More

    ಕ್ರಿಶ್ಚಿಯನ್ನರೇ ಇಲ್ಲದಿರುವ ಈ ಊರಲ್ಲಿ ಚರ್ಚ್​ ನಿರ್ಮಾಣ! ಅದೂ ಸರ್ಕಾರಿ ಜಾಗದಲ್ಲೇ….ಭುಗಿಲೆದ್ದ ಹಿಂದುಪರ ಸಂಘಟನೆಗಳ ಆಕ್ರೋಶ

    ಬೆಳಗಾವಿ: ಈ ಊರಲ್ಲಿ ದುರ್ಬಿನ್ ಹಾಕಿ ಹುಡುಕಿದರೂ ಸಹ ಒಂದೇ ಒಂದು ಕ್ರಿಶ್ಚಿಯನ್ ಕುಟುಂಬ ಇಲ್ಲ ಆದರೂ ಸಹ ಆ ಊರಲ್ಲಿ ಚರ್ಚ್ ನಿರ್ಮಾಣವಾಗುತ್ತಿದೆ. ಚರ್ಚ್ ಆದರೆ ಆಗಲಿ ಯಾರದ್ದೋ ಜಮೀನಿನಲ್ಲಿ ಕಟ್ತಿದ್ರೆ ಪರವಾಗಿಲ್ಲ, ಆದರೆ ಇದು ನಿರ್ಮಾಣವಾಗುತ್ತಿರುವ ಜಾಗದ ಬಗ್ಗೆ ಈಗ ಈ ಊರ ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ.

    ಇದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಗ್ರಾಮದ ಸರ್ವೆ ನಂಬರ್ ೫೭೬ ರಲ್ಲಿ ಸರ್ಕಾರಿ ಗೈರಾಣ ಜಾಗ ೧೨.೩೦ ಗುಂಟೆ ಜಾಗವಿದೆ.‌ಸದ್ಯ ಇದೇ ಜಾಗದಲ್ಲಿ ಚರ್ಚ್ ನಿರ್ಮಾಣ ಆಗ್ತಿರೋದಕ್ಕೆ ಗ್ರಾಂ ಪಂ ಸದಸ್ಯರೂ ಸೇರಿ ಊರ ಯುವಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಊರಲ್ಲಿ ಒಬ್ಬನೇ ಒಬ್ಬ ಕ್ರಿಶ್ಚಿಯನ್ ಇಲ್ದಿದ್ರೂ ಚರ್ಚ್​ ನಿರ್ಮಿಸುತ್ತಿರುವುದಕ್ಕೆ ಹಿಂದು ಸಂಘಟನೆಗಳ ವಿರೋಧ ವ್ಯಕ್ತಪಡಿಸಿವೆ.

    ಕ್ರಿಶ್ಚಿಯನ್ನರೇ ಇಲ್ಲದಿರುವ ಈ ಊರಲ್ಲಿ ಚರ್ಚ್​ ನಿರ್ಮಾಣ! ಅದೂ ಸರ್ಕಾರಿ ಜಾಗದಲ್ಲೇ....ಭುಗಿಲೆದ್ದ ಹಿಂದುಪರ ಸಂಘಟನೆಗಳ ಆಕ್ರೋಶ

    ಒಂದು ನಿರ್ಮಾಣ ಆಗ್ತಿರೋ ಚರ್ಚ್ ಇನ್ನೊಂದು ಕಡೆ ಕೈಲಿ ಡಾಕ್ಯುಮೆಂಟ್ ಹಿಡ್ಕೊಂಡು ನಿಂತಿರೋ ಯುವಕರು. ಯಾವುದೇ ಪರವಾನಗಿ ಇಲ್ಲದೆ ಸರ್ಕಾರಿ ಜಾಗದಲ್ಲಿ ಚರ್ಚ್ ಕಟ್ಟಡ ಕಟ್ಟುತ್ತಿದ್ದಾರೆ ಮೊದಲಾಗಿ ನಮ್ಮ ಗ್ರಾಮದಲ್ಲಿ ಎಲ್ಲಿಯೂ ಸಹ ಕ್ರಿಶ್ಚಿಯನ್ನರು ಇಲ್ಲ ಹೀಗಾಗಿ ಇದರ ಅವಶ್ಯಕತೆ ಏನಿದೆ ಅಂತ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ.

    ಬಲವಂತ ಬೆಳಗಿ ಗ್ರಾಂ ಪಂ ಸದಸ್ಯ ಬಳೋಬಾಳ ಮಾತನಾಡಿ,ಅನಧಿಕೃತವಾಗಿ ಚರ್ಚ್ ಅನ್ನು ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡ್ತಿರೋ ಬಗ್ಗೆ ಈಗಾಗಲೇ ಹಿಂದೂ ಸಂಘನೆಗಳು ಗೋಕಾಕ ತಹಶೀಲ್ದಾರಗೆ ಕಟ್ಟಡ‌ಕಾಮಗಾರಿ ನಿಲ್ಲಿಸುವ ಕುರಿತು ಮನವಿ ಮಾಡಿಕೊಂಡಿದ್ದಾರೆ.

    ಆದರೆ ಈಗರೆಗೂ ಸಹ ಕಟ್ಟಡ ಕಾಮಗಾರಿ ನಿಂತಿಲ್ಲ. ಇನ್ನು ಈ ಬಗ್ಗೆ ಚರ್ಚ್ ನಿರ್ಮಾಣ ಮಾಡ್ತಿರೋರ ಬಗ್ಗೆ ಕೇಳಿದ್ರೆ ಊರಲ್ಲಿ ನಮಗೆ ಯಾವುದೇ ದೇವಸ್ಥಾನದ ಒಳಗೆ ಪ್ರವೇಶ ನೀಡ್ತಿಲ್ಲ. ನಮಗೆ ಎಲ್ಲಾ ದೇವಸ್ಥಾನಕ್ಕೂ ನಿರ್ಬಂಧ ಹೇರಲಾಗಿದೆ ಹೀಗಾಗಿ ನಾವು ಚರ್ಚ್ ಕಟ್ಟಕೊಂಡು ನಮ್ಮ ಕಾರ್ಯಕ್ರಮಗಳನ್ನ ಅಲ್ಲೆ ಮಾಡ್ಕೊತಿವಿ ಅಂತಿದ್ದಾರೆ.

    ಒಟ್ಟಿನಲ್ಲಿ ಊರಲ್ಲಿ ಯಾವೊಂದು ಕ್ರಿಶ್ಚಿಯನ್ ಕುಟುಂಬ ವಾಸವಿಲ್ಲದಿದ್ದರೂ ಚರ್ಚ್ ನಿರ್ಮಾಣ ಆಗುತ್ತಿರುವುದಕ್ಕೆ ಹಿಂದು ಸಂಘಟಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ ಇತ್ತ ಚರ್ಚ್ ನಿರ್ಮಾಣ ಮಾಡ್ತಿರೋರು ನಮಗೆ ದೇವಸ್ಥಾನ ಪ್ರವೇಶವಿಲ್ಲ ಹೀಗಾಗಿ ನಾವು ಚರ್ಚ್ ಮಾಡ್ಕೊತಿದಿವಿ ಅಂತಿದ್ದಾರೆ.‌ಇದೆಲ್ಲವೂ ಮುಂದೆ ಎಲ್ಲಿಗೆ ಹೋಗಿ ತಲುಪುತ್ತೆ ಎಂಬುದನ್ನು ಕಾದು ನೋಡಬೇಕು. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts