More

    42 ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ‘ಜಗದೇಕವೀರುಡು’

    ಹೈದರಾಬಾದ್: ದಕ್ಷಿಣ ಭಾರತದ ಸೂಪರ್ ಸ್ಟಾರ್ ಆದ ಚಿರಂಜೀವಿ ಶನಿವಾರ 42ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ ಪಾರಂಪರಿಕ ಉಡುಗೆ ತೊಟ್ಟ ಚಿರಂಜೀವಿ ಮತ್ತು ಸುರೇಖ ಕೊನಿಡೇಲ ದಂಪತಿಯ ಚಿತ್ರವೊಂದನ್ನು ಅವರ ಪುತ್ರ ನಟ ರಾಮ್​ಚರಣ್​ ಶೇರ್ ಮಾಡಿದ್ದಾರೆ.

    ಮಗಧೀರ ಚಿತ್ರದ ಖ್ಯಾತಿಯ ನಟ ರಾಮ್​ಚರಣ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮನೆಯ ಮೆಟ್ಟಿಲ ಮೇಲೆ ಕುಳಿತಿರುವ ಅಪ್ಪ-ಅಮ್ಮನ ನಗುಮೊಗದ ಫೋಟೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ “ಮೈ ಬಿಗ್ಗೆಸ್ಟ್ ಸ್ಟ್ರೆಂತ್” ಎಂದು ಬರೆದು, 42 ನೇ ವಾರ್ಷಿಕೋತ್ಸವದ ಶುಭ ಕೋರಿದ್ದಾರೆ.

    ಇದನ್ನೂ ಓದಿ: ಎಲ್ಲೆಡೆ ಪೊಗರು ಹಬ್ಬ; ಮೂರೂವರೆ ವರ್ಷಗಳ ಬಳಿಕ ಧ್ರುವ ಸರ್ಜಾ ಚಿತ್ರ ಬಿಡುಗಡೆ

    ಚಿರಂಜೀವಿ ಹೆಂಡತಿ ಸುರೇಖ, ಆ ಕಾಲದ ತೆಲುಗು ನಟ ಅಲ್ಲು ರಾಮಲಿಂಗಯ್ಯ ಅವರ ಮಗಳು. ದಂಪತಿಗೆ ರಾಮ್​ಚರಣ್​ ಅಲ್ಲದೆ ಇಬ್ಬರು ಪುತ್ರಿಯರಿದ್ದಾರೆ – ಸುಶ್ಮಿತಾ ಮತ್ತು ಸ್ರೀಜಾ.

    ಒಂದು ದಿನದ ಹಿಂದೆ, ಚಿರಂಜೀವಿ ಅವರ ಇಡೀ ಕುಟುಂಬ ಮತ್ತೊಂದು ಆಚರಣೆಯಲ್ಲಿ ತೊಡಗಿತ್ತು. ಸುರೇಖ ಅವರ ಜನ್ಮ ದಿನದ ಆಚರಣೆ. ಅಮ್ಮನೊಂದಿಗೆ ತಮ್ಮ ಫೋಟೋವನ್ನು ಕೂಡ ರಾಮ್​ಚರಣ್ ಶೇರ್ ಮಾಡಿದ್ದರು.

     
     
     
     
     
    View this post on Instagram
     
     
     
     
     
     
     
     
     
     
     

    A post shared by Ram Charan (@alwaysramcharan)

    ಚಿರಂಜೀವಿ ನಟಿಸಿದ ಇತ್ತೀಚಿನ ಚಿತ್ರವೆಂದರೆ 2019 ರಲ್ಲಿ ಬಿಡುಗಡೆಯಾದ ‘ರಾ ನರಸಿಂಹ ರೆಡ್ಡಿ’. ಇದೀಗ ಕೊರತಲ ಶಿವ ಅವರ ತೆಲುಗು ಚಿತ್ರ ‘ಆಚಾರ್ಯ’ದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾಮ್​ಚರಣ್​, ಎಸ್.ಎಸ್.ರಾಜಮೌಳಿ ನಿರ್ದೇಶಿಸುತ್ತಿರುವ ‘ಆರ್​ಆರ್​ಆರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಬ್ಬರು ಸ್ವಾತಂತ್ರ್ಯಹೋರಾಟಗಾರರ ಜೀವನವನ್ನು ಆಧರಿಸಿ ಹೆಣೆದಿರುವ ಕಥೆ ಇದಾಗಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

     

    ‘ನನ್ನ ವಾಲೆಂಟೈನ್ – ಪ್ರತಿದಿನ, ಎಂದೆಂದಿಗೂ’ ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ

    ಪ್ರಿಯಾಂಕಾರ ಆತ್ಮಚರಿತ್ರೆಯಲ್ಲಿದೆ … ‘ಪ್ಲಾಸ್ಟಿಕ್ ಚೋಪ್ರಾ’ ಆದ ಗುಟ್ಟು !

    ಭಾವನೆಗಳಿಗೆ ಕಮರ್ಷಿಯಲ್ ಚೌಕಟ್ಟು; ಪೊಗರು ಸಿನಿಮಾ ವಿಮರ್ಶೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts