More

    ಪಠ್ಯೇತರ ಚಟುವಟಿಕೆಯಿಂದ ಪ್ರಗತಿ ಸಾಧ್ಯ

    ಬೆಳಗಾವಿ: ತಾಲೂಕಿನ ಹೊಸ ಇದ್ದಲಹೊಂಡ (ಶಿವಾರಪುರ) ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಶ್ರಯದಲ್ಲಿ ಏರ್ಪಡಿಸಿದ್ದ ಕಡೋಲಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಬೆಳಗಾವಿ ಜಾನಕಿ ಜನಸೇವಾ ಸಂಘದ ಅಧ್ಯಕ್ಷ ಉಮೇಶ ಆಚಾರ್ಯ ಚಾಲನೆ ನೀಡಿದರು. ಪಠ್ಯಪುಸ್ತಕ ಅಧ್ಯಯನದೊಂದಿಗೆ ಕ್ರೀಡೆ ಕೂಡ ಮುಖ್ಯವಾಗಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಾಲೆಗಳು ಅಡಿಪಾಯವಾಗಿವೆ ಎಂದು ಉಮೇಶ ಆಚಾರ್ಯ ಹೇಳಿದರು.

    ಮುಖ್ಯ ಶಿಕ್ಷಕ ವಿ.ಎಸ್.ಬೀಳಗಿ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ರಾಮಣ್ಣ ಗುಳ್ಳಿ, ಬೆಳಗಾವಿ ತಾಲೂಕು ಕಸಾಪ ಅಧ್ಯಕ್ಷ ಸುರೇಶ ಹಂಜಿ, ವಿನೋದ ಜಗಜಂಪಿ, ಗ್ರಾಮದ ಗುರುಸಿದ್ದ ರುದ್ರಾಪೂರಿ, ಶಿವಮೂರ್ತಿ ಲಾಡಿ, ಸಂಜೀವ ಕಲ್ಲೂರಿ, ಶ್ರೀಕಾಂತ ಕಲ್ಲೂರಿ, ಕೆಂಪಣ್ಣ ಬಸವಣ್ಣಿ ಕಮತೆ, ರಾಜಶ್ರೀ ಬಸವರಾಜ ಕಮತೆ, ಮಾರುತಿ ಭರಮಾ ರಾಮನಕಟ್ಟಿ, ವಸುಂದರಾ ಗಿರೀಶ ಕಮತೆ, ರಮೇಶ ದೊಂಡಿಬಾ ಕಾಂಬಳೆ, ಗಣ್ಯರಾದ ಭೀಮವರಾವ ನಾಯಿಕ, ಶಂಕರ ತಾರಾಪುರ, ಎನ್.ಆರ್.ಪಾಟೀಲ, ಕಿರಣ ಕಾರಂಜಿ, ಆಕಾಶ ತಳವಾರ, ಪ್ರತಾಪ, ಕೃಷ್ಣ ಇತರರು ಉಪಸ್ಥಿತರಿದ್ದರು. ಶಿಕ್ಷಕ ಎನ್.ಎಂ. ನಂದಿಹಳ್ಳಿ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಎಸ್.ಆರ್.ನಧಾಫ್ ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕಿ ಜಿ.ಬಿ.ಸುಗತೆ ವಂದಿಸಿದರು. ಈ ಕ್ರೀಡಾಕೂಟದಲ್ಲಿ ಕಡೋಲಿ ವಲಯಮಟ್ಟದ 11 ಪ್ರೌಢಶಾಲೆಯ ಕ್ರೀಡಾಪಟುಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts