More

    ವಿದೇಶ ನೀತಿ ವಿಫಲವಾಗಿರುವುದಕ್ಕೆ ಚೀನಾ ದಾಳಿ ಸಾಕ್ಷಿಯಂತೆ !

    ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ಚೀನಾ ದಾಳಿಯನ್ನು ಮುಂದಿಟ್ಟುಕೊಂಡು ಸರ್ಕಾರದ ವಿದೇಶ ನೀತಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

    ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ನಮ್ಮ ಆತ್ಮೀಯರಾಗಿದ್ದ ನೆರೆಯ ಸ್ನೇಹಿತರ ಜತೆಗಿನ ಸಂಬಂಧ ಈಗ ಮೊಟಕುಗೊಂಡಿದೆ. ಸಂಕಷ್ಟ ಕಾಲದಲ್ಲಿ ಸಾಂಪ್ರದಾಯಿಕ ಮಿತ್ರರ ಜತೆಗಿನ ಸಂಬಂಧ ಪರೀಕ್ಷೆಗೆ ಒಡ್ಡಲ್ಪಟ್ಟಿದೆ. ಮೋದಿ ಸರ್ಕಾರದ ವಿದೇಶ ನೀತಿ ಸಂಪೂರ್ಣ ವಿಫಲವಾಗಿದೆ. ಪ್ರಜಾಪ್ರಭುತ್ವದ, ರಾಜತಾಂತ್ರಿಕತೆಯ ಸಾಂಸ್ಥಿಕ ರಚನೆಯನ್ನೇ ಪ್ರಧಾನಮಂತ್ರಿ ನಾಶ ಮಾಡಿದ್ದಾರೆ.

    ಇದನ್ನೂ ಓದಿ: ಗಡಿ ಪರಿಸ್ಥಿತಿ ಕುರಿತು ಕೇಂದ್ರ ತಪ್ಪು ಮಾಹಿತಿ ನೀಡಿದೆ ಎಂದ ಮನಮೋಹನ್ ಸಿಂಗ್

    ಚೀನಾ ಲಜ್ಜೆಗೇಡಿತನದ ವರ್ತನೆ ತೋರಿದ್ದು ನಮ್ಮ ಭೂಭಾಗವನ್ನು ಅತಿಕ್ರಮಿಸಿದೆ. ನಮ್ಮ ಭೂಭಾಗ ಕಳೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ್ದಾರೆ. ಚೀನಾದವರು ಅತಿಕ್ರಮಿಸಿದ ಜಾಗ ಅವರದ್ದು ಎನ್ನುವಂತೆ ಬಿಟ್ಟುಕೊಟ್ಟು ಸೇನೆಯನ್ನೂ ಪ್ರಧಾನಿ ವಂಚಿಸಿದ್ದಾರೆ ಎಂದು ಟೀಕಿಸಿದ ರಾಹುಲ್ ಗಾಂಧಿ, ಚೀನಾದವರ ಅತಿಕ್ರಮಣವನ್ನು ಒಪ್ಪಿಕೊಳ್ಳಲಾಗದು. ಹುತಾತ್ಮರಾದ ಯೋಧರ ಶ್ರಮ ವ್ಯರ್ಥವಾಗಬಾರದು ಎಂದು ಹೇಳಿದರು. (ಏಜೆನ್ಸೀಸ್)

    ಗಾಲ್ವಾನ್ ಸಂಘರ್ಷಕ್ಕೆ ಚೀನಾದಲ್ಲಿ ಆದೇಶ ನೀಡಿದವರು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts