More

    ಚೀನಾದ 1.45 ಕೋಟಿ ರೂ. ದೇಣಿಗೆ ಅಂಗವಿಕಲರ ಕಲ್ಯಾಣಕ್ಕೆ ಬಳಕೆ!

    ನವದೆಹಲಿ: ಚೀನಾದ ರಾಯಭಾರ ಕಚೇರಿ ರಾಜೀವ್​ ಗಾಂಧಿ ಪ್ರತಿಷ್ಠಾನಕ್ಕೆ ಕೊಟ್ಟ 1.45 ಕೋಟಿ ರೂಪಾಯಿ ದೇಣಿಗೆಯನ್ನು ಅಂಗವಿಕಲರ ಕಲ್ಯಾಣಕ್ಕೆ ಮತ್ತು ಭಾರತ-ಚೀನಾ ಸಂಬಂಧ ಕುರಿತ ಅಧ್ಯಯನಕ್ಕಾಗಿ ಬಳಸಲಾಗಿದೆ ಎಂದು ಎಐಸಿಸಿ ವಕ್ತಾರ ರಣದೀಪ್​ ಸಿಂಗ್​ ಸುರ್ಜೇವಾಲಾ ಶನಿವಾರ ಸ್ಪಷ್ಟಪಡಿಸಿದ್ದಾರೆ.

    ಲಡಾಖ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾದೊಂದಿಗೆ ಕಾಂಗ್ರೆಸ್​ ನಿಕಟ ಸಂಬಂಧ ಹೊಂದಿದೆ. ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಅಧ್ಯಯನ ನಡೆಸಿದ್ದಕ್ಕಾಗಿ 2005-06ನೇ ಸಾಲಿನಲ್ಲಿ ಚೀನಾ ರಾಯಭಾರ ಕಚೇರಿ ಸೋನಿಯಾ ಗಾಂಧಿ ಅಧ್ಯಕ್ಷತೆಯ ರಾಜೀವ್​ ಗಾಂಧಿ ಪ್ರತಿಷ್ಠಾನಕ್ಕೆ ಭಾರಿ ಮೊತ್ತದ ದೇಣಿಗೆ ನೀಡಿತ್ತು. ಅಲ್ಲದೆ, ಪ್ರಧಾನಿ ಪರಿಹಾರ ನಿಧಿಯಿಂದ ಭಾರಿ ಮೊತ್ತವನ್ನು ರಾಜೀವ್​ ಗಾಂಧಿ ಪ್ರತಿಷ್ಠಾನಕ್ಕೆ ವರ್ಗಾಯಿಸಲಾಗಿತ್ತು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದರು. ಈ ಆರೋಪಗಳಿಗೆ ಸುರ್ಜೇವಾಲಾ ಸ್ಪಷ್ಟನೆ ನೀಡಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ ನಾಯಕ ಅಹ್ಮದ್​ ಪಟೇಲ್​ ನಿವಾಸದ ಮೇಲೆ ಇ.ಡಿ.ರೇಡ್​​; ಅಧಿಕಾರಿಗಳಿಂದ ವಿಚಾರಣೆ

    ಪ್ರಧಾನಿ ಪರಿಹಾರ ನಿಧಿಯಿಂದ ವರ್ಗಾವಣೆ ಆಗಿದ್ದ 20 ಲಕ್ಷ ರೂ.ಗಳನ್ನು ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪ ಸಮೂಹದಲ್ಲಿನ ಸುನಾಮಿ ಪರಿಹಾರ ಕಾರ್ಯಗಳಿಗಾಗಿ ಬಳಸಲಾಗಿದೆ ಎಂದು ತಿಳಿಸಿದರು.

    ರಾಜೀವ್​ ಗಾಂಧಿ ಪ್ರತಿಷ್ಠಾನಕ್ಕೆ ಬಂದ ದೇಣಿಗೆಯ ಪ್ರತಿಯೊಂದು ಪೈಸೆಗೂ ಲೆಕ್ಕ ಕೊಡಲಾಗಿದೆ. ವಿದೇಶಿ ವಿನಿಯಮ ಕಾಯ್ದಯನ್ವಯ ದೇಣಿಗೆ ವಿವರಗಳನ್ನು ಸಲ್ಲಿಸಲಾಗಿದೆ. ಅಲ್ಲದೆ, ಸಲ್ಲಿಸಲಾದ ಆದಾಯ ತೆರಿಗೆ ವಿವರಗಳಲ್ಲೂ ಇದನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

    ಇಷ್ಟದ ತಿಂಡಿ, ಜಿಟಿಜಿಟಿ ಮಳೆ ಮತ್ತು ಕಲ್ಪನಾ; ನಟಿ ಹರಿಪ್ರಿಯಾ ಬಾಲ್ಯ ಹೀಗಿತ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts