More

    ಕೇಂದ್ರದ ಭರವಸೆಗಳು ಈಡೇರಿಲ್ಲ

    ಚಿತ್ರದುರ್ಗ: ಸಿಎಎ ಜಾರಿಗೊಳಿಸಿದ ಕೇಂದ್ರ ವಿರುದ್ಧದ ಜನ ಜಾಗೃತಿ ಮೊದಲ ಹಂತವಾಗಿ ಸಮಾಜವಾದಿ ವಿಚಾರ್ ಯಾತ್ರೆ ಕೈಗೊಳ್ಳಲಾಗಿದೆ ಎಂದು ವಿಧಾನಪರಿಷತ್ ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಹೇಳಿದರು.

    ಮಹಾತ್ಮ ಗಾಂಧಿ 150ನೇ ಜಯಂತ್ಯುತ್ಸವ ಅಂಗವಾಗಿ ಜ.30ಕ್ಕೆ ಹೊಸದಿಲ್ಲಿಯಲ್ಲಿ ಆರಂಭವಾಗಿರುವ ಯಾತ್ರೆ ಶನಿವಾರ ನಗರದ ವನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ಸಂದರ್ಭ ಮಾತನಾಡಿದರು.

    ಏಳು ರಾಜ್ಯಗಳಲ್ಲಿ ಐದು ಸಾವಿರ ಕಿ.ಮೀ. ಕ್ರಮಿಸಿ ಈಗ ಕರ್ನಾಟಕಕ್ಕೆ ಬಂದಿದೆ. ಸಿಎಎಯಿಂದ ಆಗುವ ಅನಾನುಕೂಲಗಳ ಕುರಿತಂತೆ ಜನರಿಗೆ ತಿಳಿಸಲಾಗುತ್ತಿದೆ ಎಂದರು.

    ಜನರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಮೂಲ ಸೌಲಭ್ಯಗಳು ಸಿಗುತ್ತಿಲ್ಲ. ಆದರೆ, ಕೇಂದ್ರ ಇತ್ತ ಗಮನ ಕೊಡದೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿಗೊಳಿಸಿದೆ. 2014ರ ಲೋಕಸಭಾ ಚುನಾವಣಾ ಪೂರ್ವ ನರೇಂದ್ರ ಮೋದಿ ಕೊಟ್ಟಿದ್ದ ಭರವಸೆಗಳೆ ಇನ್ನೂ ಈಡೇರಿಲ್ಲ ಎಂದು ದೂರಿದರು.

    ಮಧ್ಯಪ್ರದೇಶದ ಮಾಜಿ ಶಾಸಕ ಡಾ.ಸುನೀಲಂ ಮಾತನಾಡಿ, ಸಿಎಎ ಜಾರಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ದೇಶದಲ್ಲಿ ದೊಡ್ಡ ಆಂದೋಲನವಾಗುತ್ತಿದೆ ಎಂದರು.

    ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಪರಿಸರವಾದಿ ಎಚ್.ಎಸ್.ಕೆ.ಸ್ವಾಮಿ, ಅರುಣ್‌ಕುಮಾರ್ ಶ್ರೀವಾತ್ಸವ, ಅರವಿಂದ ದಳವಾಯಿ, ಕೇರಳದ ಪಿ.ಜೆ.ಜೋಶಿ, ಮಧ್ಯಪ್ರದೇಶದ ಅನುರಾಧ ಭಾರ್ಗವ್ ಮತ್ತಿತರ ಪ್ರಮುಖರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts