More

    ಮಗನ ಶವಕ್ಕೆ ಅದ್ಧೂರಿ ಅಂತ್ಯಕ್ರಿಯೆ ನೆರವೇರಿಸಿ ಮನೆಗೆ ಬಂದ ಕುಟುಂಬಕ್ಕೆ ಕಾದಿತ್ತು ಶಾಕ್​!

    ಬೀಜಿಂಗ್​: ಸಾವಿಗೀಡಾಗಿದ್ದಾನೆ ಎಂದು ವೈದ್ಯರೇ ಘೋಷಿಸಿದ ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯು ನಡೆದು ಹೋಗಿತ್ತು. ಆದರೆ, ಆತ ಜೀವಂತವಾಗಿ ಮರಳಿ ಮನೆಗೆ ಬರುವ ಮೂಲಕ ಇದೀಗ ಕುಟುಂಬ ಸಮೇತ ಎಲ್ಲರನ್ನೂ ಅಚ್ಚರಿಗೆ ದೂಡಿದ್ದಾನೆ. ಇಂಥದ್ದೊಂದು ಅಪರೂಪದ ಘಟನೆಗೆ ಚೀನಾ ಸಾಕ್ಷಿಯಾಗಿದೆ.

    ಜಿಯಾವೋ ಹೆಸರಿನ 43 ವರ್ಷದ ವ್ಯಕ್ತಿಯ ದೇಹವನ್ನು ಆಸ್ಪತ್ರೆಯಿಂದ ತಂದು ಎರಡು ತಿಂಗಳ ಹಿಂದೆ ಆತನ ಕುಟುಂಬ ಅಂತ್ಯಕ್ರಿಯೆಯನ್ನು ನೆರವೇರಿಸಿತ್ತು. ಆದರೆ, ಇದೀಗ ಜಿಯಾವೋ ಮನೆಗೆ ಮರಳಿ ಬಂದಿದ್ದಾನೆ. ಹಾಗಾದರೆ, ಅಂತ್ಯಕ್ರಿಯೆ ಆಗಿದ್ದು ಯಾರಿಗೆ? ಜಿಯಾವೋ ಮೃತಪಟ್ಟಿದ್ದಾನೆಂದು ವೈದ್ಯರೇ ಘೋಷಿಸಿದ ಮೇಲೆ ಇದು ಹೇಗೆ ಸಾಧ್ಯ? ಏನಿದು ವಿಚಿತ್ರ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಿದೆ ಎಂಬುದು ನಮಗೆ ಗೊತ್ತು. ಅದನ್ನು ಪರಿಹರಿಸಿಕೊಳ್ಳಲು ಮುಂದೆ ಓದುತ್ತಾ ಸಾಗಿ.

    ಇದನ್ನೂ ಓದಿ: VIDEO| ಪಾಕ್​ ಧ್ವಜ ಧರಿಸಿ ಭಾರತ ಬಾವುಟ ಕಾಲಲ್ಲಿ ಮೆಟ್ಟಿ ನಿಂತಿರುವ ಈ ದ್ರೋಹಿ ಯಾರು?

    ಅಂದಹಾಗೆ ಜಿಯಾವೋ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗೆ ನೈರುತ್ಯ ಚೀನಾದ ಚಾಂಗ್ಕಿಂಗ್ ನಗರದ ತಮ್ಮ ನಿವಾಸದಿಂದ ಇದೇ ವರ್ಷ ನಾಪತ್ತೆಯಾಗಿದ್ದರು. ಈ ವಿಚಾರವನ್ನು ಜಿಯಾವೋ ಅಂಕಲ್​ ಲಿಯು ತಿಳಿಸಿದ್ದಾರೆ. ಚಿಂತಾಕ್ರಾಂತರಾಗಿದ್ದ ಜಿಯಾವೋ ಕುಟುಂಬ ಸಾಕಷ್ಟು ಬಾರಿ ಹುಡುಕಾಡಿ ಸಾಧ್ಯವಾಗದಿದ್ದಾಗ ಮಾರ್ಚ್​ನಲ್ಲಿ ಪೊಲೀಸ್​ ಮೊರೆ ಹೋಗಿತ್ತು.

    ಇದಾದ ಬೆನ್ನಲ್ಲೇ ಏಪ್ರಿಲ್​ನಲ್ಲಿ ಜಿಯಾವೋ ಕುಟುಂಬವನ್ನು ಪೊಲೀಸರು ಸಂಪರ್ಕಿಸಿ, ಪೂರ್ವ ಚೀನಾದ ಜೆಜಿಯಾಂಗ್​ ಪ್ರಾಂತ್ಯದ ವೆನ್​ಜೌ ನಗರದ ಆಸ್ಪತ್ರೆಯಲ್ಲಿ ಜಿಯಾವೋಗೆ ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಮಾರನೇ ದಿನ ಕುಟುಂಬವೂ ಆಸ್ಪತ್ರೆಗೆ ತೆರಳಿದೆ. ಕ್ಷಯ ರೋಗದಿಂದ ಉಂಟಾಗುವು ಗಂಭೀರವಾದ ಸೋಂಕಿನ ಕಾಯಿಲೆಂದ ಜಿಯಾವೋ ಬಳಲುತ್ತಿದ್ದು, ಬದುಕುವ ಸಾಧ್ಯತೆ ತುಂಬಾ ಕಡಿಮೆ ಎಂದು ವೈದ್ಯರು ಕುಟುಂಬಕ್ಕೆ ತಿಳಿಸಿದ್ದಾರೆ.

    ಮುಖ ಗುರುತಿಸೋಣ ಎಂದರೆ ಐಸಿಯುನಲ್ಲಿ ಕೃತಕ ಆಮ್ಲಜನಕ ಸಹಾಯದಿಂದ ಉಸಿರಾಡಲು ಹಾಕಲಾಗಿದ್ದ ಮಾಸ್ಕ್​ನಿಂದ ಆತನ ಮುಖವನ್ನು ನೋಡಲು ಆಗಲಿಲ್ಲ ಎನ್ನುತ್ತಾರೆ ಜಿಯಾವೋ ಅಂಕಲ್​. ಅಲ್ಲದೆ, ಜಿಯಾವೋನನ್ನು ನೋಡಲು ವೈದ್ಯರು ಸಹ ಅವರ ಕುಟುಂಬಕ್ಕೆ ಅನುಮತಿಯನ್ನು ನೀಡುವುದಿಲ್ಲ. ಕರೊನಾ ಸೋಂಕು ಹರಡುವ ಭೀತಿಯಿಂದ ಐಸಿಯು ಒಳಕ್ಕೆ ಕುಟುಂಬವನ್ನು ಬಿಡುವುದಿಲ್ಲ.

    ಇದನ್ನೂ ಓದಿ: PHOTOS| ಥ್ರಿಲ್​ ನೀಡಲು ಅಪ್ಸರಾ ರೆಡಿ: ಹಾಟ್​ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಆರ್​ಜಿವಿ!

    ಸಾಯುವ ಹಂತದಲ್ಲಿದ್ದ ಜಿಯಾವೋನನ್ನು ಮರಳಿ ಮನೆಗೆ ಕರೆತರಲು ಕುಟುಂಬ ನಿರ್ಧರಿಸಿ, ಸಾರಿಗೆ ವ್ಯವಸ್ಥೆಗೆ 12,000 ಚೀನಾ ಕರೆನ್ಸಿ ಯಾನ್​ (1,28,024 ರೂ.) ಖರ್ಚು ಸಹ ಮಾಡಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಜಿಯಾವೋ ಸಾವಿಗೀಡಾಗಿದ್ದಾಗಿ ವೈದ್ಯರು ಘೋಷಿಸಿದರು. ಬಳಿಕ ಕುಟುಂಬ ಆತನ ದೇಹವನ್ನು ಚಾಂಗ್ಕಿಂಗ್ ನಿವಾಸಕ್ಕೆ ಕರೆತಂದಿತು.

    ಆದರೆ, ಕರೊನಾ ವೈರಸ್​ ನಿಯಮಗಳಿಂದಾಗಿ ಕುಟುಂಬ ಜಿಯಾವೋ ಮುಖವನ್ನು ನೋಡದೆ ತಕ್ಷಣ ಅಂತ್ಯಕ್ರಿಯೆ ನೇರಿವೇರಿಸಿತು. ಅದ್ಧೂರಿ ಅಂತ್ಯಕ್ರಿಯೆಗಾಗಿ ಕುಟುಂಬವು ಮತ್ತೆ 140,000 ಯಾನ್​ (14,93,910 ರೂ.) ಖರ್ಚು ಮಾಡಿತು.

    ಫೋನ್​ ಕಾಲ್​ ಟ್ವಿಸ್ಟ್​
    ಅಂತ್ಯಕ್ರಿಯೆ ಮುಗಿಸಿ ಶೋಕ ಸಾಗರದಲ್ಲಿ ಮುಳುಗಿದ್ದ ಕುಟುಂಬಕ್ಕೆ ತಕ್ಷಣವೇ ಶಾಕ್​ ಎದುರಾಯಿತು. ಜಿಯಾವೋ ಅಂಕಲ್ ಮೇ ಅಂತ್ಯದಲ್ಲಿ​ ಫೋನ್​ ಕಾಲ್​ ಒಂದನ್ನು ಸ್ವೀಕರಿಸುತ್ತಾರೆ. ಆ ಕಡೆಯಿಂದ ಈಶಾನ್ಯ ಚೀನಾದ ಜಿಯಾಂಗ್ಸಿ ಪ್ರಾಂತ್ಯದ ಶ್ಯಾಂಗರೋ ನಗರದ ಪೊಲೀಸ್​ ಅಧಿಕಾರಿಗಳು ಮಾತನಾಡಿ, ನಾವು ಓರ್ವ ಆಶ್ರಯ ರಹಿತ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದೇವೆ. ಹೆಸರು ಕೇಳಿದ್ದಕ್ಕೆ ಅವನು ಜಿಯಾವೋ ಎಂದು ಹೇಳಿದ ಎಂದು ತಿಳಿಸುತ್ತಾರೆ.

    ಕೊನೆಗೆ ಪೊಲೀಸರ ಸಹಾಯದಿಂದ ಜಿಯಾವೋ ಜೂನ್ 5 ರಂದು ಮನೆಗೆ ಮರಳುತ್ತಾನೆ. ಅವನನ್ನು ನೋಡಿದ ಇಡೀ ಕುಟುಂಬ ಒಂದು ಕ್ಷಣ ನಿಬ್ಬೆರಗಾಗಿ ನಿಲ್ಲುತ್ತಾರೆ. ಬಳಿಕ ಮಗ ಮರಳಿ ಬಂದ ಎಂಬು ಖುಷಿಯಲ್ಲಿ ಅಪ್ಪಿ ಮುದ್ದಾಡುತ್ತಾರೆ.

    ಇದನ್ನೂ ಓದಿ: VIDEO| ಕರೊನಾಗೂ ಕ್ಯಾರೆ ಎನ್ನದೇ ಡ್ಯಾನ್ಸ್​ ಮಾಡಿ ಪತ್ನಿಗೆ ಧೈರ್ಯ ತುಂಬಿದ ಸೋಂಕಿತ…!

    ಹಾಗದರೆ ಎಡವಟ್ಟಾಗಿದ್ದೇನು?
    ಜಿಯಾವೋ ಮಾನಸಿಕ ಸ್ಥಿತಿಯಿಂದಾಗಿ ಆತ ಹೇಗೆ ಚಾಂಗ್ಕಿಂಗ್ ನಗರದಿಂದ ಸುಮಾರು 1500 ಕಿ.ಮೀ (932 ಮೈಲಿ) ದೂರದ ಶ್ಯಾಂಗರೋ ನಗರಕ್ಕೆ ಪ್ರಯಾಣ ಮಾಡಿದ ಎಂದ ವಿವರಿಸಲು ಸಾಧ್ಯವಾಗಲಿಲ್ಲ. ಇನ್ನು ಮೃತದೇಹದ ಬಗ್ಗೆ ಸ್ಪಷ್ಟನೆ ನೀಡಿದ ವೆನ್​ಜೌ ನಗರದ ಆಸ್ಪತ್ರೆಯ ವೈದ್ಯರು ಜಿಯಾವೋ ಹೆಸರಿರುವ ಇನ್ನೊಬ್ಬ ವ್ಯಕ್ತಿಯಿಂದ ಗೊಂದಲ ಮೂಡಿದೆ. ಅಲ್ಲದೆ ಆತ ನೋಡಲು ಸ್ವಲ್ಪ ಜಿಯಾವೋ ರೀತಿಯೇ ಇದ್ದುದರಿಂದ ಹೀಗಾಗಿದೆ ಎಂದು ಹೇಳಿದ್ದಾರೆ.

    ಮೃತ ಜಿಯಾವೋ ಆಸ್ಪತ್ರೆಗೆ ದಾಖಲಾದಾಗ ಆತನ ಕೊರಳಲ್ಲಿ ಐಡಿ ಕಾರ್ಡಿತ್ತು. ಅದನ್ನು ಪರಿಶೀಲಿಸಿದಾಗ ಬದುಕಿರುವ ಜಿಯೋವೋ ರೀತಿಯಲ್ಲೇ ಆತನಿರುವುದನ್ನು ನೋಡಿ ವೈದ್ಯರೇ ನಿಬ್ಬೆರಗಾಗಿದ್ದಾರೆ. ಅದೇ ಫೋಟೋವನ್ನು ಪೊಲೀಸರಿಗೆ ಕಳುಹಿಸಿಕೊಟ್ಟಿದ್ದಾರೆ. ಪೊಲೀಸರು ಕುಟುಂಬವನ್ನು ಸಂಪರ್ಕಿಸಿದೆ. ಅಲ್ಲದೆ, ಇಬ್ಬರು ಸಹ ಈ ಹಿಂದೆ ಕ್ಷಯ ರೋಗದ ಚಿಕಿತ್ಸೆಯನ್ನು ಪಡೆದಿದ್ದರು. ಹೀಗಾಗಿ ಈ ಎಲ್ಲ ಅಂಶಗಳಿಂದ ವೈದ್ಯರಿಗೆ ಪತ್ತೆಹಚ್ಚಲು ಕಷ್ಟವಾಯಿತು.

    ಇದೀಗ ಎಡವಟ್ಟಿನಿಂದ ಬೇರೊಬ್ಬನ ದೇಹಕ್ಕೆ ಅದ್ಧೂರಿಯಾಗಿ ಅಂತ್ಯಕ್ರಿಯೆ ನೆರವೇರಿಸಿದ್ದಕ್ಕಾಗಿ ಜಿಯಾವೋ ಕುಟುಂಬ ವೈದ್ಯರ ಬಳಿ ಪರಿಹಾರಕ್ಕೆ ಬೇಡಿಕೆ ಇಟ್ಟಿದೆ. (ಏಜೆನ್ಸೀಸ್​)

    ಫ್ಲೊರಿಡಾದಲ್ಲಿ ಕಂಡುಬಂತೊಂದು ಬೆಚ್ಚಿಬೀಳಿಸುವ ಸೋಂಕು ರೋಗ – ನೆಗ್ಲೇರಿಯಾ ಫೌಲೇರಿ ಲಕ್ಷಣಗಳೇನು?.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts