More

    ಅರ್ಜುನನ ಸಮಾಧಿಗೆ ಪೂಜೆ ಸಲ್ಲಿಸಿದ ಯದುವೀರ್ ದಂಪತಿ

    ಹಾಸನ: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಬರೋಬ್ಬರಿ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಈಗ ನೆನಪು ಮಾತ್ರ. ಅರ್ಜುನನ ಗಾಂಭೀರ್ಯ ನಡೆ, ದೈತ್ಯ ಆಕಾರ, ಹೋರಾಟ ಮನೋಭಾವ, ಸಿಡುಕುತನ, ತುಂಟಾಟ ಎಲ್ಲವನ್ನೂ ನೆನೆದು ನಾಡಿನ ಜನತೆ ಕಣ್ಣೀರಿಡುತ್ತಿದ್ದಾರೆ. ಹಾಸನದ ಕಾಡಿನಲ್ಲಿ ಅರ್ಜುನನ ಸಮಾಧಿ ಮಾಡಲಾಗಿದ್ದು, ಗುರುವಾರ ಹುತಾತ್ಮ ಅರ್ಜುನನ ಸಮಾಧಿಗೆ ಮೈಸೂರಿನ ರಾಜಮನೆತನದ ಯದುವೀರ್ ಒಡೆಯರ್ ದಂಪತಿ ಪೂಜೆ ಸಲ್ಲಿಸಿದರು.

    ಅರ್ಜುನನ ಸಮಾಧಿಗೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿದ್ದರು. ಅರ್ಜುನನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಹಿನ್ನೆಲೆ ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ನೆಡುತೋಪಿನಲ್ಲಿರುವ ಅರ್ಜುನ ಸಮಾಧಿಗೆ ಭೇಟಿ ನೀಡಿದ್ದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ದಂಪತಿ ಪೂಜೆ ಮಾಡಿ ಅಂತಿಮ ನಮನ ಸಲ್ಲಿಸಿದ್ದಾರೆ.

    ಡಿಸೆಂಬರ್ 5 ರಂದು ಮೈಸೂರು ಅರಮನೆಯ ಪುರೋಹಿತರ ನೇತೃತ್ವದಲ್ಲಿ ಅರ್ಜುನನ ಅಂತ್ಯಕ್ರಿಯೆ ನೆರವೇರಿದ್ದು, ಈ ವೇಳೆ ಯದುವೀರ್ ಅವರು ಅರಮನೆಯಿಂದ ಪೂಜಾ ಸಾಮಗ್ರಿ, ಹಾರ, ಶಾಲು ಕೊಟ್ಟು ಕಳಿಸಿದ್ದರು. ಪೂಜೆಯ ಸಂದರ್ಭದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ ದಂಪತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಾಥ್​ ನೀಡಿದ್ದಾರೆ.

    ಮೈಸೂರು ರಾಜ ವಂಶಸ್ಥರ ಆಚರಣೆ ಹಾಗೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ದಸರಾದ 750 ಕೆ.ಜಿ. ತೂಕದ ಅಂಬಾರಿ ಹೊರಲು ಅರ್ಜುನ ಆನೆ ಬೇಕಿತ್ತು. ಆದರೆ ಕಾಡಾನೆ ಕಾರ್ಯಾಚರಣೆ ವೇಳೆ ಕಾದಾಟದಲ್ಲಿ ಸಾವನ್ನಪ್ಪಿದ ಅರ್ಜುನನ್ನು ನೋಡುವುದಕ್ಕೂ ರಾಜಮನೆತನದವರು ಬರಲಿಲ್ಲ. ಆನೆಗೆ ರಾಜಮನೆತನದಿಂದ ಕನಿಷ್ಠ ಗೌರವ ಸಿಗಲಿಲ್ಲ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು. ಏತನ್ಮಧ್ಯೆ ರಾಜ ಮನೆತನದ ಯದುವೀರ್ ದಂಪತಿಗಳು ಆನೆಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಗಲಿದ ‘ಅರ್ಜುನ’ ಸಾವಿನ ಬಗ್ಗೆ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ ಸಿದ್ದರಾಮಯ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts