More

    ಚಿರಂಜೀವಿ ಕರೊನಾ ಪಾಸಿಟಿವ್​ ಆಗಿದ್ದು ಹೇಗೆ ಗೊತ್ತಾ?

    ಹೈದರಾಬಾದ್​: ಟಾಲಿವುಡ್​ನ ಮೆಗಾಸ್ಟಾರ್​ ಚಿರಂಜೀವಿ ಅವರಿಗೆ ಇತ್ತೀಚೆಗೆ ಕರೊನಾ ಪಾಸಿಟಿವ್​ ಆಗಿದೆ ಎಂಬಂತಹ ಸುದ್ದಿಯೊಂದು ಕೇಳಿಬಂದಿತ್ತು. ಇದೀಗ ಮತ್ತೆ ಟೆಸ್ಟ್​ ಮಾಡಿಸಿರುವ ಚಿರಂಜೀವಿ ಅವರಿಗೆ ನೆಗೆಟಿವ್​ ಬಂದಿದೆ. ಇಷ್ಟಕ್ಕೂ ಅವರು ಕರೊನಾ ಪಾಸಿಟಿವ್​ ಆಗಿದ್ದು ಹೇಗೆ ಗೊತ್ತಾ?

    ಇದನ್ನೂ ಓದಿ: ದೀಪಾವಳಿಗೆ ಶುಭಕೋರಿದ ‘ಆರ್​ಆರ್​ಆರ್​’

    ಚಿರಂಜೀವಿ ಅವರಿಗೆ ಕರೊನಾ ಪಾಸಿಟಿವ್​ ಎಂಬ ಸುದ್ದಿ ಬಂದಾಗ, ಬಹುಶಃ ಮದುವೆಗೆ ಹೋದಾಗ ಹೀಗಾಗಿರಬಹುದು, ಇನ್ನೆಲ್ಲೋ ಹೋದಾಗ ವೈರಸ್​ ಅಂಟಿಕೊಂಡಿರಬಹುದು ಎಂದೆಲ್ಲಾ ತರ್ಕ ಮಾಡಲಾಗಿತ್ತು. ಆದರೆ, ಇದೀಗ ನಿಜಾಂಶ ಬೆಳಕಿಗೆ ಬಂದಿದ್ದು, ಚಿರಂಜೀವಿ ಅವರು ಕರೊನಾ ಪಾಸಿಟಿವ್​ ಆಗಿದ್ದು ದೋಷಪೂರಿತ ಕಿಟ್​ನಿಂದಾಗಂತೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ‘ವೈದ್ಯರು ನನ್ನನ್ನು ಮೂರು ಟೆಸ್ಟ್​ಗಳಿಗೆ ಒಳಪಡಿಸಿದರು. ಈ ಮೂರೂ ಟೆಸ್ಟ್​ಗಳಲ್ಲಿ ನೆಗೆಟಿವ್​ ಬಂದಿದ್ದು, ಮೊದಲ ಟೆಸ್ಟ್​ ಪಾಸಿಟಿವ್​ ಆಗುವುದಕ್ಕೆ ಮುಖ್ಯ ಕಾರಣ ದೋಷಪೂರಿತ ಆರ್​ಟಿ-ಪಿಸಿಆರ್​ ಕಿಟ್​ ಆಗಿತ್ತು’ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ವೈದ್ಯರು ನೀಡಿರುವ ಹೊಸ ವರದಿಯನ್ನೂ ಅವರು ಶೇರ್ ಮಾಡಿಕೊಂಡಿದ್ದಾರೆ.

    ಈ ಕುರಿತು ಇನ್ನಷ್ಟು ಬರೆದುಕೊಂಡಿರುವ ಅವರು, ‘ಸಮಯ ಮತ್ತು ಕರೊನಾ ಕಳೆದ ನಾಲ್ಕು ದಿನಗಳಿಂದ ನನ್ನ ಜತೆಗೆ ಆಟ ಆಡುತ್ತಿದೆ. ಭಾನುವಾರ ಕರೊನಾ ಪಾಸಿಟಿವ್​ ಎಂದು ಗೊತ್ತಾದಾಗ, ಕ್ವಾರಂಟೈನ್​ಗೆ ಒಳಪಟ್ಟೆ. ಆದರೆ, ಎರಡು ದಿನಗಳಾದರೂ ನನಗೆ ಕರೊನಾದ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಕೊನೆಗೆ ಅಪೋಲೋ ಆಸ್ಪತ್ರೆಯ ವೈದ್ಯರನ್ನು ಭೃಟಿ ಮಾಡಿದೆ. ಸಿಟಿ ಸ್ಕ್ಯಾನ್​ ನಂತರ, ನನ್ನ ದೇಹದಲ್ಲಿ ಯಾವುದೇ ವೈರಸ್​ ಇಲ್ಲ ಎಂಬುದು ಗೊತ್ತಾಯಿತು. ಸುಮ್ಮನೆ ಸಮಸ್ಯೆ ಬೇಡ ಎಂಬ ಕಾರಣಕ್ಕೆ, ಇನ್ನೊಮ್ಮೆ ಕರೊನಾ ಟೆಸ್ಟ್​ ಮಾಡಿಸಿದೆ. ಈ ಬಾರಿ ಮೂರು ವಿಭಿನ್ನ ಕಿಟ್​ಗಳಲ್ಲಿ. ಈ ಪರೀಕ್ಷೆಯಲ್ಲಿ ನೆಗೆಟಿವ್​ ಬಂದಿದೆ’ ಎನ್ನುತ್ತಾರೆ ಅವರು.

    ಇದನ್ನೂ ಓದಿ: ಕೊನೆಗೂ ರವಿ ಬೆಳಗೆರೆ ನಿರ್ದೇಶಕರಾಗಲೇ ಇಲ್ಲ …

    ಚಿರಂಜೀವಿ ಅವರು ಸದ್ಯದಲ್ಲೇ ‘ಆಚಾರ್ಯ’ ಚಿತ್ರದ ಚಿತ್ರೀಕರಣಕ್ಕೆ ತೆರಳಬೇಕಿದ್ದು, ಅದಕ್ಕೂ ಮುನ್ನ ಟೆಸ್ಟ್​ ಮಾಡಿಸಿಕೊಂಡಿದ್ದಾರೆ. ಆಗ ಪಾಸಿಟಿವ್​ ಬಂದಿದ್ದರಿಂದ, ಚಿತ್ರೀಕರಣ ಮುಂದೂಡಲ್ಪಟ್ಟಿದೆ. ಇದೀಗ ಅವರಿಗೆ ನೆಗೆಟಿವ್​ ಎಂದು ವರದಿ ಬಂದಿರುವುದರಿಂದ, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.

    ಟಾಪ್​ ಹೀರೋಯಿನ್ಸ್​ ಸಂಭಾವನೆ ಪಟ್ಟಿ ಲೀಕ್​: ಸಿನಿಮಾವೊಂದಕ್ಕೆ ಪಡೆಯುವ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts