ಶಿಕ್ಷಕ ವೃತ್ತಿ ಯಶಸ್ಸಿಗೆ ಬದ್ಧತೆ ಅಗತ್ಯ

0 Min Read
ಶಿಕ್ಷಕ ವೃತ್ತಿ ಯಶಸ್ಸಿಗೆ ಬದ್ಧತೆ ಅಗತ್ಯ

ಚಿತ್ರದುರ್ಗ: ಶಿಕ್ಷಕ ವೃತ್ತಿಯ ಯಶಸ್ಸಿಗೆ ಬದ್ಧತೆ ಅಗತ್ಯವೆಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.

ಡಯಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಕ-ಶಿಕ್ಷಣ-ವಿದ್ಯಾರ್ಥಿ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ವೃತ್ತಿಯ ಯಶಸ್ವಿಗೆ ವಿಷಯದ ಸಾಮರ್ಥ್ಯ, ಬದ್ಧತೆ ಹಾಗೂ ನಡತೆ ಮುಖ್ಯ ಎಂದರು.

ನೈತಿಕ ಶಿಕ್ಷಣದಿಂದ ಆರೋಗ್ಯವಂಥ ಸಮಾಜ ನಿರ್ಮಾಣವಾಗುತ್ತದೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದು ತಿಳಿಸಿದರು.

ಉಪನ್ಯಾಸಕ ಎಂ.ರಂಗನಾಥ್ ಮಾತನಾಡಿ, ಉತ್ತಮ ಬೋಧನೆಗೆ ಪೂರ್ವ ತಯಾರಿ ಮುಖ್ಯ ಎಂದು ಹೇಳಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾರಾಣಿ, ಪ್ರಶಿಕ್ಷಣಾರ್ಥಿಗಳಾದ ಶಾಂತಲಾ, ನಸ್ರಿನ್‌ತಾಜ್, ವಿಶ್ವನಾಥ್, ಸುಮಯಾ ಇತರರಿದ್ದರು.

See also  ವಿದ್ಯಾರ್ಥಿನಿಗೆ ಬಲವಂತ ‘ಅಶ್ಲೀಲ’ ವಿಡಿಯೋ ತೋರಿಸಿದ ಶಿಕ್ಷಕ: ಪೋಕ್ಸೋ ಕಾಯ್ದೆ ಕೇಸ್ ದಾಖಲು
Share This Article