More

    ಶಿಕ್ಷಣದಿಂದ ಮಕ್ಕಳ ಭವಿಷ್ಯ ರೂಪಿಸಿ

    ಬೀರೂರು: ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಉತ್ತಮ ಭವಿಷ್ಯಕ್ಕೆ ಅಡಿಪಾಯ ಹಾಕಬೇಕು. ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಎಚ್ಚರವಹಿಸಬೇಕು ಎಂದು ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿ ಅಧ್ಯಕ್ಷತೆ ಗೀತಾ ಖಂಡೋಜಿರಾವ್ ತಿಳಿಸಿದರು.

    ಭಾವಸಾರ ಕ್ಷತ್ರಿಯ ಮಂಡಳಿಯಿಂದ ಹಿಂಗುಳಾಂಬಿಕಾ ದೇವಿ ಜಯಂತಿ ಹಾಗೂ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಹೆಣ್ಣೊಂದು ಕಲಿತರೆ ಮನೆಯೊಂದು ಕಲಿತಂತೆ ಎಂಬಂತೆ ಹೆಣ್ಣು ತೊಟ್ಟಿಲು ತೂಗುವುದಷ್ಟೇ ಅಲ್ಲ ದೇಶವನ್ನೇ ಆಳುವ ಶಕ್ತಿಯನ್ನೂ ಹೊಂದಿದ್ದಾಳೆ ಎಂಬುದನ್ನು ನಿರೂಪಿಸಿದ್ದಾಳೆ. ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಾಧಿಸುವ ಮೂಲಕ ಹೆಣ್ಣು ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾಳೆ ಎಂದರು. ನಿರ್ಮಲಾ ನಟರಾಜ್, ಇಂದುಮತಿ ಶಂಕರರಾವ್, ರೂಪಾ ಚಂದ್ರಶೇಖರ್, ಸಂಘದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts