More

  ವಿಷ ಕುಡಿಸಿ ಮಹಿಳೆ ಹತ್ಯೆಗೆ ಯತ್ನ

  ಚಿತ್ರದುರ್ಗ: ಬಲವಂತದಿಂದ ವಿಷ ಕುಡಿಸಿ ಪತ್ನಿ ಕೊಲೆಗೆ ಯತ್ನಿಸಿದ್ದ ಆರೋಪದಡಿ ಪತಿ ಹಾಗೂ ಸಂಬಂಧಿಕನ ವಿರುದ್ಧ ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಎಸ್ಪಿ ಡಾ.ಕೆ.ಅರುಣ್ ಹೇಳಿದರು.

  ಪತಿ ಲೋಹಿತ್‌ಕುಮಾರ್ ಹಾಗೂ ಸಂಬಂಧಿ ಶಶಿಕುಮಾರ್, ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದ್ದರೆಂದು ಭೀಮಸಮುದ್ರದ ನೇತ್ರಾವತಿ (26) ದೂರು ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.

  ಈ ಕುರಿತಂತೆ ಆರೋಪಿಗಳ ವಿರುದ್ಧ ಕೊಲೆ ಯತ್ನ ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ. ಲೋಹಿತ್‌ಕುಮಾರ್ ಹಾಗೂ ನೇತ್ರಾವತಿ 2015 ಜ.18ರಂದು ಮದುವೆಯಾಗಿದ್ದರು.

  ಬಳಿಕ ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ್ದ. ಜತೆಗೆ ನನಗೆ ಗೊತ್ತಿಲ್ಲದಂತೆ 5 ತಿಂಗಳ ಹಿಂದೆ ಅರ್ಜಿ ಸಲ್ಲಿಸಿ ವಿಚ್ಛೇದನ ಪಡೆದು, ನನ್ನನ್ನು ತವರಿಗೆ ಕಳಿಸಿದ್ದ. ಜ.26ರಂದು ಪತಿ ಮತ್ತೊಂದು ಮದುವೆಯಾಗುತ್ತಿದ್ದು, ಇದನ್ನು ತಡೆಯುವಂತೆ ಪೊಲೀಸರಿಗೆ ದೂರು ಕೊಡಲು ಚಿತ್ರದುರ್ಗಕ್ಕೆ ಹೋಗಿದ್ದೇ.

  ಆದರೆ, ಹಿರಿಯ ಅಧಿಕಾರಿಗಳ ಭೇಟಿ ಸಾಧ್ಯವಾಗದೇ ಗ್ರಾಮಕ್ಕೆ ಹಿಂತಿರುಗಿದ್ದಾಗ, ವಿಷಯ ತಿಳಿದ ಪತಿ ಬಲವಂತದಿಂದ ಮನೆಗೆ ಕರೆದೊಯ್ದು ಸಂಬಂಧಿ ನೆರವಿನೊಂದಿಗೆ ಬಲವಂತದಿಂದ ವಿಷಕುಡಿಸಿದನೆಂದು ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ. ಅಸ್ವಸ್ಥಳಾಗಿದ್ದ ಆಕೆ ದಾವಣಗೆರೆ ಆಸ್ಪತ್ರೆಯಲ್ಲಿ ಜೀವಾಪಾಯದಿಂದ ಪಾರಾಗಿದ್ದಾಳೆಂದು ಎಸ್ಪಿ ತಿಳಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts