More

    ಮೊಳಕಾಲ್ಮೂರಲ್ಲಿ ಸಾಯಿಬಾಬಾ ಪಲ್ಲಕ್ಕಿ ಉತ್ಸವ

    ಮೊಳಕಾಲ್ಮೂರು: ಸಾಯಿಬಾಬಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮುಂಜಾನೆಯಿಂದಲೇ ಬಾಬಾ ಮೂರ್ತಿಗೆ ವಿಶೇಷ ಅಲಂಕಾರ, ಕ್ಷೀರಾಭಿಷೇಕ, ಪೂಜೆ, ಕಾಕಡಾರತಿ ಸಲ್ಲಿಸಲಾಯಿತು. ಮಾತೆಯರು ಸಾಯಿ ಸತ್ಯವ್ರತ, ಶಿವನಾಮ ಸ್ಮರಣೆ ಮಾಡಿದರು. ಸಂಜೆ ಸಾಯಿಬಾಬಾ ಪಲ್ಲಕ್ಕಿ ಉತ್ಸವ ವೈಭವದಿಂದ ಸಾಗಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

    ಜ್ಞಾನ ಧಾರೆ ಸಂಕಲ್ಪ ದೊಡ್ಡದು:
    ಮಾನವನ ಅಜ್ಞಾನ ತೊಡೆದು ಹಾಕುವ ಗುರುವಿನ ಸಂಕಲ್ಪ ದೊಡ್ಡದು ಎಂದು ರಾಂಪುರ ರುದ್ರಾಕ್ಷಿ ಮಠದ ಡಾ.ವೀರಭದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಮೊಳಕಾಲ್ಮೂರು ಪಟ್ಟಣದ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಬುಧವಾರ ಶಿರಡಿ ದ್ವಾರಕಾಮಯಿ ಟ್ರಸ್ಟ್ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ಸುಜ್ಞಾನ ಧಾರೆ ಎರೆಯುವ ಗುರು ಸ್ಮರಣೆ ಶ್ರೇಷ್ಠವಾದ ದಿನ. ನ್ಯಾಯ, ನೀತಿ, ಸತ್ಯದ ದಾರಿಯ ತೋರುತ್ತಾನೆ ಎಂದು ಹೇಳಿದರು.

    ಮನುಷ್ಯನಿಗೆ ಹಣ, ಆಸ್ತಿ ಯಾವುದೂ ಶಾಶ್ವತವಲ್ಲ. ಸ್ವಾವಲಂಬಿ ಜೀವನ ನಡೆಸಬೇಕು. ಉಪಕಾರದ ಮನೋಭಾವ ರೂಢಿಸಿಕೊಂಡರೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದರು. ಬ್ರಹ್ಮಗಿರಿ ಬೆಟ್ಟದ ಸೋಮಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಂ.ಎಸ್.ಪ್ರಸನ್ನಕುಮಾರ, ಎಂ.ಎಸ್.ಮಾರ್ಕಂಡೇಯ, ಎಂ.ಎಸ್.ರವೀಂದ್ರನಾಥ, ಕೆರೆ ಅಭಿಷೇಕ್, ಎಂ.ಎಸ್.ಮಂಜುನಾಥ, ವಿ.ಎನ್.ರಾಜಶೇಖರ, ಎಂ.ಕೆ. ಶ್ರೀವತ್ಸ, ಎಂ.ಪಿ.ಭೀಮರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts