More

    ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

    ಮದನಪಲ್ಲಿ (ಆಂಧ್ರಪ್ರದೇಶ): ಮೌಢ್ಯವನ್ನೇ ತಲೆಗೆ ತುಂಬಿಕೊಂಡಿರುವಾಗ ಎಷ್ಟು ಓದಿದರೆ ಏನು ಪ್ರಯೋಜನ? ಭಾನುವಾರ ಆಂಧ್ರ ಪ್ರದೇಶದಲ್ಲಿ ನಡೆದಿರುವ ದುರಂತ ಘಟನೆಯೊಂದು ಇಡೀ ಮನುಕುಲವನ್ನೇ ಪ್ರಶ್ನೆ ಮಾಡುವಂತಿದೆ. ಸ್ವಾಮೀಜಿಯ ಮಾತು ಕೇಳಿ ಮೌಢ್ಯಕ್ಕೆ ಕಟ್ಟುಬಿದ್ದು ತಾಯಿಯೊಬ್ಬಳು ಹೆತ್ತ ಹೆಣ್ಣು ಮಕ್ಕಳನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

    ಆಂಧ್ರದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮದುವೆಯ ವಯಸ್ಸಿಗೆ ಬಂದಿದ್ದ ತನ್ನಿಬ್ಬರು ಹೆಣ್ಣುಮಕ್ಕಳನ್ನು ತಾಯಿಯೇ ಡಂಬೆಲ್ಸ್​ ಮತ್ತು ತ್ರಿಶೂಲ ಬಳಸಿ ಕ್ರೂರವಾಗಿ ಕೊಂದಿದ್ದಾಳೆ. ಮೃತರನ್ನು ಅಲೈಖ್ಯಾ(27) ಮತ್ತು ಸಾಯಿದಿವ್ಯಾ(22) ಎಂದು ಗುರುತಿಸಲಾಗಿದೆ.

    ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

    ಇದನ್ನೂ ಓದಿರಿ: ಪ್ರೇಯಸಿ ಇಲ್ಲದ ಜೀವನ ವ್ಯರ್ಥ, ತಾಯಿಗೆ ಸೆಲ್ಫಿ ವಿಡಿಯೋ ಕಳಿಸಿ ಯುವಕ ಸೂಸೈಡ್​: ಮನಕಲಕುತ್ತೆ ಇಬ್ಬರ ಲವ್​ ಸ್ಟೋರಿ!

    ಮೌಢ್ಯಕ್ಕೆ ಕಟ್ಟುಬಿದ್ದು ಹೆಣ್ಣುಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸ್ವಾಮೀಜಿಯೊಬ್ಬ ಹೇಳಿದ ಮಾತಿಗೆ ಮರುಳಾಗಿ ಸುಶಿಕ್ಷಿತ ಹೆಣ್ಣುಮಕ್ಕಳನ್ನು ತಾಯಿ ಕೊಲೆ ಮಾಡಿದ್ದಾಳೆ. ಆರೋಪಿ ತಾಯಿಯನ್ನು ಎನ್​. ಪದ್ಮಜಾ ಎಂದು ಗುರುತಿಸಲಾಗಿದೆ. ಪದ್ಮಜಾ ಮದನಪಲ್ಲಿಯ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಡ ಎನ್. ಪುರುಷೋತ್ತಮ್​ ಮದನಪಲ್ಲಿಯ ಸರ್ಕಾರಿ ಮಹಿಳಾ ಕಾಲೇಜಿನ ವೈಸ್​ ಪ್ರಿನ್ಸಿಪಲ್​ ಆಗಿದ್ದಾರೆ. ಮದನಪಲ್ಲಿಯ ಶಿವನಾಗರ್​ ಏರಿಯಾದ ತಮ್ಮ ನಿವಾಸದಲ್ಲಿ ಗಂಡನ ಸಮ್ಮುಖದಲ್ಲೇ ಪದ್ಮಜಾ ಇಬ್ಬರು ಹೆಣ್ಣು ಮಕ್ಕಳನ್ನು ಡಂಬೆಲ್ಸ್​ನಿಂದ ಹೊಡೆದು, ತ್ರಿಶೂಲದಿಂದ ಇರಿದು ಕೊಂಡಿದ್ದಾಳೆ.

    ಮಾದರಿಯಾಗಬೇಕಿದ್ದ ಸುಶಿಕ್ಷಿತ ಕುಟುಂಬ ಮಾಡಿದ್ದೆಷ್ಟು ಸರಿ?
    ವಿಚಿತ್ರವೆಂದರೆ ಇಡೀ ಕುಟುಂಬ ಸುಶಿಕ್ಷಿತರು. ಪುರುಷೋತ್ತಮ್​ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದರೆ, ಪತ್ನಿ ಪದ್ಮಜಾ ಗಣಿತದಲ್ಲಿ ಚಿನ್ನದ ಪದಕ ವಿಜೇತೆ ಹಾಗೂ ತಾವು ನೆಲೆಸಿರುವಲ್ಲಿಯೇ ಪ್ರಖ್ಯಾತ ಖಾಸಗಿ ಕಾಲೇಜನ್ನು ನಡೆಸುತ್ತಿದ್ದಳು. ಮಕ್ಕಳಾದ ಅಲೈಖ್ಯಾ ಭಾರತೀಯ ಅರಣ್ಯ ಸೇವೆ (ಐಎಫ್​ಎಸ್​) ಅರ್ಹತೆ ಪಡೆದಿದ್ದಳು ಮತ್ತು ಮಧ್ಯಪ್ರದೇಶದ ಭೋಪಾಲ್​ನಲ್ಲಿ ಅರಣ್ಯಾಧಿಕಾರಿಯಾಗಿ ಕಳೆದ ವರ್ಷ ನೇಮಕವಾಗಿದ್ದಳು. ಆದರೆ, ಕೋವಿಡ್​ ಲಾಕ್​ಡೌನ್​ ಸಮಯದಲ್ಲಿ ತವರಿಗೆ ಅಲೈಖ್ಯಾ ಆಗಮಿಸಿದ್ದಳು. ಇನ್ನು ಎಂಬಿಎ ಪದವೀಧರೆ ಸಾಯಿದಿವ್ಯಾ ಪಿಜಿ ಮುಗಿಸಿ ಚೆನ್ನೈ ಎ.ಆರ್​.ರೆಹಮಾನ್​ ಮ್ಯೂಸಿಕ್​ ಅಕಾಡೆಮಿಯಲ್ಲಿ ಮ್ಯೂಸಿಕ್​ ಕೋರ್ಸ್​ ಅಧ್ಯಯನ ಮಾಡುತ್ತಿದ್ದಳು.

    ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

    ಘಟನೆ ಹಿನ್ನೆಲೆ ಏನು?
    ಭಾನುವಾರ ರಾತ್ರಿ ಮದನಪಲ್ಲಿ ಶಿವಾಲಯಂ ದೇವಾಲಯದ ರಸ್ತೆ ಬಳಿಯಲ್ಲಿ ಅಕ್ಕಪಕ್ಕದ ನಿವಾಸಿಗಳಿಗೆ ಹೆಣ್ಣುಮಕ್ಕಳ ಚೀರಾಟ ಕೇಳಿಸುತ್ತಿತ್ತು. ಅದ್ಹೇನು ಎಂದು ಪ್ರಾಂಶುಪಾಲ ಪುರುಷೋತ್ತಮ ನಾಯ್ಡು ಅವರ ಮನೆ ಬಳಿಗೆ ಬರುವಷ್ಟರಲ್ಲಿ ಸಾಯಿದಿವ್ಯಾ ಮತ್ತು ಅಲೈಖ್ಯಾ ರಕ್ತದ ಮಡುವಲ್ಲಿ ಒದ್ದಾಡುತ್ತಾ ಪ್ರಾಣಬಿಟ್ಟಿದ್ದರು. ಅದೂ ಮೈಮೇಲೆ ಬಟ್ಟೆ ಇಲ್ಲದೆ ಬೆತ್ತಲೆ ಸ್ಥಿತಿಯಲ್ಲಿ ಮೃತದೇಹಗಳಿದ್ದವು. ಪಕ್ಕದಲ್ಲೇ ಹೆತ್ತವರೂ ಇದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಈ ದೃಶ್ಯ ನೋಡುತ್ತಿದ್ದಂತೆ ಬೆಚ್ಚಿಬಿದ್ದರು. ಹೆತ್ತಮಕ್ಕಳನ್ನು ಬೆತ್ತಲೆಗೊಳಿಸಿ ಪೂಜೆ ಮಾಡಿ ನಂತರ ತಾಯಿಯೇ ಡಂಬಲ್ಸ್​​ನಿಂದ ತಲೆಗೆ ಹೊಡೆದು, ತ್ರಿಶೂಲದಿಂದ ಚುಚ್ಚಿ ಕೊಂದಿರುವ ಸುದ್ದಿ ಕೇಳುತ್ತಿದ್ದಂತೆ ಸ್ಥಳೀಯರೂ ಬೆಚ್ಚಿಬಿದ್ದಿದ್ದಾರೆ.

    ಇದನ್ನೂ ಓದಿರಿ: ಸಲಿಂಗ ವಿವಾಹವಾದ ಒಂದೇ ವರ್ಷದಲ್ಲಿ ಯುವತಿಯ ದುರಂತ ಸಾವು: ಇಬ್ಬರ ನಡುವೆ ನಡೆದಿದ್ದಾದರೂ ಏನು?

    ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಮೊದಲು ಅವರು ಮನೆ ಪ್ರವೇಶಿಸಲು ಪದ್ಮಜಾ ನಿರಾಕರಿಸಿದ್ದಾರೆ. ಬಳಿಕ ,’ನನ್ನ ಮಕ್ಕಳು ಮೃತಪಟ್ಟಿಲ್ಲ. ಅವರನ್ನು ಮುಟ್ಟಬೇಡಿ. ನಾಳೆ ಅವರಿಗೆ ಜೀವ ಬರುತ್ತೆ… ‘ ಎಂದು ಹೇಳಿದ್ದಾಳೆ. ಸದ್ಯ ಕೊಲೆ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ವೇಳೆ, ‘ಇಂದು (ಭಾನುವಾರ)ಕಲಿಯುಗ ಅಂತ್ಯ ಆಗುತ್ತೆ, ನಾಳೆ(ಸೋಮವಾರ) ಸತ್ಯಯುಗ ಆರಂಭವಾಗುತ್ತೆ. ಸತ್ಯಯುಗದ ಮೊದಲ ದಿನವೇ ನನ್ನ ಮಕ್ಕಳಿಬ್ಬರೂ ಮತ್ತೆ ಹುಟ್ಟಿ ಬರುತ್ತಾರೆ. ಕಲಿಯುಗ ಅಂತ್ಯವಾಗಲೆಂದು ಪೂಜೆ ಮಾಡಿ ಮಕ್ಕಳನ್ನು ಬಲಿಕೊಡಲಾಗಿದೆ, ನನ್ನ ಮಕ್ಕಳಿಬ್ಬರೂ ಸತ್ತಿಲ್ಲ, ಮತ್ತೆ ಅವರಿಗೆ ಜೀವ ಬರುತ್ತೆ…’ ಎಂದು ಬಾಯ್ಬಿಟ್ಟಿದ್ದಾರೆ. ಇವರ ಮೌಢ್ಯದ ಹಿಂದೆ ಸ್ವಾಮೀಜಿಯ ಕೈವಾಡ ಇರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

    ಹೆತ್ತಮಕ್ಕಳನ್ನೇ ಬೆತ್ತಲೆಗೊಳಿಸಿ ಪೂಜೆ ಮಾಡಿದ್ರು, ಬಳಿಕ ತಲೆ ಒಡೆದು ಕೊಂದೇಬಿಟ್ರು! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

    ಕೊನೆಗೂ ಸಾವಿನ ಮನೆಯ ಕದ ತಟ್ಟಿದ ನಟಿ ಜಯಶ್ರೀ! ಕಳೆದ 7 ತಿಂಗಳಲ್ಲಿ ಆಕೆ ಅನುಭವಿಸಿದ್ದ ನರಕಯಾತನೆ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts