More

    12 ವರ್ಷದ ಹಿಂದೆ ಸತ್ತ ಪತ್ನಿಯ ಸಮಾಧಿ ನೋಡಲು ಬಂದ ಪತಿಗೆ ಕಾದಿತ್ತು ಬಿಗ್​ ಶಾಕ್​..!

    ಬೀಜಿಂಗ್​: ಚೀನಾದಲ್ಲಿ ವಿಚಿತ್ರ ಆಚರಣೆಯೊಂದು ಬೆಳಕಿಗೆ ಬಂದಿದ್ದು, ಇಲ್ಲಿನ ಕುಟುಂಬವೊಂದು ತಮ್ಮ ವಯಸ್ಕ ಮಗಳ ಶವವನ್ನು ಸಮಾಧಿಯಿಂದ ಹೊರತೆಗೆದು “ಭೂತ ವಧು”ವನ್ನಾಗಿ ಮಾರಾಟ ಮಾಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

    ಕ್ಯಾಂಗ್ ಕ್ಯುಕ್ಯುಯಿ ಎಂಬಾಕೆ 12 ವರ್ಷಗಳ ಹಿಂದೆ ಮೃತಪಟ್ಟಿದ್ದಳು. ಇದೀಗ ಆಕೆಯ ಶವವನ್ನು ಕುಟುಂಬ ಹೊರತೆಗೆದಿದ್ದು, £9,200 (8,97,207 ರೂಪಾಯಿ)ಗೆ ಮೃತ ವ್ಯಕ್ತಿಯೊಂದಿಗೆ ಮದುವೆ ಮಾಡಲು ಮಾರಾಟ ಮಾಡಲಾಗಿದೆ. ದಕ್ಷಿಣ ಚೀನಾದ ಹೆಬೀ ಪ್ರಾಂತ್ಯದಲ್ಲಿ ನಡೆಯುವ ಪ್ರಾಚೀನ ಕಾಲದ ವಿಚಿತ್ರ ಆಚರಣೆಯಾಗಿದೆ.

    ಇದನ್ನೂ ಓದಿ: VIDEO| ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿ ಪಕ್ಷಿಯನ್ನು ಪತ್ತೆ ಹಚ್ಚಿದ್ರೆ ನೀವೇ ಗ್ರೇಟ್!

    12 ವರ್ಷದ ಹಿಂದೆ ಸತ್ತ ಪತ್ನಿಯ ಸಮಾಧಿ ನೋಡಲು ಬಂದ ಪತಿಗೆ ಕಾದಿತ್ತು ಬಿಗ್​ ಶಾಕ್​..!

    ಸ್ಥಳೀಯವಾಗಿ ಯಿನ್​ ಹನ್​ (ಭೂತದ ಮದುವೆಗಳು) ಎಂದು ಕರೆಯಲಾಗುತ್ತಿದೆ. ಸಾವಿರಾರು ವರ್ಷಗಳಿಂದ ಚೀನಾದಲ್ಲಿ ಇದನ್ನೂ ಆಚರಿಸಿಕೊಂಡು ಬರಲಾಗುತ್ತಿದೆ. ಮದುವೆಯಾಗದೆ ಮೃತಪಟ್ಟ ವ್ಯಕ್ತಿಯು ನಂತರದ ಜೀವನದಲ್ಲಿ ಒಂಟಿಯಾಗಿ ಉಳಿಯಬಾರದು ಮತ್ತು ಮುಂದಿನ ಜನ್ಮದಲ್ಲಿ ಆತನಿಗೆ ಒಳ್ಳೆಯದಾಗಲಿದೆ ಎಂಬುದು ಅಲ್ಲಿನ ಜನರ ನಂಬಿಕೆಯಾಗಿದೆ.

    ಈ ಘಟನೆ ಕಳೆದ ಗುರುವಾರ ಬೆಳಕಿಗೆ ಬಂದಿದ್ದು, ಈ ಆಚರಣೆಯನ್ನು ಚೀನಾದ ಹೆಬೀ ಪ್ರಾಂತ್ಯದಲ್ಲಿ ಇರುವ ಹುವಾಂಗುವಾ ಮತ್ತು ಕ್ಯಾಂಗುವಾ ಹಳ್ಳಿಗಳಲ್ಲಿ ಇಂದಿಗೂ ಆಚರಿಸಲಾಗುತ್ತಿದೆ.

    2008ರಲ್ಲಿ ಕ್ಯಾಂಗ್ ಕ್ಯುಕ್ಯುಯಿ ತನ್ನ ಗಂಡ ಲೀ ಜಾಂಗ್​ ಜತೆ ನಡೆದ ವಾಗ್ವಾದದಲ್ಲಿ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಳು. ಈಕೆಯ ಅಂತ್ಯಸಂಸ್ಕಾರವನ್ನು ಪತಿಯ ಕುಟುಂಬದವರೇ ಭಾರೀ ವೆಚ್ಚದಲ್ಲಿ ನೆರವೇರಿಸಿದ್ದರು. ಅಲ್ಲದೆ, ಸಮಾಧಿ ಮಾಡುವಾಗ ಆಭರಣಗಳನ್ನು ಸಹ ಹೂಳಲಾಗಿತ್ತು. ಹೀಗಿರುವಾಗ ನವೆಂಬರ್​ 14ರಂದು ಕ್ಯಾಂಗ್​ ಸಮಾಧಿಗೆ ಪತಿಯ ಕುಟುಂಬ ಭೇಟಿ ನೀಡಿದಾಗ ಅಲ್ಲಿ ಆಭರಣದ ಜತೆಗೆ ಕ್ಯಾಂಗ್​ ಶವವೂ ಕಳುವಾಗಿತ್ತು. ತಕ್ಷಣ ಲೀ ಜಾಂಗ್​ ಕುಟುಂಬ ಪೊಲೀಸ್​ ಠಾಣೆಗೆ ದೂರು ನೀಡಿದಾಗ ತನಿಖೆ ನಡೆಸಿದ ಪೊಲೀಸರಿಗೆ ಕ್ಯಾಂಗ್​ ಮನೆಯವರೇ ಸಮಾಧಿ ಅಗೆದಿರುವ ವಿಚಾರ ತಿಳಿಯುತ್ತದೆ.

    ಇದನ್ನೂ ಓದಿ: ವಿಷ ಕುಡಿಯುವ ಮುನ್ನ ನಾವು ಪ್ರೀತಿಸಿದ್ದೇ ತಪ್ಪು… ಎಂದು ಕಣ್ಣೀರಿಟ್ಟರು! ಪ್ರಿಯತಮೆ ಸ್ಥಳದಲ್ಲೇ ಸಾವು, ಮುಂದೇನಾಯ್ತು?

    12 ವರ್ಷದ ಹಿಂದೆ ಸತ್ತ ಪತ್ನಿಯ ಸಮಾಧಿ ನೋಡಲು ಬಂದ ಪತಿಗೆ ಕಾದಿತ್ತು ಬಿಗ್​ ಶಾಕ್​..!

    ವಿಚಾರಣೆ ನಡೆಸಿದಾಗ ಕಾರು ಅಪಘಾತದಲ್ಲಿ ಮೃತಪಟ್ಟ ಅವಿವಾಹಿತನಿಗೆ ಭೂತದ ಮದುವೆ ಮಾಡಿಕೊಳ್ಳಲು ಆತನ ಕುಟುಂಬ 8,97,207 ರೂಪಾಯಿಗೆ ಕ್ಯಾಂಗ್​ ಶವವನ್ನು ಖರೀದಿಸಿರುವ ವಿಚಾರ ತಿಳಿದಿದೆ. ಬಳಿಕ ಎರಡು ಕುಟುಂಬ ನವೆಂಬರ್​ 23ರಲ್ಲಿ ಮದುವೆ ಸಮಾರಂಭವನ್ನು ನಡೆಸಿ ಇಬ್ಬರ ಮೃತದೇಹವನ್ನು ಒಟ್ಟಿಗೆ ಸಮಾಧಿ ಮಾಡಿದ್ದಾರೆ. ಇತ್ತ ಅಧಿಕಾರಿಗಳು ತನಿಖೆ ನಡೆಸಿ ಎಂಬ ಲೀ ಜಾಂಗ್​ ಮನವಿಯನ್ನು ತಿರಸ್ಕರಿಸಿದ್ದಾರೆ. (ಏಜೆನ್ಸೀಸ್​)

    8 ವರ್ಷ ಪ್ರೀತಿಸಿ ಮದುವೆಯಾದ ತಂಗಿ; ಮನೆಗೆ ಕರೆಸಿದ ಅಣ್ಣ ಎಂತಹ ಗಿಫ್ಟ್​ ಕೊಟ್ಟ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts