಆತನ ಕೈಕಾಲುಗಳನ್ನು ಒತ್ತಿ ಸ್ವಲ್ಪ ಸಮಯದ ನಂತರ ನೀರು ಕೊಡಲು ಪ್ರಯತ್ನಿಸಿದ್ದೇವೆ. ಆದರೆ, ಬಹಳ ಹೊತ್ತಾದರೂ ಪ್ರಜ್ಞೆ ಬರಲಿಲ್ಲ. ನಂತರ ಆಸ್ಪತ್ರೆಗೆ ದಾಖಲಿಸಿದ್ದೇವೆಂದು ಶಿಕ್ಷಕರು ಹೇಳಿದ್ದಾರೆ.

    ಭಾರತದಲ್ಲಿ ಯುವ ಜನರಲ್ಲಿ ಹೃದಯಾಘಾತದ ಘಟನೆಗಳು ಹೆಚ್ಚುತ್ತಿವೆ ಮತ್ತು ಜಡ ಜೀವನಶೈಲಿ ಮತ್ತು ಆನುವಂಶಿಕ ಕಾರಣಗಳಿಂದ ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

    ಯುವಜನರಲ್ಲಿ ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ:
    ಆರೋಗ್ಯ ತಜ್ಞರ ಪ್ರಕಾರ, ಭಾರತದಲ್ಲಿ ಯುವಜನರಲ್ಲಿ ಹೃದಯಾಘಾತದ ಘಟನೆಗಳು ಹೆಚ್ಚುತ್ತಿವೆ. ಮುಂಬೈನ ಆಸ್ಪತ್ರೆಯೊಂದು ತನ್ನ ತುರ್ತು ವಾರ್ಡ್‌ನಲ್ಲಿ ಕಳೆದ ಎರಡು ತಿಂಗಳಲ್ಲಿ ಹೃದಯಾಘಾತದ ಪ್ರಕರಣಗಳು ಶೇಕಡಾ 15-20 ರಷ್ಟು ಹೆಚ್ಚಾಗಿದೆ ಮತ್ತು ಹೆಚ್ಚಿನ ಪೀಡಿತ ರೋಗಿಗಳು 25 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನವರು ಎಂದು ವರದಿ ಮಾಡಿದೆ.

    ಬಸ್-ಟ್ರಕ್ ಡಿಕ್ಕಿ; ಮದುವೆ ಮನೆಗೆ ಹೊರಟಿದ್ದ 4 ಜನ ಮೃತ್ಯು, 14 ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts