More

    ಚಿಂಚೋಳಿ: ಲವ್ ಜಿಹಾದ್, ಮಾದಕ ವಸ್ತು ಮುಕ್ತ ಭಾರತ ನಿರ್ಮಿಸೋಣ- ಸೂಲಿಬೆಲೆ

    ಚಿಂಚೋಳಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್​ ಸರ್ಕಾರಕ್ಕೆ ಧೈರ್ಯವಿರಲಿಲ್ಲ. ರಾಮನ ಭವ್ಯ ದೇಗುಲ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬರಬೇಕಾಯಿತು. ರಾಮನ ಜನ್ಮಭೂಮಿಯಲ್ಲಿ ಭವ್ಯ ಮಂದಿರ ತಲೆ ಎತ್ತುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

    ಹಾರಕೂಡ ಮಠದಲ್ಲಿ ವಿಶ್ವ ಹಿಂದು ಪರಿಷತ್ ಭಾನುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೌರ್ಯ ಪ್ರದರ್ಶಿಸಿ ಸೇವೆಯೊಂದಿಗೆ ರಾಷ್ಟ್ರಕ್ಕಾಗಿ ಪಾಣ ತ್ಯಾಗ ಮಾಡಿದ ವೀರರ ಸ್ಮರಣೆಗಾಗಿ ವಿಎಚ್‌ಪಿ ಭಾರತದಲ್ಲಿ ಶೌರ್ಯ ಜಾಗರಣ ರಥಯಾತ್ರೆ ಹಮ್ಮಿಕೊಂಡಿದೆ. ನಮ್ಮ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆ ಉಳಿಸಬೇಕಿದೆ. ಯುವಕರು ಮಾದಕ ವಸ್ತುಗಳಿಂದ ದೂರವಿರಬೇಕು. ಲವ್ ಜಿಹಾದ್ ಮುಕ್ತ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ತಿಳಿಸಿದರು.

    ಬೆಂಗಳೂರಿನ ಕ್ಷತ್ರಿಯ ಮಠದ ವಯಂ ಧರ್ಮಚಾರ್ಯ ಸಂಪರ್ಕ ಪ್ರಮುಖ ವಕ್ತಾರ ಬಸವರಾಜ ಹಿರೇಮಠ ಮಾತನಾಡಿದ ಅವರು, ಭಾರತೀಯರದು ಶೌರ್ಯ ಮತ್ತು ಪರಾಕ್ರಮದ ಪರಂಪರೆ. ಹಿಂದು ಧರ್ಮ ಮತ್ತು ಭಾರತ ಮಾತೆಯ ರಕ್ಷಣೆಗಾಗಿ ಅಸಂಖ್ಯ ಜನರು ಪಾಣತ್ಯಾಗ ಮಾಡಿದ್ದಾರೆ. ಅವರನ್ನೆಲ್ಲ ನಾವು ಸದಾ ಸ್ಮರಿಸಬೇಕು, 80 ಸಾವಿರ ಗೋ ರಕ್ಷಣೆ, ಜಿಹಾದಿಗೆ ಒಳಗಾದ ಆರು ಸಾವಿರಕ್ಕೂ ಹೆಚ್ಚು ಹಿಂದು ಮಹಿಳೆಯರ ರಕ್ಷಣೆ ಹೀಗೆ, ವಿಶ್ವ ಹಿಂದು ಪರಿಷತ್‌ ಹಿಂದುತ್ವ ಉಳುವಿಗಾಗಿ ಶ್ರಮಿಸುತ್ತಿದೆ ಎಂದು ಮಾತನಾಡಿದರು.

    ಅಯೋಧ್ಯೆ ಕಾರ್ಯ ಸೇವಕರಾದ ಶ್ರೀದೇವಿ, ಅಶೋಕ ಪಾಟೀಲ್‌, ಭೀಮಶೆಟ್ಟಿ ಮುಕ್ಕಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ವಿಎಚ್‌ಪಿ ಜಿಲ್ಲಾ ಸಹಕಾರ್ಯದರ್ಶಿ ಮಹದೇವ ಅಂಗಡಿ, ಅಂಬೇಷ ಸೂಲೆಗಾಂವ ತಾಲೂಕು ಅಧ್ಯಕ್ಷ ಮಹೇಶ ಕಿವಣೂರಕರ್, ಬಜರಂಗದಳ ವಿಭಾಗೀಯ ಸಂಯೋಜಕ ಬಸವರಾಜ ಸೂಗೂರ, ಜಿಲ್ಲಾ ಸಂಯೋಜಕ ವಿರೇಂದ್ರ ಮುರುಡಾ, ಸಹ ಸಂಯೋಜಕ ಅಜಯಕುಮಾರ ಬಿದ್ರಿ, ಸುಲೇಪೇಟ ತೆಂಗಿನ ಮಠ ಸಿದ್ದರಾಮ ಮಹಾಸ್ವಾಮಿಗಳು, ಪ್ರಮುಖರಾದ ಗುರುರಾಜ ಜೋಶಿ, ಸಂಗೀತಾ ಪವಾರ, ನಂದಕುಮಾರ ಅವಂಟಗಿ, ಸಿದ್ದಯ್ಯ ಸ್ವಾಮಿ ಅಣವಾರ, ಕಿರಣ ಪಂಚಾಳ, ವಸಂತ ಇಟಗಿ, ಆನಂದ ಗೌಳಿ, ಮಲ್ಲಿಕಾರ್ಜುನ ಉಡಪಿ, ಘಟೋತಗಜಾ, ಶ್ರೀಹರಿ ಕಾಟಾಪೂರ, ಶ್ರೀಧರ ಪಾಟೀಲ್‌, ಭಾಸ್ಕರ್ ಕುಲಕರ್ಣಿ, ನ್ಯಾಯವಾದಿ ನೀಲಾ, ಕನ್ಯಾಕುಮಾರಿ ಮುರುಡಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts