More

    ಮೃಗಾಲಯ, ಮುರುಘಾವನದತ್ತ ಜನರ ಚಿತ್ತ

    ಚಿತ್ರದುರ್ಗ: ಲಾಕ್‌ಡೌನ್ ಸಡಿಲಗೊಂಡ ಬಳಿಕ ನಗರದ ಪ್ರಮುಖ ಪ್ರವಾಸಿ ತಾಣಗಳ ಪೈಕಿ ಆಡು ಮಲ್ಲೇಶ್ವರ ಕಿರು ಮೃಗಾಲಯ, ಶ್ರೀ ಮುರುಘಾ ವನ ಹಾಗೂ ಚಂದ್ರವಳ್ಳಿಗಳ ಕಡೆ ಜನರು ನಿಧಾನವಾಗಿ ಮುಖ ಮಾಡುತ್ತಿದ್ದಾರೆ.

    ಆದರೆ ಕೋಟೆ ಪ್ರವೇಶಕ್ಕೆ ಭಾರತೀಯ ಪುರಾತತ್ವ ಇಲಾಖೆ ಇನ್ನೂ ಅನುಮತಿ ಕೊಟ್ಟಿಲ್ಲ. ಆದರೆ ಅಲ್ಲಿಯ ದೇವಾಲಯಗಳಿಗೆ ಮಂಗಳವಾರ ಮತ್ತು ಶುಕ್ರವಾರ ಹೋಗಿ ಬರಲು ಸ್ಥಳೀಯರಿಗೆ ಅವಕಾಶ ಮಾಡಿ ಕೊಟ್ಟಿದೆ.

    ಮೃಗಾಲಯಕ್ಕೆ ಇಮೊ ಜೋಡಿ: ಲಾಕ್‌ಡೌನ್ ಘೋಷಣೆ ಸಂದರ್ಭದಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಆಡುಮಲ್ಲೇಶ್ವರ ಮೃಗಾಲಯಕ್ಕೆ ಒಂದು ಇಮೊ ಜೋಡಿ ಸೇರ್ಪಡೆಯಾಗಿದೆ. ಮಾಸ್ಕ್ ಇಲ್ಲದವರನ್ನು ಜೋಗಿಮಟ್ಟಿ ಪ್ರವೇಶ ದ್ವಾರದಲ್ಲೇ ತಡೆದು ಹಿಂದಕ್ಕೆ ಕಳಿಸಲಾಗುತ್ತ ದೆ. ಮೃಗಾಲಯ ಪ್ರವೇಶ ದ್ವಾರದಲ್ಲಿ ಬ್ರೇಕಿಂಗ್ ಸ್ಯಾನಿಟೈಸರ್ ಇಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಬಳಿಕ ವೀಕ್ಷಕರು ಮೃಗಾಲಯಕ್ಕೆ ಹೋಗ ಬಹುದಾಗಿದೆ. ಎಲ್ಲ ಪ್ರಾಣಿ-ಪಕ್ಷಿಗಳ ವೀಕ್ಷಣೆಗೆ ಅನುಕೂಲವಾಗುವಂತೆ ರೂಟ್ ನಿಗದಿಪಡಿಸಿ ಬ್ಯಾರಿಕೇಡ್‌ಗಳನ್ನು ಅಳವಡಿ ಸಲಾಗಿದೆ.

    ಜೂನ್ 8 ರಿಂದ 18 ರವರೆಗೆ ನಗರದ ಶ್ರೀ ಮುರುಘಾವನಕ್ಕೂ ಭೇಟಿ ಕೊಟ್ಟ ವೀಕ್ಷಕರ ಸಂಖ್ಯೆ ಅಂದಾಜು ಸಾವಿರ ತಲುಪಿದೆ. ನಗರದ ಚಂದ್ರವಳ್ಳಿಯಲ್ಲಿ ವಾಯುವಿಹಾರಿಗಳಿಗೆ ಹಾಗೂ ವೀಕ್ಷಕರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಅಲ್ಲಿಯ ಗುಹೆಗಳಿಗೆ ಇನ್ನೂ ಪ್ರವೇಶ ಸಿಕ್ಕಿಲ್ಲ. ಈ ಎಲ್ಲ ಸ್ಥಳಗಳಲ್ಲೂ ಸೋಂಕು ನಿಯಂತ್ರಣ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

    ವಹಿವಾಟು ಇಲ್ಲ: ಗ್ರಾಹಕರ ಪರಸ್ಪರ ಅಂತರ ಕಾಪಾಡುವ ಷರತ್ತಿನೊಂದಿಗೆ ಹೋಟೆಲ್‌ಗಳು ಆರಂಭವಾಗಿದ್ದರೂ, ವಹಿವಾಟಿನ ಪ್ರಮಾಣ ಸಹಜ ಸ್ಥಿತಿ ತಲುಪಿಲ್ಲ. ವಸತಿ ಗೃಹಗಳು ಭರ್ತಿ ಆಗುತ್ತಿಲ್ಲ. ಖಾಸಗಿ ಬಸ್ಸುಗಳ ಸಂಚಾರ ಆರಂಭವಾಗಿಲ್ಲ. ಕೆಎಸ್ ಆರ್‌ಟಿಸಿ ಹಳ್ಳಿಗಳಿಗೆ ಬಸ್ ಸಂಚಾರ ಆರಂಭಿಸಿದೆ. ಆದರೆ ಬಸ್ಸುಗಳು ಕಡಿಮೆ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದರಿಂದ ನಗರಕ್ಕೆ ಬಂದು ಹೋಗುವಂಥ ಗ್ರಾಮೀಣರ ಸಂಖ್ಯೆಯೂ ಕಡಿಮೆ ಇದೆ.

    ಜೂ.8 ರಿಂದ ಒಂದು ವಾರದೊಳಗೆ 609 ವೀಕ್ಷಕರು ಭೇಟಿ ಕೊಟ್ಟಿದ್ದಾರೆ. ಕಳೆದ ವರ್ಷ ಈ ಅವಧಿಯಲ್ಲಿ 277 ವೀಕ್ಷಕರು ಬಂದಿದ್ದರು. ಕಳೆದ ಹತ್ತು ದಿನದಲ್ಲಿ ವೀಕ್ಷಕರ ಸಂಖ್ಯೆ ಅಂದಾಜು ಒಂದು ಸಾವಿರ ತಲುಪಿದೆ.
    > ವಸಂತ್, ಆರ್‌ಎಫ್‌ಒ, ಆಡುಮಲ್ಲೇಶ್ವರ ಮೃಗಾಲಯ, ಚಿತ್ರದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts