More

    ಬಡವರ ನೆರವಿಗೆ ಸರ್ಕಾರ ಸ್ಪಂದಿಸಲಿ

    ಚಿತ್ರದುರ್ಗ: ಕೋವಿಡ್-19 ಮಹಾಮಾರಿಯಿಂದ ತೊಂದರೆಗೆ ಒಳಗಾಗಿರುವ ವಲಸೆ ಕಾರ್ಮಿಕರು, ಬಡವರು ಹಾಗೂ ನೋವಿಗೆ ಸ್ಪಂದಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿ ಪ್ರಮುಖರು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ವಲಸೆ ಕಾರ್ಮಿಕರು, ಬಡವರು, ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸಬೇಕು. ಅವರಿಗೆ ಯೋಗ್ಯ ಆಹಾರ, ವಸತಿ ವೈದಕೀಯ ಚಿಕಿತ್ಸೆಯೊಂದಿಗೆ ಅವರೆಲ್ಲರನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು.

    ಬಡ ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಧನ ಸಹಾಯ, ಕೌಟುಂಬಿಕ ದೌರ್ಜನ್ಯ ತಡೆಯಬೇಕು, ಮದ್ಯ ಮಾರಾಟವನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕು, ಆಶಾ ಕಾರ್ಯಕರ್ತೆಯರು, ಐಸಿಡಿಎಸ್, ಬಿಸಿಯೂಟ ಹಾಗೂ ಇನ್ನಿತರ ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯವನ್ನು ಒದಗಿಸಬೇಕು, ಕಾರ್ಮಿಕರ ಕೆಲಸದ ವೇಳೆ ವಿಸ್ತರಿಸಬಾರದು ಆಗ್ರಹಿಸಿ ಎಡಿಸಿ ಸಿ.ಸಂಗಪ್ಪ ಅವರಿಗೆ ಮನವಿ ಸಲ್ಲಿಸಿದರು. ಎಐಎಂಎಸ್‌ಎಸ್ ಸಂಚಾಲಕಿ ಸುಜಾತಾ, ಪ್ರಮುಖರಾದ ಮೇಘನಾ, ಕುಮುದಾ, ತ್ರಿವೇಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts