More

    ಬರಹವೇ ನನ್ನ ಬದುಕು

    ಚಿತ್ರದುರ್ಗ: ಸಾಹಿತ್ಯ, ಸಿನಿಮಾ ಕ್ಷೇತ್ರದಲ್ಲಿ ಏನೇ ಸಾಧನೆ ಮಾಡಿದ್ದರೂ ದುರ್ಗದ ನೆಲವೇ ಅದಕ್ಕೆ ಮೂಲ ಪ್ರೇರಣೆಯಾಗಿದೆ ಎಂದು ಖ್ಯಾತ ಸಾಹಿತಿ ಬಿ.ಎಲ್.ವೇಣು ಹೇಳಿದರು.

    ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರ, ಕೋಟೆ ವಾಯುವಿಹಾರಿಗಳ ಬಳಗ, ಸೃಷ್ಠಿಸಾಗರ ಪ್ರಕಾಶನ, ವೇಣು ಅಭಿಮಾನಿಗಳ ಬಳಗ, ಅವರ 75ನೇ ಜನ್ಮದಿನದ ಅಂಗವಾಗಿ ಅವರ ನಿವಾಸದಲ್ಲಿ ಬುಧವಾರ ಏರ್ಪಡಿಸಿದ್ದ ಗೌರವ ಸಮರ್ಪಣೆ ಸಂದರ್ಭ ಮಾತನಾಡಿದರು.

    ನನ್ನ ಸಾಧನೆಗೆ ದುರ್ಗದ ನೆಲದೊಂದಿಗೆ ಸಿನಿ ಕಲಾವಿದರ ಪ್ರೋತ್ಸಾಹವಿದೆ. ಚಿತ್ರದುರ್ಗವೇ ನನ್ನ ಸರ್ವಸ್ವ. ಒಂದು ವೇಳೆ ದುರ್ಗ ಬಿಟ್ಟು ಹೋಗಿದ್ದರೆ ಈ ಮಟ್ಟದ ಸಾಧನೆ ಸಾಧ್ಯವಾಗುತ್ತಿರಲ್ಲಿ ಎಂದರು.

    ನನಗೆ ಬರವಣಿಗೆ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ, ವ್ಯವಹಾರ ಜ್ಞಾನವೂ ತಿಳಿದಿಲ್ಲ. ನನ್ನ ಬರಹವೇ ನನ್ನ ಬದುಕು, ಆರೋಗ್ಯದ ಗುಟ್ಟು. ಬದುಕಿರುವವರೆಗೂ ಬರೆಯುತ್ತೇನೆ, ಬರೆಯುವವರೆಗೂ ಬದುಕುತ್ತೇನೆ ಎಂದು ತಿಳಿಸಿದರು.

    ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ಹಿರಿಯ ವಕೀಲ ಬಿ.ಕೆ.ರಹಮತ್ ಉಲ್ಲಾ, ಪತ್ರಕರ್ತ ಮೇಘ ಗಂಗಾಧರ ನಾಯಕ್ ಮಾತನಾಡಿದರು.

    ಕಸಾಪ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ವಕೀಲರಾದ ಪ್ರತಾಪ್ ಜೋಗಿ, ಇರ್ಫಾನುಲ್ಲಾ, ಮದಕರಿ ನಾಯಕ ಸಾಂಸ್ಕೃತಿಕ ಕೇಂದ್ರದ ಗೋಪಾಲಸ್ವಾಮಿ ನಾಯಕ್, ಪತ್ರರ್ಕರಾದ ನರೇನಹಳ್ಳಿ ಅರುಣ್‌ಕುಮಾರ್, ಎಚ್.ಲಕ್ಷ್ಮಣ್, ತಿಪ್ಪೇಸ್ವಾಮಿ ಸಂಪಿಗೆ, ವಾಯುವಿಹಾರಿಗಳ ಸಂಘದ ಅಧ್ಯಕ್ಷ ಸತ್ಯಪ್ಪ, ಉಡಸಾಲಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts